ಗಾಳಿಪಟ 2 ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಬೇಜಾನ್ ಟಾಕ್ ಆಗುತ್ತಿರುವ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿ ಅಭಿನಯಿಸಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರ ನಿರ್ಮಾಣದ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ವಿತರಕರಾದ ಕೆ.ವಿ.ಎನ್ ವೆಂಕಟ್, ಸುಪ್ರೀತ್, ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನಟ ಶ್ರೇಯಸ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_713.jpg)
ಮೊದಲಿಗೆ ಮಾತನಾಡಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಟ್ರೇಲರ್ ಸಖತಾಗಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಶನ್ ಮತ್ತೊಮ್ಮೆ ಮೋಡಿ ಮಾಡಲಿದೆ. ದಿಗಂತ್, ಪವನ್ ಹಾಗೂ ನಾಯಕಿಯರು ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಪವನ್ ತುಂಬಾ ಕ್ಯೂಟಾಗಿ ಕಾಣುತ್ತಾರೆ.
ಅರ್ಜುನ್ ಜನ್ಯ ಸಂಗೀತ ಸೊಗಸಾಗಿದೆ. ನನಗೆ ಅವರನ್ನು ನೋಡಿದಾಗ ಎ.ಆರ್. ರೆಹಮಾನ್ ನೆನಪಾಗುತ್ತಾರೆ. ಮುಂದೆ ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ‘45’ ಚಿತ್ರದ ನಾಯಕನಾಗಿ ನಾನು ನಟಿಸುತ್ತಿದ್ದೇನೆ. ರಮೇಶ್ ರೆಡ್ಡಿ ಅವರೆ ಆ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಗಾಳಿಪಟ 2’ ಭರ್ಜರಿ ಯಶಸ್ಸು ಕಾಣಲಿ ಎಂದರು.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_930.jpg)
ಈ ಚಿತ್ರದ ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಇದಾಗಲಿದೆ. ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ ‘ಗಾಳಿಪಟ’ ಯಶಸ್ಸು ಕಂಡಿತ್ತು. ‘ಗಾಳಿಪಟ 2’ ಸಹ ಹಾಡುಗಳ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಭರ್ಜರಿ ಗೆಲವು ಕಾಣಲಿದೆ ಎಂದು ರಮೇಶ್ ಅರವಿಂದ್ ಹಾರೈಸಿದರು.
ಎಲ್ಲರೂ ಮಾತನಾಡಿದ್ದಾರೆ. ನಾನು ಇನ್ನೇನು ಹೇಳುವುದಿದೆ. ಯೋಗರಾಜ್ ಭಟ್ಟರು ನಿರ್ದೇಶಕರಾಗಿ, ಗೀತರಚನೆಕಾರರಾಗಿ ಹಾಗೂ ಸಂಭಾಷಣೆಕಾರರಾಗೂ ಜನಪ್ರಿಯ. ಅದಕ್ಕೆ ಈ ಚಿತ್ರದ ಟ್ರೇಲರ್ ಸಾಕ್ಷಿ. ಒಳ್ಳೆಯ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರ ಸಮಾಗಮದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರಚಂಡ ಯಶಸ್ಸು ಕಾಣಲಿ ಎಂದರು ರಿಯಲ್ ಸ್ಟಾರ್ ಉಪೇಂದ್ರ.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_930.jpg)
ನನ್ನ ಹಾಗೂ ಭಟ್ಟರ ಕಾಂಬಿನೇಶನ್ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಾನು ಯಾವತ್ತೂ ಯಾವ ಚಿತ್ರದ ಕುರಿತು ಅವರಿಗೆ ಫೋನ್ ಮಾಡಿರಲಿಲ್ಲ. ಆದರೆ, ಈ ಚಿತ್ರದ ಡಬ್ಬಿಂಗ್ ಆದ ಮೇಲೆ ಫೋನ್ ಮಾಡಿ ಅದ್ಭುತ ಚಿತ್ರ ಮಾಡಿದ್ದೀರಾ ಅಂತ ಹೇಳಿ ಅಭಿನಂದನೆಗಳನ್ನು ತಿಳಿಸಿದೆ. ನಿಜಕ್ಕೂ ‘ಗಾಳಿಪಟ 2’ ತುಂಬಾ ಚೆನ್ನಾಗಿದೆ. ನೀವೆಲ್ಲಾ ನೋಡಿ ಹಾರೈಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_937.jpg)
