ETV Bharat / entertainment

ನಿಖಿಲ್​ ಕುಮಾರ್​ಸ್ವಾಮಿ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ - shiva rajkumar latest news

ನಿಖಿಲ್​ ಕುಮಾರ್​ಸ್ವಾಮಿ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಶೂಟಿಂಗ್​ ಸೆಟ್​ಗೆ ಶಿವ ರಾಜ್​ಕುಮಾರ್​ ದಂಪತಿ ಭೇಟಿ ಕೊಟ್ಟಿದ್ದಾರೆ.

shiva rajkumar visits nikhil kumarswamy's shooting set
ನಿಖಿಲ್​ ಕುಮಾರ್​ಸ್ವಾಮಿ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟ ಶಿವರಾಜ್​ಕುಮಾರ್​ ದಂಪತಿ
author img

By ETV Bharat Karnataka Team

Published : Sep 16, 2023, 11:56 AM IST

ನಿಖಿಲ್​ ಕುಮಾರ್​ಸ್ವಾಮಿ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟ ಶಿವರಾಜ್​ಕುಮಾರ್​ ದಂಪತಿ

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವ ರಾಜ್​​​ಕುಮಾರ್ ಅಮೆರಿಕ ಪ್ರವಾಸ ಮುಗಿಸಿ ಇತ್ತೀಚೆಗಷ್ಟೇ ಕರುನಾಡಿಗೆ ವಾಪಸ್​ ಆಗಿದ್ದಾರೆ. ವಿದೇಶದಿಂದ ಬಂದ ಬಳಿಕ ಕರುನಾಡ ಚಕ್ರವರ್ತಿ, ನಟ ನಿಖಿಲ್ ಕುಮಾರ್​ಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟ ನಿಖಿಲ್ ಕುಮಾರ್​ಸ್ವಾಮಿ ಅವರ ಹೊಸ ಸಿನಿಮಾದ ಚಿತ್ರೀಕರಣ ನೆಡೆಯುತ್ತಿದ್ದು, ಶೂಟಿಂಗ್​​ ಸೆಟ್​​ಗೆ ಶಿವ ರಾಜ್​​ಕುಮಾರ್ ಹಾಗೂ ಗೀತಾ ಶಿವ ರಾಜ್​​ಕುಮಾರ್ ಭೇಟಿ ಕೊಟ್ಟಿದ್ದಾರೆ.

ನಿಖಿಲ್ - ಶಿವಣ್ಣ ಭೇಟಿ: ಬಹಳ ದಿನಗಳ ನಂತರ ನಿಖಿಲ್ ಹಾಗೂ ಶಿವಣ್ಣ ಭೇಟಿ ಮಾಡಿದ್ದು, ಒಟ್ಟಿಗೆ ಒಂದಿಷ್ಟು ಸಮಯ ಕಳೆದಿದ್ದಾರೆ. ಸಿನಿಮಾ ವಿಚಾರ ಹೊರತುಪಡಿಸಿ ಕೆಲ ವೈಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಮಾತುಕತೆ ನಡೆಸಿದ್ದಾರೆ. ಇದೇ ಸಮಯದಲ್ಲಿ ಲೈಕಾ ಸಂಸ್ಥೆ ನಿರ್ಮಾಣ ಮಾಡ್ತಿರೋ ಸಿನಿಮಾ ಬಗ್ಗೆಯೂ ಶಿವಣ್ಣ ಮಾಹಿತಿ ಪಡೆದುಕೊಂಡಿದ್ದಾರೆ.

shiva rajkumar visits nikhil kumarswamy's shooting set
ನಿಖಿಲ್​ ಕುಮಾರ್​ಸ್ವಾಮಿ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​

