ಬೆಂಗಳೂರು: ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಹೋಪ್ ಜುಲೈ 8ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಸಚಿವ ಅಶ್ವತ್ಥ್ ನಾರಾಯಣ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಬಳಿಕ ಮಾತನಾಡಿದ ಸಚಿವರು, "ಬಹಳ ಒಳ್ಳೆಯ ವಿಷಯ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದಾರೆ. ವರ್ಗಾವಣೆ ಸರ್ಕಾರದ ಮುಖ್ಯ ಬಾಧೆ. ನಾವು ಅದರಲ್ಲೇ ಮುಳುಗಿರುವವರು. ಅದನ್ನು ತುಂಬಾ ಅರ್ಥ ಮಾಡಿಕೊಂಡಿದ್ದೇವೆ. ವರ್ಗಾವಣೆ ಎನ್ನುವುದು ಪಿಡುಗು, ಅದೊಂದು ಚಾಲೆಂಜ್. ಹೀಗಾಗಿ ಇದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿರುವುದು ಶ್ಲಾಘನೀಯ" ಎಂದರು.
ನಿರ್ಮಾಪಕಿ ವರ್ಷಾ ಸಂಜೀವ್ ಮಾತನಾಡಿ, "ಕೋವಿಡ್ ಟೈಂನಲ್ಲಿಯೂ ಕಲಾವಿದರು ಕೆಲಸ ಮಾಡಿದ್ದಾರೆ. ಒಳ್ಳೆಯ ಔಟ್ಪುಟ್ ಬಂದಿದೆ. ರಾಜಕೀಯ ಒತ್ತಡದಿಂದ ವರ್ಗಾವಣೆ ಹೇಗೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ" ಎಂದು ತಿಳಿಸಿದರು.
ಶ್ವೇತಾ ಶ್ರೀವಾಸ್ತವ್ ಮಾತನಾಡಿ, "ಏಳು ವರ್ಷದ ನಂತರ ಎಲ್ಲರೂ ಭೇಟಿಯಾಗುತ್ತಿರುವುದು ಖುಷಿ ಕೊಟ್ಟಿದೆ. ವೈಯಕ್ತಿಕವಾಗಿ ಈ ಕಥೆ ಕನೆಕ್ಟ್ ಆಯ್ತು. ಸಮಾಜವನ್ನು ಕಣ್ತೆರೆಸುವ ಕಥೆ ಇದು ಎಂದು ತಿಳಿಸಿದರು.
ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.
ಜಲ್ವಂತ ಸಿನಿಮಾ ನಿರ್ದೇಶಿಸಿದ್ದ ಅಂಬರೀಶ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಎಸ್.ಹಲ್ಲೇಶ್ ಕ್ಯಾಮರಾ ಕೆಲಸವಿದೆ. ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: 'ಪ್ರೀತಿ ಹೃದಯದಲ್ಲಿರಲಿ, ಬಾಯಲ್ಲಲ್ಲ': ಅಪ್ಪು ಅಭಿಮಾನಿಗಳಿಗೆ ಶಿವಣ್ಣನ ಕಿವಿಮಾತು