ಶಕ್ತಿಧಾಮದಲ್ಲಿದ್ದ ಶಿವರಾಜ್ ಕುಮಾರ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡ ಚಿತ್ರರಂಗದಲ್ಲಿ ವಯಸ್ಸು 59 ಆದರೂ ಇವತ್ತಿಗೂ ಚಿರ ಯುವಕನಂತೆ ಕಾಣುವ ಹ್ಯಾಟ್ರಿಕ್ ಹೀರೋ ಅನಾರೋಗ್ಯ ವಿಚಾರ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿತ್ತು.
ಶಿವರಾಜ್ ಕುಮಾರ್ ಆಪ್ತರು ಹೇಳುವ ಪ್ರಕಾರ ಶಿವರಾಜ್ ಕುಮಾರ್ಗೆ ಜ್ವರ ಹಾಗೂ ಮೈ-ಕೈ ನೋವು ಕಾಣಿಸಿಕೊಂಡಿತ್ತಂತೆ. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಹೋಗಿ ಜನರಲ್ ಚೆಕ್ಅಪ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ಚಿಕಿತ್ಸೆ ಪಡೆದ ನಂತರ ಶಿವರಾಜ್ ಕುಮಾರ್ ಮತ್ತೆ ಶಕ್ತಿಧಾಮಕ್ಕೆ ವಾಪಸ್ ಬಂದಿದ್ದಾರೆ.
ಸಿನಿಮಾದ ಜೊತೆಗೆ ಮೈಸೂರಿನ ಶಕ್ತಿಧಾಮದ ಜವಾಬ್ದಾರಿ ವಹಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ, ಪತ್ನಿ ಗೀತಾ ಜೊತೆ ಶಕ್ತಿಧಾಮದ ಮಕ್ಕಳ ಹಾಗೂ ಶಕ್ತಿಧಾಮ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆ ಶಿವರಾಜ್ ಕುಮಾರ್ ಬೇಸರ ಹೊರ ಹಾಕಿದ್ದರು ಎಂಬ ಬಗ್ಗೆ ಆಪ್ತ ಮೂಲಗಳು ತಿಳಿಸಿವೆ.