ETV Bharat / entertainment

ಡಿಸೆಂಬರ್​ ಬದಲಾಗಿ ಮುಂದಿನ ವರ್ಷ ಪ್ರೇಮಿಗಳ ದಿನಕ್ಕೆ ತೆರೆಗೆ ಬರಲು ಸಜ್ಜಾಗಿದೆ ಶಾಹೀದ್​ - ಕೃತಿ ಸಿನಿಮಾ

author img

By ETV Bharat Karnataka Team

Published : Oct 3, 2023, 12:50 PM IST

ಡಿಸೆಂಬರ್​ನಲ್ಲಿ ದೊಡ್ಡ ದೊಡ್ಡ ನಟರ ಚಿತ್ರಗಳು ಬಿಡುಗಡೆಗೆ ಕಾದು ಕುಳಿತಿರುವ ಹಿನ್ನೆಲೆ ಚಿತ್ರತಂಡ ಈ ಮಾರ್ಪಾಡು ಮಾಡಿರುವ ಸಾಧ್ಯತೆ ಇದೆ.

shahid kapoor kriti sanons movie is all set to hit the screens on Valentine's Day next year

ಹೈದರಾಬಾದ್​: ದಿನೇಶ್​​ ವಿಜನ್​ ಅವರ ಮ್ಯಾಡ್ಡೊಕ್​ ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿರುವ ರೋಮ್ಯಾಂಟಿಕ್​ ಕಾಮಿಡಿ ಚಿತ್ರದಲ್ಲಿನ ನಟ ಶಾಹೀದ್​ ಕಪೂರ್​ ಮತ್ತು ಕೃತಿ ಸನೋನ್​ ಮಿಂಚಲು ತಯಾರಾಗಿದ್ದಾರೆ. ಯಂತ್ರ ಮತ್ತು ಮಾನವನ ನಡುವಿನ ವಿಶಿಷ್ಟ ಪ್ರೀತಿಯ ಕಥಾ ಹಂದರವನ್ನು ಈ ಚಿತ್ರ ಕಟ್ಟಿಕೊಡಲಿದೆ. ಚಿತ್ರದಲ್ಲಿ ನಟ ಶಾಹೀದ್​ ವಿಜ್ಞಾನಿಯಾಗಿ ಕಂಡಿದ್ದು, ತಾನೇ ತಯಾರಿಸಿದ ರೋಬೋಟ್​ ಜೊತೆಗೆ ಪ್ರೇಮಕ್ಕೆ ಬೀಳುವ ಕಥೆಯನ್ನು ಇದು ಹೊಂದಿದೆ. ಈ ಚಿತ್ರವೂ ಅಂದುಕೊಂಡಂತೆ ಇದೇ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್​ 8ರಂದು ತೆರೆಗೆ ಅಪ್ಪಳಿಸಬೇಕಿತ್ತು. ಇದೀಗ ಚಿತ್ರ ಬಿಡುಗಡೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ರೋಮ್ಯಾಂಟಿಕ್​ ಡ್ರಾಮ ಜೊತೆಗೆ ಅಸಾಧ್ಯ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಪ್ರೇಮಿಗಳ ದಿನದಂದು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಅಂದರೆ 2024ರ ಪ್ರೇಮಿಗಳ ವಾರಾಂತ್ಯದಲ್ಲಿ ಈ ಚಿತ್ರ ತೆರೆ ಕಾಣಲಿದೆ. ಈ ಚಿತ್ರ ಕೂಡ ಪ್ರೇಮಕಥೆ ಹೊಂದಿದ್ದು, ಪ್ರೇಮಿಗಳ ದಿನದಂದು ಬಿಡುಗಡೆಯಾದಲ್ಲಿ ಯುವ ಅಭಿಮಾನಿಗಳನ್ನು ಸೆಳೆಯಬಹುದು ಎಂಬುದು ಇದರ ಹಿಂದಿನ ಲೆಕ್ಕಾಚಾರ.

ಅಮಿತ್​ ಜೋಶಿ ಮತ್ತು ಅರಾಧನಾ ಸಹ್​​ ನಿರ್ದೇಶದನ ಈ ಚಿತ್ರದಲ್ಲಿ ಹಿರಿಯ ನಟ ಧರ್ಮೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಾಹೀದ್​​ ಮತ್ತು ಕೃತಿ ಸನೋನ್​ ಒಟ್ಟಿಗೆ ನಟಿಸುತ್ತಿದ್ದು, ಈ ಜೋಡಿ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಕುತೂಹಲ ಕೂಡ ಇದೆ. ಇತ್ತೀಚೆಗಷ್ಟೇ ನಟ ಶಾಹಿದ್​​ ಆ್ಯಕ್ಷನ್​​ ಥ್ರಿಲ್ಲರ್​ 'ಬ್ಲಡಿ ಡ್ಯಾಡಿ' ಚಿತ್ರದಲ್ಲಿ ನಟಿಸಿದ್ದರು. ಆಲಿ ಅಬ್ಬಾಸ್​ ಜಾಫರ್​​ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಜೀಯೊ ಸಿನಿಮಾ ಫ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಕಂಡಿತ್ತು.

ಇನ್ನು, ನಟಿ ಕೃತಿ ಆದಿ ಪುರುಷ್​ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ ಗಣಪತ್​ ಭಾಗ 1ರಲ್ಲಿ ಅವರು ಟೈಗರ್​ ಶ್ರಾಫ್​ ಜೊತೆ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಕರೀನಾ ಕಪೂರ್​, ಟಬೂ ಮತ್ತು ದಿಲ್ಜಿತ್​​ ದೊಸಂಜಾ ಕೂಡ ಮಿಂಚಲಿದ್ದಾರೆ.

ಡಿಸೆಂಬರ್​ನಲ್ಲಿ ಬಿಗ್​ ಬಜೆಟ್​​ ಜೊತೆಗೆ ಭಾರಿ ನಿರೀಕ್ಷೆಯ ಅನಿಮಲ್​, ಮೆರಿ ಕ್ರಿಸ್ಮಸ್​​, ಯೋಧಾ, ಡುಂಕಿ, ಸ್ಯಾಮ್​ ಬಹುದೂರ್​ ಮತ್ತು ಸಲಾರ್​ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಹೆಸರಿಡದ ಈ ರೋಬೊ ಆಧಾರಿತ ಕಾಮಿಡಿ ರೋಮಾನ್ಸ್​​ ಚಿತ್ರದ ಬಿಡುಗಡೆ ವಿಳಂಬ ಆಗಲಿದೆ.

ಇದನ್ನೂ ಓದಿ: ತಮ್ಮದೇ ಹಿಟ್​ ಸಾಂಗ್​​ಗೆ ಮೈ ಬಳುಕಿಸಿದ ರಶ್ಮಿಕಾ ಮಂದಣ್ಣ - ನ್ಯಾಷನಲ್ ಕ್ರಶ್ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.