ETV Bharat / entertainment

ಅಭಿನಯ ಚಕ್ರವರ್ತಿಯ ಬರ್ತ್​ಡೇಗೆ ಸರ್ ಪ್ರೈಸ್ ಕೊಟ್ಟ ಕರುನಾಡ ಚಕ್ರವರ್ತಿ

author img

By

Published : Sep 2, 2022, 8:46 PM IST

ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಸುದೀಪ್ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟು ಹಬ್ಬವನ್ನ ಸೆಲೆಬ್ರೇಟ್​ ಮಾಡಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬ
ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬ

ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ತಾರೆಯರು ತಮ್ಮ ಹುಟ್ಟು ಹಬ್ಬವನ್ನ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿರಲಿಲ್ಲ. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ವರ್ಷ ಅಭಿಮಾನಿಗಳಿಗೆ ನಿರಾಸೆ ಮಾಡದೇ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬದವರೊಂದಿಗೆ ನಟ ಶಿವರಾಜ್​ಕುಮಾರ್ ಇದ್ದಾರೆ

ಸುದೀಪ್ ಹುಟ್ಟುಹಬ್ಬ ಸಂಭ್ರಮ: ಜೆ ಪಿ ನಗರದ ಸುದೀಪ್ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳು ಬಂದು ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರರಂಗದ ಸಾಕಷ್ಟು ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್​ ಅವರಿಗೆ ಬರ್ತ್ ಡೇ ಶುಭಾಶಯ​ ಹೇಳಿದ್ದಾರೆ. ಆದರೆ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಜೆ. ಪಿ ನಗರದ ಸುದೀಪ್ ನಿವಾಸಕ್ಕೆ ತೆರೆಳಿ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಅವರ ಬರ್ತ್​ಡೇ ಸಂಭ್ರಮ

ನಟ ಸುದೀಪ್​ ಜನ್ಮದಿನ​ : ಹೌದು, ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಟ ಸುದೀಪ್ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟು ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ತಂದೆ, ತಾಯಿ ಹಾಗೂ ಪತ್ನಿ ಪ್ರಿಯಾ ಸುದೀಪ್, ನಿರ್ಮಾಪಕರಾದ ಕೆ. ಪಿ ಶ್ರೀಕಾಂತ್ ಹಾಗೂ ಜಾಕ್ ಮಂಜು ಉಪಸ್ಥಿತಿ ಇದ್ದರು.

ನಟ-ನಟಿಯರಿಗೆ ಮಾದರಿ: ಇನ್ನು ಶಿವರಾಜ್ ಕುಮಾರ್ ಸರ್​ಪ್ರೈಸ್​ ಎಂಟ್ರಿಗೆ ಸ್ವತಃ ಸುದೀಪ್ ಅವರು ಕೂಡ ಥ್ರಿಲ್ ಆಗಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಶಿವರಾಜ್ ಕುಮಾರ್ ಸುದೀಪ್ ಜೊತೆ ಅವರ ಮನೆಯಲ್ಲಿ ಕಾಲ ಕಳೆದಿದ್ದಾರೆ. ಇನ್ನು ಶಿವರಾಜ್ ಕುಮಾರ್ ಅವರ ಸಹೋದರ ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಚಿತ್ರರಂಗದಲ್ಲಿರುವ ಎಲ್ಲ ನಟರನ್ನ ಸಹೋದರ ಭಾವದಿಂದ ಕಾಣುತ್ತಿದ್ದಾರೆ. ಹೀಗಾಗಿ, ಕರುನಾಡ ಚಕ್ರವರ್ತಿ ಅಭಿನಯ ಚಕ್ರವರ್ತಿಯ ಹುಟ್ಟು ಹಬ್ಬವನ್ನ ಆಚರಿಸಿರೋದು ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟ, ನಟಿಯರಿಗೆ ಮಾದರಿ ಆಗಿದೆ.

ಓದಿ: ನಿರೂಪಕ ಅಕುಲ್ ಬಾಲಾಜಿಗೆ ಲಕ್ಷ ಬೆಲೆ ಬಾಳುವ ಬೈಕ್​ ಗಿಫ್ಟ್ ಕೊಟ್ಟ ವಿಕ್ರಾಂತ್ ರೋಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.