ಇಡೀ ಭಾರತೀಯ ಚಿತ್ರರಂಗದಲ್ಲಿ ಫಿಟ್ನೆಸ್, ಸೌಂದರ್ಯ ಮತ್ತು ಸ್ಟೈಲಿಶ್ ಲುಕ್ಗೆ ಹೆಸರುವಾಸಿಯಾದ ನಟಿ ಶಿಲ್ಪಾ ಶೆಟ್ಟಿ. ವಯಸ್ಸು 47 ದಾಟಿದ್ದರೂ ಅವರ ಚೆಲುವು ಮಾತ್ರ ಇನ್ನೂ ಹಾಗೆಯೇ ಇದೆ. ಫಿಟ್ನೆಸ್ ಕಾಪಾಡಲೆಂದೇ ಈ ಸುಂದ್ರಿ ದಿನನಿತ್ಯ ವರ್ಕೌಟ್ ಮತ್ತು ವ್ಯಾಯಾಮ ಮಾಡುತ್ತಾರೆ. ಇದೀಗ ಶಿಲ್ಪಾ ಶೆಟ್ಟಿ ಫಿಟ್ನೆಸ್ ಸೆಷನ್‌ಗಳ ಗ್ಲಿಂಪ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಆರೋಗ್ಯಕರವಾಗಿ ಬದುಕಲು ಸ್ಫೂರ್ತಿ ನೀಡಿದ್ದಾರೆ.
ತಮ್ಮ ವರ್ಕೌಟ್ ವಿಡಿಯೋ ಶೇರ್ ಮಾಡಲು ನಟಿ ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡರು. "ನಾನು ಯಶಸ್ವಿಯಾಗಲಿಲ್ಲ, ಕೆಲವೊಮ್ಮೆ ಆಗದಿದ್ದರೂ ಪರವಾಗಿಲ್ಲ. ನಿಮ್ಮ ಅತ್ಯುತ್ತಮ ಶಾಟ್ ಅನ್ನು ನೀಡುವವರೆಗೆ ಪ್ರಯತ್ನಿಸಿ. ಇಲ್ಲಿ ಪ್ಲಸ್ ಪಾಯಿಂಟ್‌ಗಳು; ನಾನು ಇನ್ನೂ ಕೆಲವು ಗಂಭೀರ ಕ್ಯಾಲೊರಿಗಳನ್ನು ಬರ್ನ್ ಮಾಡಿದ್ದೇನೆ. ಮೆದುಳು ಮತ್ತು ದೇಹ ಎರಡಕ್ಕೂ ಆಯಾಸವಾಗಿದೆ. ಆದರೆ, ನಾನು ಬಹಳಷ್ಟು ವಿನೋದವನ್ನು ಹೊಂದಿದ್ದೆ." ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ.
-
🧻 The #TissueRollCatchChallenge 🧻
— SHILPA SHETTY KUNDRA (@TheShilpaShetty) July 10, 2023 " class="align-text-top noRightClick twitterSection" data="
I wasn’t successful… and sometimes it’s ok not to be; as long as you tried and gave it your best shot!
The plus points here; I still burnt some serious calories because it's tiring for the brain and body both 😅But, I had loads of fun😂… pic.twitter.com/6fYhSpPtcD
">🧻 The #TissueRollCatchChallenge 🧻
— SHILPA SHETTY KUNDRA (@TheShilpaShetty) July 10, 2023
I wasn’t successful… and sometimes it’s ok not to be; as long as you tried and gave it your best shot!
The plus points here; I still burnt some serious calories because it's tiring for the brain and body both 😅But, I had loads of fun😂… pic.twitter.com/6fYhSpPtcD🧻 The #TissueRollCatchChallenge 🧻
— SHILPA SHETTY KUNDRA (@TheShilpaShetty) July 10, 2023
I wasn’t successful… and sometimes it’s ok not to be; as long as you tried and gave it your best shot!
The plus points here; I still burnt some serious calories because it's tiring for the brain and body both 😅But, I had loads of fun😂… pic.twitter.com/6fYhSpPtcD
ಮುಂದುವರೆದು ಬರೆದಿರುವ ಅವರು, "ನೀವು ಯಶಸ್ವಿಯಾಗಲು ಬಯಸಿದರೆ ಪರಿಪೂರ್ಣ ಸಮಯವು ಅತ್ಯಗತ್ಯವಾಗಿರುತ್ತದೆ. ಆ ಪರಿಪೂರ್ಣ ಸಮಯದಲ್ಲಿ ನಮ್ಮ ಎಲ್ಲಾ ಸ್ನಾಯುಗಳ ಸಿಂಕ್ರೊನೈಸೇಶನ್ ಪ್ರಮುಖವಾಗಿದೆ. ಅಲ್ಲದೇ, ಇದು ಕೈ-ಕಣ್ಣಿನ ಸಮನ್ವಯ ಮತ್ತು ಪ್ರತಿವರ್ತನೆಗಳಿಗೆ ಉತ್ತಮವಾಗಿದೆ. ಇದು ಬೆನ್ನಿನ ಸ್ನಾಯುಗಳಿಗೆ ಉತ್ತಮವಾಗಿದೆ. ನೀವು ಇದನ್ನು ಮಾಡುವಲ್ಲಿ ಯಶಸ್ವಿಯಾದರೆ ನನ್ನನ್ನು ಟ್ಯಾಗ್ ಮಾಡಿ. ಅದನ್ನು ನಾನು ಸ್ಟೋರಿ ಹಾಕಿಕೊಳ್ಳುವೆ" ಎಂದಿದ್ದಾರೆ.
ಇದನ್ನೂ ಓದಿ: ಅಂಬುಜ ಮೂವಿ: ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದ 'ಅಂಬುಜ'.. ಜುಲೈ 21ಕ್ಕೆ ರಿಲೀಸ್
ದೃಶ್ಯದಲ್ಲಿ ಶಿಲ್ಪಾ ಶೆಟ್ಟಿ 'ಟಿಶ್ಯೂ ರೋಲ್ ಕ್ಯಾಚ್ ಚಾಲೆಂಜ್' ಅನ್ನು ಮಾಡುತ್ತಿರುವುದನ್ನು ಕಾಣಬಹುದು. ಕ್ಯಾಚ್ ಮಾಡಲು ಸಾಧ್ಯವಾಗದೇ, ಪ್ರಯತ್ನ ಪಡುತ್ತಿರುವುದು ದೃಶ್ಯದಲ್ಲಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರಿಂದ ಲೈಕ್ಸ್ ಜೊತೆಗೆ ಕಮೆಂಟ್ಗಳು ವ್ಯಕ್ತವಾಗಿವೆ.
ಶಿಲ್ಪಾ ಶೆಟ್ಟಿ ಮುಂದಿನ ಸಿನಿಮಾಗಳು: ಫಿಟ್ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಪೊಲೀಸ್ ಪಡೆಯ ಕುರಿತ ವೆಬ್ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಇದ್ದಾರೆ.
ಇದಲ್ಲದೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಕೆಡಿ-ದಿ ಡೆವಿಲ್' ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಸತ್ಯವತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಅಲ್ಲದೇ, ಬಾಲಿವುಡ್ ಖಳನಾಯಕ ಸಂಜಯ್ ದತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Jawan Prevue: 'ಜವಾನ್' ಪ್ರಿವ್ಯೂ ರಿಲೀಸ್; ಕಿಂಗ್ ಖಾನ್ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!