ETV Bharat / entertainment

ಖತ್ರೋನ್ ಕೆ ಖಿಲಾಡಿ ಶೋ ಆಫರ್​ ತಿರಸ್ಕರಿಸಿದ ಬಿಗ್​ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್‌!

ಶಾಲಿನ್ ಭಾನೋಟ್‌ ಖತ್ರೋನ್ ಕೆ ಖಿಲಾಡಿ ಶೋ ಆಫರ್​ ತಿರಸ್ಕರಿಸಿದ್ದಾರೆ.

Shalin Bhanot
ಖತ್ರೋನ್ ಕೆ ಖಿಲಾಡಿ ಶೋ ಆಫರ್​ ತಿರಸ್ಕರಿಸಿದ ಬಿಗ್​ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್‌
author img

By

Published : Feb 12, 2023, 4:15 PM IST

ಮುಂಬೈ (ಮಹಾರಾಷ್ಟ್ರ): ಹಿಂದಿಯ ಜನಪ್ರಿಯ ರಿಯಾಲಿಟಿ ಶೋ, ಬಾಲಿವುಡ್​​ ಸೂಪರ್​ ಸ್ಟಾರ್ ಸಲ್ಮಾನ್​​ ಖಾನ್​ ನಿರೂಪಣೆಯ 'ಬಿಗ್ ಬಾಸ್ 16'ರ ಇತ್ತೀಚಿನ ಸಂಚಿಕೆಯಲ್ಲಿ, ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಸ್ಟಂಟ್ ಆಧಾರಿತ ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿಗೆ ಶಾಲಿನ್ ಭಾನೋಟ್‌ (Shalin Bhanot) ಅವರಿಗೆ ಆಫರ್​ ನೀಡಿದರು, ಆದ್ರೆ ಬಿಗ್​​ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್‌ ಆ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ​

ತನಗೆ ವಿದ್ಯುತ್ ಮತ್ತು ಸರೀಸೃಪಗಳ ಭಯವಿದೆ. ಹಾಗಾಗಿ ಖತ್ರೋನ್ ಕೆ ಖಿಲಾಡಿ ಶೋನಲ್ಲಿ ಸಂಪೂರ್ಣವಾಗಿ ಭಾಗಿಯಾಗಲು ನನ್ನಿಂದ ಸಾಧ್ಯವಿಲ್ಲ. ಬಾಲಿವುಡ್ ಪ್ರಾಜೆಕ್ಟ್ ಪಡೆಯಲು ಈವರೆಗಿನ ಎಲ್ಲಾ ಟಾಸ್ಕ್​​ಗಳನ್ನು ಮಾಡಿದ್ದೇನೆಯೇ ಹೊರತು ರಿಯಾಲಿಟಿ ಶೋ ಆಫರ್​ಗೆ ಅಲ್ಲ ಎಂದಿದ್ದಾರೆ.

'ಬಿಗ್ ಬಾಸ್ 16'ರ ಇತ್ತೀಚಿನ ಸಂಚಿಕೆಯಲ್ಲಿ ನಿರ್ದೇಶಕ, ನಿರೂಪಕ ರೋಹಿತ್ ಶೆಟ್ಟಿ ದೊಡ್ಮನೆ ಪ್ರವೇಶಿಸಿದರು. ಟಾಪ್ 5 ಸ್ಪರ್ಧಿಗಳಾದ ಪ್ರಿಯಾಂಕಾ ಚಾಹರ್ ಚೌಧರಿ, ಎಂಸಿ ಸ್ಟಾನ್, ಶಿವ ಠಾಕರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಅವರಿಗೆ ಕಷ್ಟಕರವಾದ ಟಾಸ್ಕ್‌ಗಳನ್ನು ನೀಡಿದರು. ಬಿಗ್ ಬಾಸ್ 16 ರ ಫೈನಲಿಸ್ಟ್‌ಗಳು ತಮ್ಮ ಸಾಮರ್ಥ್ಯ ಸಾಬೀತು ಪಡಿಸಬೇಕಿತ್ತು. ನೀರಿನೊಳಗೆ ಉಸಿರನ್ನು ಹಿಡಿದಿಟ್ಟುಕೊಳ್ಳುವುದು, ಕರೆಂಟ್​ ಶಾಕ್​ನಿಂದ ತಪ್ಪಿಸಿಕೊಳ್ಳುವುದು, ಬೈಸಿಕಲ್‌ನಲ್ಲಿ ಸಾಹಸ ಪ್ರದರ್ಶನ ಹೀಗೆ ಸಾಹಸಮಯ ಟಾಸ್ಕ್​ಗಳಲ್ಲಿ ಭಾಗಿ ಆದರು.