ನಿಖಿಲ್ ನಟನೆಯ ಹೊಸ ಸಿನಿಮಾದ ಚಿತ್ರೀಕರಣ ಹಳೇ ಕಟ್ಟಡ ಒಂದರ ಮೂರನೇ ಮಹಡಿಯಲ್ಲಿ ನಡೆಯುತ್ತಿದೆ. ಲಿಫ್ಟ್ ಇಲ್ಲದ ಕಾರಣ ನಟ ಶಿವ ರಾಜ್​​ಕುಮಾರ್ ಹಾಗೂ ಗೀತಾ ಶಿವ ರಾಜ್​ಕುಮಾರ್ ದಂಪತಿ ಮೆಟ್ಟಿಲು ಹತ್ತಿಕೊಂಡೇ ಹೋಗಿ ನಿಖಿಲ್ ಅವರನ್ನು ಭೇಟಿ ಮಾಡಿದ್ದಾರೆ. ಬಿಗ್​ ಬಜೆಟ್​ನ ಹೊಸ ಸಿನಿಮಾಗೆ ಶುಭಕೋರಿದ್ದಾರೆ.

ಪ್ರೀತಿಯಿಂದ ತಮ್ಮನ್ನು ನೋಡಲು ಬಂದ ಶಿವಣ್ಣ ಹಾಗೂ ಗೀತಾ ದಂಪತಿಯನ್ನು ಮಾತನಾಡಿಸಿದ ನಿಖಿಲ್, ಕೊನೆಗೆ ಕಾರ್​ವರೆಗೂ ಹೋಗಿ ಸ್ಟಾರ್​ ದಂಪತಿಯನ್ನು ಬೀಳ್ಕೊಟ್ಟರು. ಅಣ್ಣಾವ್ರ ಕುಟುಂಬ ಹಾಗೂ ದೊಡ್ಡಗೌಡರ ಕುಟುಂಬದ ಅನ್ಯೋನ್ಯತೆ ಈಗಿನದ್ದಲ್ಲ. ಬಹಳ ಹಿಂದಿನಿಂದಲೂ ಅನ್ಯೋನ್ಯವಾಗಿದ್ದಾರೆ. ಅದರಲ್ಲೂ ದಿ. ಪುನೀತ್ ರಾಜ್​ಕುಮಾರ್ ಅವರಿಗೆ ನಿಖಿಲ್ ಅವರ ಡೆಡಿಕೇಷನ್ ಬಗ್ಗೆ ತುಂಬಾನೇ ಪ್ರೀತಿ ಇತ್ತು. ಇದೀಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಆಗಿದ್ದು, ಎರಡೂ ಕುಟುಂಬದ ಬಾಂಧವ್ಯವನ್ನ ನೆನಪಿಸುತ್ತಿದೆ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಖ್ಯಾತನಾಮರು - ರಿಷಬ್​, ರಕ್ಷಿತ್, ಯಶ್​​​​​ ಸೇರಿ ಹಲವರಿಗೆ ಒಲಿದ ಸೈಮಾ

ನಟ ನಿಖಿಲ್ ಕುಮಾರಸ್ವಾಮಿ ಅಭಿನಯ ಮಾಡುತ್ತಿರುವ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರಕ್ಕೆ ಲಕ್ಷ್ಮಣ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಶುರುವಾಗಿದೆ. ಚಿತ್ರದಲ್ಲಿ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: Siima 2023: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದ ಸುಮಧುರ ಕ್ಷಣಗಳು!

ಇನ್ನೂ ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ದುನಿಯಾ ವಿಜಯ್, ಸುದೀಪ್ ಅವರಂತಹ ಸ್ಟಾರ್ ನಟರ ಚಿತ್ರಗಳ ಶೂಟಿಂಗ್ ಸ್ಪಾಟ್​​ಗೆ ಭೇಟಿ ಕೊಟ್ಟಿದ್ದರು. ಇದೀಗ ನಿಖಿಲ್​ ಕುಮಾರ್​ಸ್ವಾಮಿ ನಟನೆಯ ಬಹುನಿರೀಕ್ಷಿತ ಚಿತ್ರದ ಶೂಟಿಂಗ್​​ ಸೆಟ್​ಗೆ ಸರ್​​​ಪ್ರೈಸ್​ ಭೇಟಿ ಕೊಟ್ಟು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.