ETV Bharat / entertainment

ಒಂದು ದಿನದ ಅಂತರದಲ್ಲಿ ಶಾಹಿದ್​, ಸಾರಾ​ ಸಿನಿಮಾ ಬಿಡುಗಡೆ; ಬಾಲಿವುಡ್​ನಲ್ಲಿ ಸ್ಟಾರ್​ ಸಿನಿಮಾಗಳ ಘರ್ಷಣೆ

ಒಂದು ದಿನದ ಅಂತರದಲ್ಲಿ ಶಾಹಿದ್​ ಕಪೂರ್, ಕೃತಿ ಸನೋನ್ ಮತ್ತು ಸಾರಾ ಅಲಿ ಖಾನ್, ಆದಿತ್ಯ ಕಪೂರ್ ನಟನೆಯ ಸಿನಿಮಾಗಳು ಬಿಡುಗಡೆಯಾಗಲಿದೆ.​

bollywood
ಬಾಲಿವುಡ್​
author img

By

Published : Jun 19, 2023, 1:24 PM IST

ಬಾಲಿವುಡ್​ ನಟ ಶಾಹಿದ್​ ಕಪೂರ್​ ಮತ್ತು ನಟಿ ಕೃತಿ ಸನೋನ್​ ಅವರ ರೊಮ್ಯಾಂಟಿಕ್​ ಚಿತ್ರ 'ಆನ್ ಇಂಪಾಸಿಬಲ್ ಲವ್ ಸ್ಟೋರಿ' ಮತ್ತು ನಟಿ ಸಾರಾ ಅಲಿ ಖಾನ್​ ಮತ್ತು ಆದಿತ್ಯ ಕಪೂರ್​ ನಟಿಸಿರುವ 'ಮೆಟ್ರೋ ಇನ್​ ಡಿನೋ' ಚಿತ್ರ ಬಾಕ್ಸ್​ ಆಫೀಸ್​​ನಲ್ಲಿ ಒಮ್ಮೆಲೇ ಘರ್ಷಿಸಲಿದೆ. ಈ ಎರಡು ಬಹುನಿರೀಕ್ಷಿತ ಚಿತ್ರಗಳು 2023ರ ಡಿಸೆಂಬರ್​ ತಿಂಗಳಲ್ಲೇ ಥಿಯೇಟರ್​ಗೆ ಬರಲಿದೆ.

ಶಾಹಿದ್​ ಮತ್ತು ಕೃತಿ ಅವರ ಚಿತ್ರವು ಡಿಸೆಂಬರ್​ 7 ರಂದು ಬಿಡುಗಡೆಯಾದರೆ, ಅನುರಾಗ್​ ಬಸು ಅವರ 'ಮೆಟ್ರೋ ಇನ್​ ಡಿನೋ' ಡಿಸೆಂಬರ್​ 8 ರಂದು ತೆರೆ ಕಾಣಲಿದೆ. ಕೇವಲ ಒಂದೇ ದಿನದ ವ್ಯತ್ಯಾಸದಲ್ಲಿ ಈ ಎರಡೂ ಸಿನಿಮಾಗಳು ರಿಲೀಸ್​ ಆಗಲಿದೆ. ಇದು ಕಲೆಕ್ಷನ್​ ವಿಚಾರದಲ್ಲೂ ಕೊಂಚ ಏರುಪೇರಾಗುವ ಸಾಧ್ಯತೆ ಇದೆ.

ಸೋಮವಾರ, ಶಾಹಿದ್​ ಕಪೂರ್​ ಮತ್ತು ಕೃತಿ ಸನೋನ್​ ಅಭಿನಯದ ಮುಂಬರುವ ಹೆಸರಿಡದ ರೊಮ್ಯಾಂಟಿಕ್​ ಡ್ರಾಮಾ ಚಿತ್ರದ ತಯಾರಕರು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ 'ಆನ್ ಇಂಪಾಸಿಬಲ್ ಲವ್ ಸ್ಟೋರಿ' ಎಂದು ಹೆಸರಿಡಲಾಗಿದೆ. ಪ್ರೊಡಕ್ಷನ್ ಹೌಸ್ ಮ್ಯಾಡಾಕ್ ಫಿಲ್ಮ್ಸ್ ಚಿತ್ರದ ಪೋಸ್ಟರ್ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಿಕ್​ ಪಡೆಯಲು ನಾನು, ಮಾಲ್ತಿ ಅದೃಷ್ಟ ಮಾಡಿದ್ದೆವು; ಅಪ್ಪ ಅಶೋಕ್​ ಚೋಪ್ರಾ ನೆನೆದ ನಟಿ ಪ್ರಿಯಾಂಕಾ

"2023 ರ ಡಿಸೆಂಬರ್ 7 ರಂದು ತೆರೆದುಕೊಳ್ಳುವ ಈ ಅಸಾಧ್ಯವಾದ ಪ್ರೇಮಕಥೆಗೆ ನಿಮ್ಮ ಕ್ಯಾಲೆಂಡರ್​ನಲ್ಲಿ ಗುರುತಿಸಿ. ಮೊದಲ ಬಾರಿಗೆ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಒಟ್ಟಿಗೆ ನಟಿಸಿರುವ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ದಿನೇಶ್ ವಿಜನ್ ನಿಮಗಾಗಿ ತಂದಿದ್ದಾರೆ!. ಚಿತ್ರಕಥೆ ಮತ್ತು ನಿರ್ದೇಶನ: ಅಮಿತ್ ಜೋಶಿ ಮತ್ತು ಆರಾಧನಾ ಸಾಹ್. ನಿರ್ಮಾಣ: ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ & ಲಕ್ಷ್ಮಣ್ ಉಟೇಕರ್ ಎ ಮ್ಯಾಡಾಕ್ ಫಿಲ್ಮ್ಸ್ ಪ್ರೊಡಕ್ಷನ್​. ನಿರೀಕ್ಷಿಸಿರಿ" ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ಅವರ ನಿರ್ದೇಶನದ ಈ ಚಿತ್ರವು ಡಿಸೆಂಬರ್ 7, 2023 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಶಾಹಿದ್ ಮತ್ತು ಕೃತಿ ಹೊರತುಪಡಿಸಿ, ಈ ಚಿತ್ರದಲ್ಲಿ ಲೆಜೆಂಡರಿ ನಟ ಧರ್ಮೇಂದ್ರ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ಮತ್ತು ಲಕ್ಷ್ಮಣ್ ಉಟೇಕರ್ ಬಂಡವಾಳ ಹೂಡಿದ್ದಾರೆ. ಈ ಹಿಂದೆ, ಚಿತ್ರವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಮತ್ತೊಂದೆಡೆ, ಅನುರಾಗ್ ಬಸು ಅವರ ನಿರ್ದೇಶನದ 'ಮೆಟ್ರೋ ಇನ್​ ಡಿನೋ' ಚಿತ್ರ ಡಿಸೆಂಬರ್ 8, 2023 ರಂದು ಚಿತ್ರಮಂದಿರಗಳಿಗೆ ಬರಲಿದೆ. ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Adipurush box office collection: ವಿವಾದದ ಮಧ್ಯೆ ಮೂರೇ ದಿನದಲ್ಲಿ 300 ಕೋಟಿ ಕ್ಲಬ್​ ಸೇರಿದ 'ಆದಿಪುರುಷ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.