ETV Bharat / entertainment

Shahid Kapoor: 8ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಶಾಹಿದ್​ ಕಪೂರ್​ ದಂಪತಿ - ಬಾಲಿವುಡ್ ನಟ ಶಾಹಿದ್ ಕಪೂರ್

ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್​ ದಂಪತಿಗೆ 8ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ.

Shahid Kapoor
ನಟ ಶಾಹಿದ್​ ಕಪೂರ್​ ದಂಪತಿ
author img

By

Published : Jul 7, 2023, 6:13 PM IST

ಬಾಲಿವುಡ್ ನಟ ಶಾಹಿದ್ ಕಪೂರ್ ಇಂದು ತಮ್ಮ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಎಂಟನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಮದುವೆಯಾದಾಗಿನಿಂದ ತಮ್ಮ ಪ್ರೀತಿಯಿಂದಲೇ ಅನೇಕರ ಹೃದಯ ಗೆದ್ದಿದ್ದಾರೆ. ಮದುವೆಯಾಗಿ ಎಂಟು ವರ್ಷವಾದರೂ, ಇಂದಿಗೂ ಕೊನೆಯಿಲ್ಲದ ಪ್ರೀತಿಯನ್ನು ಪರಸ್ಪರ ನೀಡುತ್ತಿದ್ದಾರೆ.

ಸುಂದರ ದಂಪತಿ ಇಂದು ಎಂಟನೇ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಈ ವಿಶೇಷ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಶುಭಾಶಯ ತಿಳಿಸಲು ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಶಾಹಿದ್ ತನ್ನ ಮತ್ತು ಮೀರಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ದಂಪತಿಯು ಬಿಳಿ ಬಣ್ಣ ದಿರಿಸಿನಲ್ಲಿ ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು.

"ನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ.. ನಾನು ನಿಮಗೆ ನನ್ನ ಹೃದಯವನ್ನು ನೀಡಿದ್ದೇನೆ... ನೀವು ನನ್ನ ಹೃದಯದಲ್ಲಿ ಮಾತ್ರ ಕಾಣುವಿರಿ (ಪ್ಲೀಸ್ ನನ್ನನ್ನು ಕೊಲ್ಲಬೇಡಿ ಏಕೆಂದರೆ ನಾನು ನಿಮ್ಮ ನೆಚ್ಚಿನ ಹಾಡಿನ ಆವೃತ್ತಿಯನ್ನು ರಚಿಸಿದ್ದೇನೆ) ನನ್ನ ಜೀವನ ಸಂಗಾತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನೂ ಓದಿ: 'ಖುಷಿ' ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​​ - ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಸಮಂತಾ!

ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​ ಕೂಡ ತಮ್ಮಿಬ್ಬರ ಸುಂದರ ಫೋಟೋವನ್ನು ಕೈ ಬಿಟ್ಟಿದ್ದಾರೆ. ಚಿತ್ರಕ್ಕೆ ಸಿಂಪಲ್ ಮತ್ತು ಚೆಂದನೆಯ ಕ್ಯಾಪ್ಶನ್​ ನೀಡಿ ಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಇವರಿಬ್ಬರ ಫೋಟೋಗಳಿಗೆ ಅಭಿಮಾನಿಗಳು ಕೆಂಪು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರೊಬ್ಬರು, ಚಂದನೆಯ ದಂಪತಿ ಎಂದಿದ್ದಾರೆ. ಮತ್ತೊಬ್ಬರು ಸೋ ಕ್ಯೂಟ್​ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು 8ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ​

ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ 2015 ರ ಜುಲೈ ತಿಂಗಳಲ್ಲಿ ವಿವಾಹವಾದರು. ಮದುವೆಯಾದ ಒಂದು ವರ್ಷದ ನಂತರ ಅವರು ತಮ್ಮ ಮೊದಲ ಮಗು ಮಿಶಾಳನ್ನು ಸ್ವಾಗತಿಸಿದರು. 2018 ರಲ್ಲಿ ಎರಡನೇ ಮಗು ಜೈನ್​ಗೆ ಪೋಷಕರಾದರು.

ಇನ್ನೂ ಶಾಹಿದ್​ ಕಪೂರ್​ ಸಿನಿಮಾ ವಿಚಾರವಾಗಿ ನೋಡುವುದಾದರೆ, ಬಾಲಿವುಡ್​ ನಟ ಶಾಹಿದ್​ ಕಪೂರ್​ ಮತ್ತು ನಟಿ ಕೃತಿ ಸನೋನ್​ ಅವರ ರೊಮ್ಯಾಂಟಿಕ್​ ಚಿತ್ರ 'ಆನ್ ಇಂಪಾಸಿಬಲ್ ಲವ್ ಸ್ಟೋರಿ' ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ತಾತ್ಕಾಲಿಕವಾಗಿ 'ಆನ್ ಇಂಪಾಸಿಬಲ್ ಲವ್ ಸ್ಟೋರಿ' ಎಂದು ಹೆಸರಿಡಲಾಗಿದೆ.

ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ಅವರ ನಿರ್ದೇಶನದ ಈ ಚಿತ್ರವು ಡಿಸೆಂಬರ್ 7, 2023 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಶಾಹಿದ್ ಮತ್ತು ಕೃತಿ ಹೊರತುಪಡಿಸಿ, ಈ ಚಿತ್ರದಲ್ಲಿ ಲೆಜೆಂಡರಿ ನಟ ಧರ್ಮೇಂದ್ರ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ಮತ್ತು ಲಕ್ಷ್ಮಣ್ ಉಟೇಕರ್ ಬಂಡವಾಳ ಹೂಡಿದ್ದಾರೆ. ಈ ಹಿಂದೆ, ಚಿತ್ರವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಇದನ್ನೂ ಓದಿ: 'ಶಾರುಖ್ ಖಾನ್​​ಗೆ ನಟನೆ ಗೊತ್ತಿಲ್ಲ, ಸುಂದರವಾಗಿಲ್ಲ': ಪಾಕಿಸ್ತಾನಿ ನಟಿ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.