ಮುಂಬೈ (ಮಹಾರಾಷ್ಟ್ರ): ಬಿಗ್ ಬಾಸ್ 13 ಖ್ಯಾತಿಯ ಪಂಜಾಬಿ ನಟಿ ಶೆಹನಾಜ್ ಗಿಲ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಈ ನಟಿಯು ನಿರ್ಮಾಪಕಿ ರಿಯಾ ಕಪೂರ್ ಅವರ ಮುಂಬರುವ ಯೋಜನೆಯ ಭಾಗವಾಗಬಹುದೆಂದು ಈಗ ವರದಿಯಾಗಿದೆ. 28 ವರ್ಷದ ಶೆಹನಾಜ್ ಗಿಲ್ ಅವರು ಮಹಿಳಾ-ಆಧಾರಿತ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ರಿಯಾ ಪತಿ ಕರಣ್ ಬೂಲಾನಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
- " class="align-text-top noRightClick twitterSection" data="
">
ಈ ಚಿತ್ರದಲ್ಲಿ ಹಿರಿಯ ನಟರಾದ ಅನಿಲ್ ಕಪೂರ್, ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರದಲ್ಲಿದ್ದು, ಹೊನ್ಸ್ಲಾ ರಾಖ್ ನಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೆಹನಾಜ್ ಅವರು ತಮ್ಮ ಬಬ್ಲಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಅವರು ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಅತ್ಯಂತ ಪ್ರೀತಿಪಾತ್ರರಲ್ಲಿ ಒಬ್ಬರು. 2021 ರಲ್ಲಿ ದಿಲ್ಜಿತ್ ದೋಸಾಂಜ್ ಜೊತೆಗೆ ಪಂಜಾಬಿ ಸಿನಿಮಾ ಹೊನ್ಸ್ಲಾ ರಾಖ್ನಲ್ಲಿ ಶೆಹನಾಜ್ ಮೊದಲ ಬಾರಿಗೆ ಅಭಿನಯಿಸಿದ್ದರು.
ರಿಯಾ ನಿರ್ಮಿಸಿರುವ ಶೆಹನಾಜ್ ಅಭಿನಯದ ಚಿತ್ರ ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ. ರಿಯಾ, ಈ ಹಿಂದೆ ಕರೀನಾ ಕಪೂರ್ ಖಾನ್, ಸೋನಮ್ ಕಪೂರ್ ಮತ್ತು ಸ್ವರಾ ಭಾಸ್ಕರ್ ನಟಿಸಿದ ವೀರೆ ದಿ ವೆಡ್ಡಿಂಗ್ ಅನ್ನು ನಿರ್ಮಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಈ ಚಿತ್ರವು ನೆಟ್ಟಿಗರಿಂದ ಉತ್ತಮ ಪ್ರಶಂಸೆ ಪಡೆದಿತ್ತು.
ಇದನ್ನೂ ಓದಿ:'ಗಾಯ್ಸ್, ನಾನು ಗರ್ಭಿಣಿಯಲ್ಲ, ದೇಶದ ಜನಸಂಖ್ಯೆಗೆ ಸೈಫ್ ಈಗಾಗಲೇ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ'