ಭಾರತವು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಎರಡು ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸುತ್ತಿದ್ದಂತೆ ಎಲ್ಲೆಡೆಯಿಂದ ಹರ್ಷೋದ್ಘಾರ ಮೊಳಗಿದವು. ಭಾರತದ ಕೀರ್ತಿ ಹೆಚ್ಚಿಸಿದ ಆರ್‌ಆರ್‌ಆರ್ ಚಿತ್ರತಂಡ, ನಟರಿಗೆ ಅಭಿನಂದನಾ ಸಂದೇಶಗಳು ಹರಿದುಬಂದವು. ಸಾಮಾಜಿಕ ಮಾಧ್ಯಮದಲ್ಲಿ ಪ್ರತೀ ಕ್ಷೇತ್ರಗಳ ಪ್ರತಿಭೆಗಳು ಸೇರಿದಂತೆ ಅಭಿಮಾನಿಗಳು ಆಸ್ಕರ್ 2023 ವಿಜೇತರಿಗೆ ಪ್ರೀತಿಯ ಮಳೆ ಸುರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಕೂಡ ಲಕ್ಷಾಂತರ ಭಾರತೀಯರೊಂದಿಗೆ ಸೇರಿಕೊಂಡು ನಾಟು ನಾಟು ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಸಾಧನೆಯನ್ನು ಆಚರಿಸಿದರು.
-
Big hug to @guneetm & @EarthSpectrum for Elephant Whisperers. And @mmkeeravaani #ChandraBose ji @ssrajamouli @AlwaysRamCharan @tarak9999 thank u for showing us all, the way to do it. Both Oscars truly inspirational!!
— Shah Rukh Khan (@iamsrk) March 13, 2023 " class="align-text-top noRightClick twitterSection" data="
">Big hug to @guneetm & @EarthSpectrum for Elephant Whisperers. And @mmkeeravaani #ChandraBose ji @ssrajamouli @AlwaysRamCharan @tarak9999 thank u for showing us all, the way to do it. Both Oscars truly inspirational!!
— Shah Rukh Khan (@iamsrk) March 13, 2023Big hug to @guneetm & @EarthSpectrum for Elephant Whisperers. And @mmkeeravaani #ChandraBose ji @ssrajamouli @AlwaysRamCharan @tarak9999 thank u for showing us all, the way to do it. Both Oscars truly inspirational!!
— Shah Rukh Khan (@iamsrk) March 13, 2023
ಶಾರುಖ್ ಖಾನ್ ಟ್ವೀಟ್: ದಿ ಎಲಿಫೆಂಟ್ ವಿಸ್ಪರರ್ಸ್ ನಿರ್ಮಾಪಕಿ ಗುನೀತ್ ಮೊಂಗಾ ಅವರು ನಟ ಶಾರುಖ್ ಖಾನ್ ಅವರ ಅಪ್ಪುಗೆಗಾಗಿ ಕಾಯುತ್ತಿದ್ದಾರೆ. ಟ್ವಿಟರ್‌ನಲ್ಲಿ ಆಸ್ಕರ್ ವಿಜೇತರಿಗೆ ಎಸ್‌ಆರ್‌ಕೆ ಅವರು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. ಎರಡೂ ಆಸ್ಕರ್ ಪ್ರಶಸ್ತಿಗಳು ನಿಜವಾಗಿಯೂ ಸ್ಫೂರ್ತಿದಾಯಕವಾಗಿವೆ ಎಂದು ಪ್ರಶಂಸೆ ಮಾಡಿದ್ದಾರೆ. ಗುನೀತ್ ಮೊಂಗಾ ಮತ್ತು ಆರ್‌ಆರ್‌ಆರ್ ತಂಡಕ್ಕೆ ''ವರ್ಚುವಲ್ ಬಿಗ್ ಹಗ್" ಅನ್ನು ಪಠಾಣ್ ಹೀರೋ ಕಳುಹಿಸಿದ್ದಾರೆ. ಎಸ್‌ಆರ್‌ಕೆ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಆಸ್ಕರ್ ಪ್ರಶಸ್ತಿ ವಿಜೇತೆ ಗುನೀತ್ ಮೊಂಗಾ, ನಿಜವಾಗಿಯೂ ನಿಮ್ಮಿಂದ ಸ್ಫೂರ್ತಿ ಪಡೆಯುತ್ತೇವೆ. ಶೀಘ್ರದಲ್ಲೇ ನಿಮ್ಮ ನಿಜವಾದ ಅಪ್ಪುಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಇದ್ದೇನೆ ಎಂದು ಹೇಳಿದರು.
