ETV Bharat / entertainment

ಜವಾನ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾದ ಎಸ್​ಆರ್​ಕೆಗೆ ಸೇತುಪತಿ-ದಳಪತಿ ಸಾಥ್ - shah rukh khan

ಜವಾನ್ ಚಿತ್ರತಂಡ ಇತ್ತೀಚೆಗೆ ಚೆನ್ನೈನಲ್ಲಿ ನಿಗದಿ ಪಡಿಸಲಾಗಿದ್ದ ಶೂಟಿಂಗ್​ ಮುಗಿಸಿದೆ. ಈ ಸಮಯದಲ್ಲಿ ಬಾಲಿವುಡ್​​ನ ಸೂಪರ್​ ಸ್ಟಾರ್​ಗೆ ತಮಿಳು ಚಿತ್ರರಂಗದ ನಯನತಾರಾ, ರಜನಿಕಾಂತ್, ವಿಜಯ್ ಸೇತುಪತಿ ಮತ್ತು ವಿಜಯ್ ಸಾಥ್​ ನೀಡಿದ್ದಾರೆ.

shah rukh khan tweet about jawan shooting in chennai
ಜವಾನ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾದ ಎಸ್​ಆರ್​ಕೆಗೆ ಸೇತುಪತಿ-ದಳಪತಿ ಸಾಥ್
author img

By

Published : Oct 8, 2022, 1:41 PM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮಿಳು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಅಟ್ಲಿ ಅವರೊಂದಿಗೆ ಮುಂದಿನ ಸಿನಿಮಾ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಜವಾನ್ ಎಂದು ಟೈಟಲ್​ ಇಡಲಾಗಿರುವ ಈ ಚಿತ್ರದಲ್ಲಿ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜವಾನ್ ಚಿತ್ರತಂಡ ಇತ್ತೀಚೆಗೆ ಚೆನ್ನೈನಲ್ಲಿ ನಿಗದಿ ಪಡಿಸಲಾಗಿದ್ದ ಶೂಟಿಂಗ್​ ಮುಗಿಸಿದೆ. ಈ ಸಮಯದಲ್ಲಿ ಬಾಲಿವುಡ್​​ನ ಸೂಪರ್​ ಸ್ಟಾರ್​ಗೆ ತಮಿಳು ಚಿತ್ರರಂಗದ ರಜನಿಕಾಂತ್, ವಿಜಯ್ ಸೇತುಪತಿ ಮತ್ತು ವಿಜಯ್ ಸಾಥ್​ ನೀಡಿದ್ದಾರೆ.

ಸೂಪರ್‌ಸ್ಟಾರ್ ಎಸ್‌ಆರ್‌ಕೆ ಮತ್ತು ಅಟ್ಲಿ ತಂಡ ಚೆನ್ನೈನಲ್ಲಿ ಜವಾನ್ ಶೂಟಿಂಗ್​ ಮುಗಿಸಿದ್ದು, ಎಸ್​ಆರ್​ಕೆ ಚೆನ್ನೈನಲ್ಲಿ ತಮ್ಮ 30 ದಿನಗಳು ಹೇಗಿದ್ದವು ಎಂಬುದನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ''ಅದ್ಭುತ ದಿನಗಳು, ನಯನ ತಾರಾ ಜೊತೆ ಸಿನಿಮಾ ನೋಡಿದ್ದು, ವಿಜಯ್​ ಸೇತುಪತಿ ಜೊತೆಗಿನ ಚರ್ಚೆ, ವಿಜಯ್​ ಊಟ ಕೊಟ್ಟಿದ್ದು ಎಲ್ಲವೂ ಸುಂದರ ಕ್ಷಣಗಳು ಎಂದು ಶಾರುಖ್​ ಖಾನ್​​ ಟ್ವೀಟ್ ಮಾಡಿದ್ದಾರೆ. ಜೊತೆಗೆ ಜವಾನ್ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಕೃಷ್ಣ ಪ್ರಿಯಾ ಅವರ ಆತಿಥ್ಯಕ್ಕಾಗಿ ಧನ್ಯವಾದ ಹೇಳಿದ್ದಾರೆ. ಚಿಕನ್ 65 ಮಾಡೋದನ್ನು ಪ್ರಿಯಾ ಅವರಿಂದ ಕಲಿಯಬೇಕಾಗಿದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

  • Wot a 30 days blast RCE team! Thalaivar blessed our sets…saw movie with Nayanthara partied with @anirudhofficial deep discussions with @VijaySethuOffl & Thalapathy @actorvijay fed me delicious food.Thx @Atlee_dir & Priya for ur hospitality now need to learn Chicken 65 recipe!

    — Shah Rukh Khan (@iamsrk) October 7, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಆರ್​ಆರ್​ಆರ್​ ಸಿನಿಮಾಗೆ ಆಸ್ಕರ್​ ಆಸೆ ಜೀವಂತ.. ಈ ಕೆಟಗರಿಯಲ್ಲಿ ಸಿಗುತ್ತಾ ಪ್ರಶಸ್ತಿ

ಗೌರಿ ಖಾನ್ ನಿರ್ಮಾಣದ​​ ಜವಾನ್ ಸಿನಿಮಾವನ್ನು ರೆಡ್​ ಚಿಲ್ಲೀಸ್​ ಎಂಟರ್​ಟೈನ್​ಮೆಂಟ್ ಪ್ರಸ್ತುತಪಡಿಸಲಿದೆ. ಶಾರುಖ್ ಹಂಚಿಕೊಂಡಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಜವಾನ್ ಸಿನಿಮಾ ಜೂನ್ 2, 2023 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.