ಮುಂಬೈ: ರಾಜಕುಮಾರ್ ಹಿರಾನಿ ನಿರ್ದೇಶನದಲ್ಲಿ ಶಾರುಖ್ ಖಾನ್ ಅಭಿನಯದ 'ಡುಂಕಿ' ಸಿನಿಮಾ ಸೌದಿ ಅರೇಬಿಯಾ ಶೂಟಿಂಗ್ ಅನ್ನು ಮುಗಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಟ ಶಾರುಖ್ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಸಿನಿಮಾದ ನಟ-ತಾಂತ್ರಿಕ ವರ್ಗದವರಿಗೆ ಧನ್ಯವಾದ ಅರ್ಪಿಸುತ್ತಿರುವುದನ್ನು ಕಾಣಬಹುದಾಗಿದೆ.
ಸೌದಿಯಲ್ಲಿ 'ಡುಂಕಿ' ಸಿನಿಮಾ ಶೂಟಿಂಗ್ ಮುಗಿಸಿದ ನೆಮ್ಮದಿಗಿಂತ ಮತ್ತೊಂದಿಲ್ಲ. ರಾಜು ಸರ್, ಅಭಿಜತ್, ಮನೋಶ್ ಸೇರಿದಂತೆ ಚಿತ್ರದಲ್ಲಿ ಕಾರ್ಯ ನಿರ್ವಹಿಸಿಸಿದ ಪಾತ್ರಧಾರಿಗಳು ಮತ್ತು ತಾಂತ್ರಿಕ ವರ್ಗಕ್ಕೆ ಧನ್ಯವಾದ ಎಂದು ವಿಡಿಯೋದಲ್ಲಿ ಶಾರುಖ್ ತಿಳಿಸಿದ್ದಾರೆ.
ಕಳೆದ ಗುರುವಾರ ರೆಡ್ ಸಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಉದ್ಘಾಟನೆ ಮೂಲಕ ತಮ್ಮ ಸಿನಿಮಾ ಶೂಟಿಂಗ್ ಅನ್ನು ಸೌದಿಯಲ್ಲಿ ಶಾರುಖ್ ಆರಂಭಿಸಿದ್ದರು. ಈ ವೇಳೆ ಚಿತ್ರದ ಲೋಕೆಶನ್ನಗಳಲ್ಲಿ ಚಿತ್ರೀಕರಣಕ್ಕೆ ಸಹಾಯ ಮಾಡಿ, ಆಧರಾಥಿತ್ಯ ತೋರಿದ ಕಾರಣಕ್ಕೆ ದೇಶದ ಸಾಂಸ್ಕೃತಿಕ ಸಚಿವರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಅದ್ಬುತ ಲೋಕೆಶನ್ ನೀಡಿದ್ದಕ್ಕೆ ಸಂಸ್ಕೃತಿ ಮತ್ತು ಸಿನಿಮಾ ಸಚಿವರಿಗೆ ಅನಂತ ಧನ್ಯವಾದವನ್ನು ಶಾರುಖ್ ಅರೆಬಿಕ್ ಭಾಷೆಯಲ್ಲಿಯೇ ತಿಳಿಸಿದ್ದಾರೆ.
ಎರಡನೇ ಎಡಿಷನ್ನ ಗಾಲಾದ ಜೆಡ್ಡಾ ಸೆಟ್ನಲ್ಲಿ ಚಿತ್ರರಂಗದಲ್ಲಿ ತಮ್ಮ ಅದ್ಬುತ ಕೊಡುಗೆಯ ಗೌರವಕ್ಕೆ ಶಾರುಖ್ ಪಾತ್ರರಾಗಿದ್ದಾರೆ. ಇದೇ ಡಿಸೆಂಬರ್ 10ರಂದು ರೆಡ್ ಸಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮುಗಿಯಲಿದೆ. 'ಡುಂಕಿ' ಜೊತೆಯಲ್ಲಿ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಪಾಠಾಣ್' ಸಿನಿಮಾದಲ್ಲೂ ಶಾರುಖ್ ನಟಿಸುತ್ತಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ: ಡಿಸೆಂಬರ್ 1 ರಂದು ಪುಷ್ಪ ಚಿತ್ರ ಬಿಡುಗಡೆ!