ಗಂಗಾವತಿ(ಕೊಪ್ಪಳ): ದಿ. ಪುನೀತ್ ರಾಜ್ಕುಮಾರ್ ಹೊಸಪೇಟೆ - ಗಂಗಾವತಿಗೆ ಭೇಟಿ ನೀಡಿದಾಗಲೆಲ್ಲ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ನೆಚ್ಚಿನ ದೈನ ಪವನ ಸುತನ ದರ್ಶನ ಪಡೆದುಕೊಳ್ಳದೇ ಗಂಗಾವತಿಯಿಂದ ಪುನೀತ್ ರಾಜ್ಮಾರ್ ನಿರ್ಗಮಿಸುತ್ತಿರಲಿಲ್ಲ.
ಇದೀಗ ಮಾವನ ನೆಚ್ಚಿನ ದೈವ ಸನ್ನಿಧಿಗೆ ಪುನೀತ್ ರಾಜ್ಕುಮಾರ್ ಸಹೋದರಿ ಪೂರ್ಣಿಮಾ, ಪುನೀತ್ ಅಳಿಯ, ನಟ ಧೀರನ್ ರಾಮ್ಕುಮಾರ್, ಮತ್ತು ಧನ್ಯಾ ರಾಮ್ಕುಮಾರ್ ಭೇಟಿ ನೀಡಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಡಾ. ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಅವರು ನಟ ರಾಮ್ಕುಮಾರ್ ಅವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ಜನಿಸಿದ ಧೀರನ್ ಮತ್ತು ಧನ್ಯಾ ಎಂಬ ಇಬ್ಬರು ಮಕ್ಕಳೀಗ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಇದೀಗ ಧೀರನ್ ಅಭಿನಯದ ಶಿವ 143 ಸಿನಿಮಾ ಪ್ರಮೋಷನ್ಗಾಗಿ ಗಂಗಾವತಿಗೆ ಆಗಮಿಸಿದ್ದಾರೆ. ಅದಕ್ಕೂ ಪೂರ್ವದಲ್ಲಿ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಎಂದರೆ ಧೀರನ್ ಧರಿಸಿದ್ದ ಅಂಗಿಯ ಮೇಲೆ ಮಾವ ಪುನೀತ್ ನಟನೆಯ ನಾನಾ ಚತ್ರದ ಪೋಸ್ಟರ್ಗಳಿದ್ದು ಜನರ ಗಮನ ಸೆಳೆಯಿತು.
ಇದನ್ನೂ ಓದಿ: ವೂಟ್ನಲ್ಲಿ ಬೈರಾಗಿ ಸಿನಿಮಾ ಪ್ರಸಾರ.. ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಉತ್ಸುಕ