-
I derive ALL my inspiration from you Shah Rukh sir. Hope to get a hug in person soon ❤️🐘❤️🐘❤️
— Guneet Monga (@guneetm) March 13, 2023 " class="align-text-top noRightClick twitterSection" data="
">I derive ALL my inspiration from you Shah Rukh sir. Hope to get a hug in person soon ❤️🐘❤️🐘❤️
— Guneet Monga (@guneetm) March 13, 2023I derive ALL my inspiration from you Shah Rukh sir. Hope to get a hug in person soon ❤️🐘❤️🐘❤️
— Guneet Monga (@guneetm) March 13, 2023
ರಾಜಮೌಳಿ ಪ್ರತಿಕ್ರಿಯೆ: ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಆರ್‌ಆರ್‌ಆರ್ ತಂಡವನ್ನು ಕೂಡ ಎಸ್‌ಆರ್‌ಕೆ ಶ್ಲಾಘಿಸಿದರು. ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಗೀತರಚನೆಕಾರ ಚಂದ್ರಬೋಸ್, ನಿರ್ದೇಶಕ ರಾಜಮೌಳಿ ಮತ್ತು ಆರ್‌ಆರ್‌ಆರ್ ಪ್ರಮುಖ ನಟರಾದ ರಾಮ್ಚರಣ್, ಜೂನಿಯರ್ ಎನ್‌ಟಿಆರ್ ಅವರಿಗೆ ಅಭಿನಂದನೆ ತಿಳಿಸಿದರು. ಟ್ವಿಟರ್‌ನಲ್ಲಿ ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ತಕ್ಷಣವೇ ಪ್ರತಿಕ್ರಿಯಿಸಿ ಸೂಪರ್‌ಸ್ಟಾರ್‌ಗಳಿಗೆ ಧನ್ಯವಾದ ಅರ್ಪಿಸಿದರು.
-
Thank youuuu sirrrrrrr 🥳🥳🥳🙏🏻🙏🏻🙏🏻
— rajamouli ss (@ssrajamouli) March 13, 2023 " class="align-text-top noRightClick twitterSection" data="
">Thank youuuu sirrrrrrr 🥳🥳🥳🙏🏻🙏🏻🙏🏻
— rajamouli ss (@ssrajamouli) March 13, 2023Thank youuuu sirrrrrrr 🥳🥳🥳🙏🏻🙏🏻🙏🏻
— rajamouli ss (@ssrajamouli) March 13, 2023
ಅಮೆರಿಕದ ಲಾಸ್ ಏಂಜಲೀಸ್ ಪ್ರದೇಶದ ಡಾಲ್ಫಿ ಥಿಯೇಟರ್ನಲ್ಲಿ ನಿನ್ನೆ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಭಾರತೀಯರ ನಿರೀಕ್ಷೆ ನಿಜವಾಗಿದೆ. ಭಾರತೀಯ ಮನೋರಂಜನಾ ಕ್ಷೇತ್ರ ಎರಡು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿ ಆಗಿದೆ. ಆರ್‌ಆರ್‌ಆರ್ ತೆಲುಗು ಸಿನಿಮಾದ ಸೂಪರ್ ಹಿಟ್ ಸಾಂಗ್ 'ನಾಟು ನಾಟು' ಅತ್ಯುತ್ತಮ ಮೂಲ ಗೀತೆ ಮತ್ತು ಕಾರ್ತಿಕಿ ಗೊನ್ಸಾಲ್ವೆಸ್ ಅವರ 'ದಿ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಂದಿವೆ. ಗುನೀತ್ ಮೊಂಗಾ 'ದಿ ಎಲಿಫೆಂಟ್ ವಿಸ್ಪರರ್ಸ್'ನ ನಿರ್ಮಾಪಕಿ.
ಇದನ್ನೂ ಓದಿ: ವಿಶ್ವಾದ್ಯಂತ RRR ನಾಯಕರ ಕ್ರೇಜ್: ಜೂ.ಎನ್‌ಟಿಆರ್ ನಂ.1, ಎರಡನೇ ಸ್ಥಾನದಲ್ಲಿ ರಾಮ್ಚರಣ್
ಇನ್ನೂ ಆಸ್ಕರ್ 2023 ಸಲುವಾಗಿ ಭಾರತೀಯ ನಟರು ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಡೇಟಾ ವಿಶ್ಲೇಷಕ ಸಂಸ್ಥೆ ನೆಟ್‌ಬೇಸ್ ಕ್ವಿಡ್ ( NetBase Quid) ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆರ್‌ಆರ್‌ಆರ್ ನಟ ಜೂನಿಯರ್ ಎನ್‌ಟಿಆರ್ ಅಗ್ರಸ್ಥಾನದಲ್ಲಿದ್ದು, ನಟ ರಾಮ್ಚರಣ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಹಾಲಿವುಡ್ ನಟರನ್ನೂ ಹಿಂದಿಕ್ಕಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ನೆಟ್‌ಬೇಸ್ ಕ್ವಿಡ್ ಸಂಸ್ಥೆ ಆಸ್ಕರ್ 2023ರ ವಿಚಾರವಾಗಿ ಸಾಮಾಜಿಕ ಮಾಧ್ಯಮ ಮತ್ತು ಮುಖ್ಯ ಸುದ್ದಿ ಮಾಧ್ಯಮಗಳಾದ್ಯಂತ ಹೆಚ್ಚು ಉಲ್ಲೇಖಿಸಲಾದ ಸೆಲೆಬ್ರಿಟಿಗಳನ್ನು ಆಧರಿಸಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಧರ್ಮಣ್ಣಗೀಗ 'ರಾಜಯೋಗ'.. ನಾಯಕನಾಗಿ ಬಡ್ತಿ ಪಡೆದ ಹಾಸ್ಯನಟ