ರಸ್ತೆಯಲ್ಲಿ ಸಿಗುವ ಸಂಬಂಧ ರಕ್ತ ಸಂಬಂಧಕ್ಕಿಂತ ಹೆಚ್ಚು ಎಂದು ನಂಬಿರುವವನು ನಾನು. ಆ ಸ್ನೇಹದಿಂದಲೇ ಹದಿನಾಲ್ಕು ವರ್ಷಗಳ ಹಿಂದೆ ‘ಗಾಳಿಪಟ’ ಚಿತ್ರ ನಿರ್ಮಾಣವಾಯಿತು. ಈಗ ‘ಗಾಳಿಪಟ 2’ ಸಹ ಅದೇ ಸ್ನೇಹದಿಂದ ನಿರ್ಮಾಣವಾಗಿದೆ. ಕರ್ನಾಟಕದ ಎಲ್ಲ ಸ್ನೇಹಿತರು ಆಗಸ್ಟ್ 12ರಂದು ಬಿಡುಗಡೆಯಾಗುತ್ತಿರುವ ನಮ್ಮ ‘ಗಾಳಿಪಟ 2’ ಚಿತ್ರವನ್ನು ನೋಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು ನಿರ್ದೇಶಕ ಯೋಗರಾಜ್ ಭಟ್.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_49.jpg)
ಯೋಗರಾಜ್ ಭಟ್ ಒಳ್ಳೆಯ ಚಿತ್ರ ಮಾಡಿ ಕೊಟ್ಟಿದ್ದಾರೆ. ಈ ಚಿತ್ರ ಇಷ್ಟು ಚೆನ್ನಾಗಿ ಬರಲು ಚಿತ್ರತಂಡ ತುಂಬಾ ಶ್ರಮಪಟ್ಟಿದೆ. ಎಲ್ಲರಿಗೂ ನನ್ನ ಧನ್ಯವಾದ. ನಮ್ಮ ಸಮಾರಂಭಕ್ಕೆ ಶಿವಣ್ಣ, ಉಪೇಂದ್ರ ಹಾಗೂ ರಮೇಶ್ ಸರ್ ಬಂದಿರುವುದು ನನಗೆ ತುಂಬಾ ಸಂತಸ ತಂದಿದೆ. ಇವರನ್ನೆಲ್ಲ ನೋಡಿ ನಾನು ‘ಗಾಳಿಪಟ 2’ ಚಿತ್ರವನ್ನು ಮರೆತು ಬಿಟ್ಟಿದ್ದೆ. ನಮ್ಮ ಚಿತ್ರಕ್ಕೆ ಹಾರೈಸಲು ಬಂದಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಹೇಳಿದರು.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_68.jpg)
ಚಿತ್ರದಲ್ಲಿ ಅಭಿನಯಿಸಿರುವ ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ನಿಶ್ವಿಕಾ, ವೈಭವಿ, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಅರ್ಜುನ್ ಜನ್ಯ ಸಂಗೀತದ ಬಗ್ಗೆ , ಸಂತೋಷ್ ರೈ ಪಾತಾಜೆ ಛಾಯಾಗ್ರಹಣದ ಕುರಿತು ಹಾಗೂ ಧನು ಮಾಸ್ಟರ್ ನೃತ್ಯ ನಿರ್ದೇಶನದ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡರು.
![Galipata 2 movie pre release event in Bengaluru, Shivaraj Kumar Upendra and Ramesh attend to Galipata 2 pre release event, Galipata 2 movie release date, Galipata 2 movie songs, ಬೆಂಗಳೂರಿನಲ್ಲಿ ಗಾಳಿಪಟ 2 ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ, ಗಾಳಿಪಟ 2 ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಉಪೇಂದ್ರ ಮತ್ತು ರಮೇಶ್ ಭಾಗಿ, ಗಾಳಿಪಟ 2 ಚಿತ್ರದ ಬಿಡುಗಡೆ ದಿನಾಂಕ, ಗಾಳಿಪಟ 2 ಚಿತ್ರದ ಹಾಡುಗಳು,](https://etvbharatimages.akamaized.net/etvbharat/prod-images/kn-bng-06-ganesh-gaalipatta2-cinemage-sathu-kotta-shivanna-upendra-ramesharavind-7204735_01082022232509_0108f_1659376509_528.jpg)
ಓದಿ: 'ನಾನು ನಗಿಸ್ತಾ ಇರ್ತೀನಿ ಯಾವತ್ತೂ ಅಳೊಲ್ಲ' ಅಂತಿದ್ದಾರೆ ಗೋಲ್ಡನ್ ಸ್ಟಾರ್: ಗಾಳಿಪಟ 2 ಚಿತ್ರದ ಟ್ರೈಲರ್ ಲಾಂಚ್