ಕನ್ನಡ ಚಿತ್ರರಂಗದ ಹೆಸರಾಂತ ನಟ ಯಶ್ ಜನ್ಮದಿನಾಚರಣೆಗೆ ಇನ್ನೆರಡೇ ದಿನ ಬಾಕಿ. ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ರಾಕಿಂಗ್ ಸ್ಟಾರ್ನ 38ನೇ ಬರ್ತ್ಡೇಯನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ. ಈ ವರ್ಷ ಕೊಂಚ ವಿಶೇಷ ಅಂತಲೇ ಹೇಳಬಹುದು. ಕೆಜಿಎಫ್ 2ರ ಯಶಸ್ಸಿನ ಘಮಲು ಇನ್ನೂ ಮರೆಯಾಗಿಲ್ಲ. ಅಲ್ಲದೇ ಇತ್ತೀಚೆಗಷ್ಟೇ ತಮ್ಮ ಮುಂಬರುವ ಚಿತ್ರವನ್ನೂ ಘೋಷಿಸಿದ್ದಾರೆ. ಹಾಗಾಗಿ ಟಾಕ್ಸಿಕ್ ಸಿನಿಮಾದ ಅಪ್ಡೇಟ್ಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಟನ ಬರ್ತ್ಡೇ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ. ಹೀಗಿರುವಾಗ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಅವರು 'ಯಶ್ ಬರ್ತ್ಡೇ ಡಿಪಿ' ಯನ್ನು ಅನಾವರಣಗೊಳಿಸಿದ್ದಾರೆ. ಓರ್ವ ಹೆಸರಾಂತ ನಟನ ಕೈಯಿಂದ ಮತ್ತೋರ್ವ ಜನಪ್ರಿಯ ನಟನ ಕಾಮನ್ ಡಿಪಿ ಅನಾವರಣಗೊಂಡಿದ್ದು, ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.
-
ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು!
— DrShivaRajkumar (@NimmaShivanna) January 5, 2024 " class="align-text-top noRightClick twitterSection" data="
CDP ತುಂಬಾ ಚೆನ್ನಾಗಿದೆ.
Happy to unveil the Birthday Common Dp of @TheNameIsYash #YashBirthdayCDP pic.twitter.com/GkTcoZ9bHf
">ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು!
— DrShivaRajkumar (@NimmaShivanna) January 5, 2024
CDP ತುಂಬಾ ಚೆನ್ನಾಗಿದೆ.
Happy to unveil the Birthday Common Dp of @TheNameIsYash #YashBirthdayCDP pic.twitter.com/GkTcoZ9bHfಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು!
— DrShivaRajkumar (@NimmaShivanna) January 5, 2024
CDP ತುಂಬಾ ಚೆನ್ನಾಗಿದೆ.
Happy to unveil the Birthday Common Dp of @TheNameIsYash #YashBirthdayCDP pic.twitter.com/GkTcoZ9bHf
ಶಿವರಾಜ್ಕುಮಾರ್ ಪೋಸ್ಟ್: ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಯಶ್ ಬರ್ತ್ಡೇ ಕಾಮನ್ ಡಿಪಿ ಅನಾವರಣಗೊಳಿಸಿದ್ದಾರೆ. ''ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು. ಸಿಡಿಪಿ ತುಂಬಾ ಚೆನ್ನಾಗಿದೆ. ಯಶ್ ಜನ್ಮದಿನದ ಕಾಮನ್ ಡಿಪಿಯನ್ನು ಅನಾವರಣಗೊಳಿಸಲು ಸಂತೋಷವಾಗಿದೆ. #ಯಶ್ ಬರ್ತ್ಡೇ ಸಿಡಿಪಿ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಉಡುಗೊರೆ': ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ
ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ಯಶ್ 2007ರಲ್ಲಿ ಸಿನಿಮಾಗೆ ಎಂಟ್ರಿ ಕೊಟ್ಟರು. ಆ ಬಳಿಕ ಮಾಡಿದ್ದು ಒಂದಿಷ್ಟು ಸಿನಿಮಾಗಳು. ಆದ್ರೆ ಕಳೆದ ಐದು ವರ್ಷಗಳಲ್ಲಿ ಬಂದಿದ್ದು ಎರಡೇ ಸಿನಿಮಾ. ಈ ಎರಡು ಸಿನಿಮಾ ನಟನ ಜನಪ್ರಿಯತೆಯನ್ನು ನೂರು ಪಟ್ಟು ಹೆಚ್ಚಿಸಿತು ಅಂದ್ರೆ ತಪ್ಪಾಗಲ್ಲ ನೋಡಿ. ಕೆಜಿಎಫ್ ಸ್ಟಾರ್ ಎಂದೇ ಖ್ಯಾತರಾದರು. ಕಳೆದ ತಿಂಗಳಷ್ಟೇ ತಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್' ಅನೌನ್ಸ್ ಮಾಡಿದ್ದಾರೆ. ಜನವರಿ 8ರಂದು ನಟನ ಜನ್ಮದಿನ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಅಪ್ಡೇಟ್ಸ್ ಹೊರಬರಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: 'ಮಾರ್ಟಿನ್' ಆಡಿಯೋ ರೈಟ್ಸ್ ಕೋಟ್ಯಂತರ ರೂಪಾಯಿಗೆ ಮಾರಾಟ; ಧ್ರುವ ಸರ್ಜಾ ಸಿನಿಮಾ ಕಾತರ
- — Yash (@TheNameIsYash) January 4, 2024 " class="align-text-top noRightClick twitterSection" data="
— Yash (@TheNameIsYash) January 4, 2024
">— Yash (@TheNameIsYash) January 4, 2024
ಮತ್ತೊಂದೆಡೆ, ಯಶ್ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಲು ಸಾಧ್ಯವಾಗುವುದಿಲ್ಲ ಎಂದು ಈಗಾಗಲೇ ಮಾಹಿತಿ ನೀಡಿದ್ದಾರೆ. ''ಜನವರಿ 8. ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ಇದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆಪಡುವ ದಿನ. ನನಗೂ ಅಷ್ಟೇ. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾದ ಕೆಲಸ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಬೇಕಿರುವುದರಿಂದ ಜನವರಿ 8ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ - ನಿಮ್ಮ ಪ್ರೀತಿಯ ಯಶ್'' ಎಂದು ಬರೆದುಕೊಂಡಿದ್ದಾರೆ.