ಈ ಸಾಹಸಮಯ ಟಾಸ್ಕ್​​ಗಳಲ್ಲಿ ಬಿಗ್​​ ಬಾಸ್ ಸ್ಪರ್ಧಿ ಶಾಲಿನ್ ಭಾನೋಟ್‌ ಅದ್ಭುತ ಪ್ರದರ್ಶನ ನೀಡಿದರು. ಅವರ ಸಾಮರ್ಥ್ಯ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನ ಮುಟ್ಟಿತು. ಪರಿಣಾಮ, ರೋಹಿತ್ ಶೆಟ್ಟಿ ಅವರು ಶಾಲಿನ್ ಭಾನೋಟ್‌ ಅವರಿಗೆ ಖತ್ರೋನ್ ಕೆ ಖಿಲಾಡಿ ಸೀಸನ್​ 13ರ ಭಾಗವಾಗಲು ದೊಡ್ಡ ಆಫರ್​ ನೀಡಿದರು. ಆದ್ರೆ ಶಾಲಿನ್ ಭಾನೋಟ್‌ ಆ ಆಫರ್​ ಅನ್ನು ತಿರಸ್ಕರಿಸಿದರು. ಸ್ಟಂಟ್ ಆಧಾರಿತ ರಿಯಾಲಿಟಿ ಶೋನಲ್ಲಿ ಆಡಿಶನ್ ಆದರೂ​ ನೀಡುವಂತೆ ರೋಹಿತ್​ ಕೇಳಿಕೊಂಡರು. ಆದಾಗ್ಯೂ, ಶಾಲಿನ್ ಭಾನೋಟ್‌ ಅದನ್ನು ತಿರಸ್ಕರಿಸಿದರು. ರೋಹಿತ್ ಶೆಟ್ಟಿ ಬಗ್ಗೆ ಶಾಲಿನ್ ಭಾನೋಟ್‌ ಅವರ ಈ ವರ್ತನೆಯನ್ನು ಬಿಗ್​ಬಾಸ್​ ಮನೆಯವರು ಸಹಿಸಿಕೊಳ್ಳಲಿಲ್ಲ.

ಇದನ್ನೂ ಓದಿ: ಕೇರಳ ಪೊಲೀಸ್​ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ರಿಷಬ್​ ಶೆಟ್ಟಿ, ವಿಜಯ್ ಕಿರಗಂದೂರು

ಶಾಲಿನ್ ಭಾನೋಟ್‌ ಅವರಿಗೆ ಈ ಆಫರ್‌ನಲ್ಲಿ ನಿಜವಾಗಿಯೂ ಆಸಕ್ತಿ ಇಲ್ಲದಿದ್ದರೆ ಅವರು ಇಷ್ಟು ಚೆನ್ನಾಗಿ ಟಾಸ್ಕ್​ಗಳಲ್ಲಿ ತೊಡಗಿಕೊಳ್ಳಬಾರದಿತ್ತು ಎಂದು ಬಿಗ್​ ಬಾಸ್​ ಸಹ ಸ್ಪರ್ಧಿ ಅರ್ಚನಾ ಗೌತಮ್ ಅಸಮಾಧಾನ ಹೊರಹಾಕಿದರು. ಚಿತ್ರ ನಿರ್ಮಾಪಕರಿಗೆ ಅಗೌರವ ತೋರಿದ್ದಾಗಿ ಆರೋಪಿಸಿದರು. ಮತ್ತೊಂದೆಡೆ, ಇನ್ನೋರ್ವ ಸ್ಪರ್ಧಿ ಶಿವ ಠಾಕರೆ ರೋಹಿತ್‌ ಅವರಿಂದ ಈ ಆಫರ್ ಪಡೆಯಲು ಬಯಸಿದ್ದರು. ಖತ್ರೋನ್ ಕೆ ಖಿಲಾಡಿಯಲ್ಲಿ ಪಾಲ್ಗೊಳ್ಳುವುದು ತಮ್ಮ ಬಾಲ್ಯದ ಕನಸು ಎಂದು ಅವರು ಹಂಚಿಕೊಂಡಿದ್ದಾರೆ. ಅದರಂತೆ ಶಿವ ಠಾಕರೆ ಖತ್ರೋನ್ ಕೆ ಖಿಲಾಡಿ 13ಗೆ ಆಯ್ಕೆ ಆಗಿದ್ದಾರೆಂದು ಮೂಲಗಳು ತಿಳಿಸಿವೆ. ಇನ್ನು, ಅರ್ಚನಾ ಗೌತಮ್ ಕೂಡ ಈ ಸಾಲಿನಲ್ಲಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಇದನ್ನೂ ಓದಿ: 'ಕಾಂತಾರ 2'ನಲ್ಲಿ ನಟಿಸ್ತಾರಾ ಊರ್ವಶಿ ರೌಟೇಲಾ, ಅಸಲಿ ವಿಚಾರವೇನು?

ಇನ್ನೂ 'ಬಿಗ್ ಬಾಸ್ 16' ಶೋ ಅಂತಿಮ ಘಟ್ಟ ತಲುಪಿದೆ. ಇಂದು ಗೆಲುವು ಯಾರಿಗೆ ಎಂಬುದು ಗೊತ್ತಾಗಲಿದೆ. ಪ್ರಿಯಾಂಕಾ ಚಾಹರ್ ಚೌಧರಿ, ಎಂಸಿ ಸ್ಟಾನ್, ಶಿವ ಠಾಕರೆ, ಅರ್ಚನಾ ಗೌತಮ್ ಮತ್ತು ಶಾಲಿನ್ ಭಾನೋಟ್ ಅವರಲ್ಲಿ ಓರ್ವರು ವಿಜೇತರಾಗಿ ಹೊರಹೊಮ್ಮಲಿದ್ದು, ಈ ದೃಶ್ಯಕ್ಕೆ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.