ಹುಬ್ಬಳ್ಳಿ (ಧಾರವಾಡ): ವೇದ ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಕೂಡಾ ಇದೆ. ವೇದ ಎಂದರೆ ಗ್ರಂಥ. ಈ 'ವೇದ'ದಲ್ಲಿ ಪ್ರೀತಿ, ಬಾಳು, ಸಂತೋಷ ಹಾಗೂ ನಂಬಿಕೆ ಎನ್ನುವುದು ಇದೆ ಎಂದು ನಟ ಶಿವ ರಾಜ್ಕುಮಾರ್ ಹೇಳಿದರು.
ನಗರದಲ್ಲಿಂದು ವೇದ ಸಿನಿಮಾ ಪ್ರೀ ರಿಲೀಸ್ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ ನಮಗೆ ಲಕ್ಕಿ ಪ್ಲೇಸ್. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮೂವಿಗಳಾಗುತ್ತಿರುವುದು ಸಂತೋಷ. ಕಾಂತಾರ ಹಾಗೂ ಕೆಜಿಎಫ್ ಇಷ್ಟೊಂದು ದೊಡ್ಡ ಮಟ್ಟಿಗೆ ಹಿಟ್ ಆಗುತ್ತೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆ ರೀತಿಯ ಡಿಫ್ರೆಂಟ್ ಸಿನಿಮಾಗಳನ್ನು ಮಾಡಬೇಕು ಎಂದು ಬೆನ್ನು ತಟ್ಟಿದರು.
ನಟಿ ರಶ್ಮಿಕಾ ಮಂದಣ್ಣರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ. ಸಿನಿಮಾ ಓಡುವ ಬಗ್ಗೆ ಮಾತ್ರ ನಾನು ನೊಡ್ತೇನೆ. ಬೇರೆ ವಿಷಯದ ಬಗ್ಗೆ ಮಾತನಾಡಲ್ಲ. ವೇದ ಚಿತ್ರವನ್ನು ಸದ್ಯ ತೆಲುಗು, ತಮಿಳಿಗೆ ಡಬ್ ಮಾಡಿದ್ದೇವೆ. ಡಬ್ಬಿಂಗ್‌ಗೆ ಈಗ ನಮ್ಮ ವಿರೋಧವಿಲ್ಲ. ಡಬ್ಬಿಂಗ್‌ನಿಂದ ನಮಗೆ ಲಾಭವಿದೆ. ಸದ್ಯಕ್ಕೆ ಕನ್ನಡ ಚಿತ್ರಗಳ ಬೆಳವಣಿಗೆ ಡಬ್ಬಿಂಗ್ ಪೂರಕವಾಗಿದೆ ಎಂದರು.
ಇದನ್ನೂ ಓದಿ: ನೋಡಿ ''ಅಭಿ - ಅವಿವಾ'' ನಿಶ್ಚಿತಾರ್ಥದ ವಿಡಿಯೋ
ಮಹದಾಯಿಗೆ ನಮ್ಮ ಬೆಂಬಲ ಯಾವತ್ತೂ ಇರುತ್ತದೆ. ಯೋಜನೆಯನ್ನು ಈಗಿರುವ ವ್ಯವಸ್ಥೆ, ಸರ್ಕಾರ ಜಾರಿಗೆ ತರಬೇಕು. ಸರ್ಕಾರ ಆದಷ್ಟು ಬೇಗ ಯೋಜನೆ ಜಾರಿ ಮಾಡಲಿ ಅನ್ನೋದು ನಮ್ಮ ಆಶಯ ಎಂದರು. ಇನ್ನು ನಾನು ರಾಜಕೀಯಕ್ಕೆ ಬರಲ್ಲ. ಗೀತಾ ಕೂಡ ಚುನಾವಣೆಗೆ ಸ್ಪರ್ಧಿಸಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ನನ್ನ ಮುಂದಿನ ಸಿನಿಮಾ ಕೇಡಿ ಎಂದು ಮಾಹಿತಿ ನೀಡಿದರು.
ಸಿದ್ದಾರೂಢ ಮಠಕ್ಕೆ ಭೇಟಿ: ಡಾ. ರಾಜಕುಮಾರ್ ಕುಟುಂಬ ಹುಬ್ಬಳ್ಳಿಗೆ ಆಗಮಿಸಿದ್ರೆ ಶ್ರೀ ಸಿದ್ದಾರೂಢಮಠಕ್ಕೆ ಭೇಟಿ ನೀಡುವ ಸಂಪ್ರದಾಯವಿದೆ. ಅದರಂತೆ ಶಿವ ರಾಜ್ಕುಮಾರ್ ಹಾಗೂ ಪತ್ನಿ ಗೀತಾ ಶಿವ ರಾಜ್ಕುಮಾರ್ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದಕೊಂಡರು.