ETV Bharat / entertainment

ತಿಂಗಳಾಂತ್ಯಕ್ಕೆ 3 ಸಿನಿಮಾ ಘೋಷಿಸಲಿರುವ ಶಾರುಖ್ ಖಾನ್‌ - Shah Rukh Khan

ಈ ತಿಂಗಳಾಂತ್ಯದಲ್ಲಿ ಶಾರುಖ್​ ಖಾನ್​ ತಮ್ಮ ಮುಂದಿನ ಮೂರು ಸಿನಿಮಾಗಳನ್ನು ಘೋಷಿಸುವ ಸಾಧ್ಯತೆ ಇದೆ.

Shah Rukh Khan
ಶಾರುಖ್ ಖಾನ್‌
author img

By ETV Bharat Karnataka Team

Published : Jan 18, 2024, 10:13 AM IST

ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಶಾರುಖ್​ ಖಾನ್​​ ಅವರ ವೃತ್ತಿಜೀವನದಲ್ಲಿ 2023ನೇ ವರ್ಷ ಬಹಳ ಮಹತ್ವ ಹೊಂದಿದೆ. ಏಕೆಂದರೆ ಒಂದೇ ವರ್ಷದಲ್ಲಿ ತೆರೆಕಂಡ ಅವರ ಮೂರೂ ಚಿತ್ರಗಳೂ ಸೂಪರ್ ಹಿಟ್​ ಆಗಿವೆ. ಸಾವಿರ ಕೊಟಿ ರೂ. ಸಂಪಾದಿಸಿದ ಎರಡು ಬ್ಲಾಕ್​ಬಸ್ಟರ್ ಮತ್ತು ಒಂದು ಸೂಪರ್ ಹಿಟ್​ ಚಿತ್ರ ಹೊಂದಿರುವ ಭಾರತದ ಏಕೈಕ ನಟ ಇವರು.

2018ರ ಕೊನೆಯಲ್ಲಿ ತೆರೆ ಕಂಡ 'ಝೀರೋ' ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ. ನಾಲ್ಕು ವರ್ಷಗಳ ಬಿಡುವಿನ ಬಳಿಕ 'ಪಠಾಣ್​​'ನೊಂದಿಗೆ ಶಾರುಖ್‌ ಬಿಗ್​ ಸ್ಕ್ರೀನ್​ಗೆ ಮರಳಿದರು. ಬಹುನಿರೀಕ್ಷಿತ ಚಿತ್ರಕ್ಕೆ ಆರಂಭದಲ್ಲಿ ಅನೇಕ ಸವಾಲುಗಳು ಎದುರಾಯಿತಾದರೂ ಸಿನಿಮಾ ಭಾರಿ ಯಶಸ್ಸು ಕಂಡಿತು. ನಂತರ ಬಂದ ಜವಾನ್​ ಕೂಡ ಒಂದು ಸಾವಿರ ಕೋಟಿ ರೂ. ಕ್ಲಬ್​ ಸೇರುವಲ್ಲಿ ಯಶಸ್ವಿಯಾಯಿತು. ಇತ್ತೀಚಿನ ಡಂಕಿ ಸಿನಿಮಾ ಸಹ ಉತ್ತಮ ಪ್ರದರ್ಶನ ಕಂಡು ಸೂಪರ್ ಹಿಟ್​ ಆಗಿದೆ.

ಈ ಮೂಲಕ ಎಸ್​ಆರ್​ಕೆ ತನ್ನ ಸಿನಿ ಕೆರಿಯರ್​ನಲ್ಲಿ '2023' ಪ್ರಜ್ವಲಿಸಿತು. ಸಿದ್ಧಾರ್ಥ್ ಆನಂದ್ ಅವರ ಪಠಾಣ್, ಅಟ್ಲೀ ಕುಮಾರ್ ಅವರ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿಯವರ ಡಂಕಿ ಮೂಲಕ ಬಾಕ್ಸ್​​ ಆಫೀಸ್​ನಲ್ಲಿ ಶಾರುಖ್​​​​ ಧೂಳೆಬ್ಬಿಸಿದರು. ಈ ಹಿನ್ನೆಲೆಯಲ್ಲಿ ನಟನ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. ಈ ಜನವರಿ ಕೊನೆಗೆ/ಅತಿ ಶೀಘ್ರದಲ್ಲೇ ಮುಂದಿನ ಸಿನಿಮಾ ಘೋಷಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ತಮ್ಮ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಪರಿಣಾಮ ಬೀರಿರುವುದರ ಹಿನ್ನೆಲೆಯಲ್ಲಿ ಶಾರುಖ್​​ ಸಂತೋಷಗೊಂಡಿದ್ದಾರೆ. ಹೊಸ ವರ್ಷವನ್ನು ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಆಚರಿಸಿದ್ದರು. ಮುಂದಿನ ಸಿನಿಮಾ ಘೋಷಿಸಲು ಕಾತರರಾಗಿರುವ ಅಭಿಮಾನಿಗಳಿಗೆ ಎಸ್​ಆರ್​ಕೆ ಸ್ವೀಟ್​ ಸಪ್ರೈಸ್‌ ನೀಡಲಿದ್ದಾರೆ. 58ರ ಹರೆಯದ ನಟ ಈ ತಿಂಗಳು ಮೂರು ಹೊಸ ಪ್ರೊಜೆಕ್ಟ್ಸ್ ಘೋಷಿಸುವ ನಿರೀಕ್ಷೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಬಿಗ್​ ಬಾಸ್ ಮಿಡ್‌ ವೀಕ್‌ ಎಲಿಮಿನೇಶನ್​​​​​​: ಕಣ್ಣೀರು ಸುರಿಸಿ ಮನೆಯಿಂದ ಹೊರನಡೆದ ತನಿಷಾ

ಅದಾಗ್ಯೂ, ನಟ ಯಾವುದೇ ಯೋಜನೆಗಳಿಗೆ ಸಹಿ ಹಾಕುವಲ್ಲಿ ಆತುರದಲ್ಲಿಲ್ಲ ಎಂದೂ ಮೂಲಗಳು ಹೇಳುತ್ತವೆ. ತಮ್ಮ ಕೈಯಲ್ಲಿರುವ ಸ್ಕ್ರಿಪ್ಟ್‌ಗಳ ಬಗ್ಗೆ ಸಾಕಷ್ಟು ಅವಲೋಕಿಸಿ ನಂತರ ನಿರ್ಧಾರ ಕೈಗೊಳ್ಳಲಿದ್ದಾರಂತೆ.

ಇದನ್ನೂ ಓದಿ: 'ಕಾಟೇರ' ಮೂಲಕ 2024 ಶುಭಾರಂಭ: ಮುಂದಿನ ಕನ್ನಡ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ

ಮೂಲಗಳಂತೆ, ಶಾರುಖ್ ಖಾನ್ ಶೀಘ್ರದಲ್ಲೇ (2024ರ ಆರಂಭದಲ್ಲೇ) ಮೂರು ಚಿತ್ರಗಳನ್ನು ಬಹಿರಂಗಪಡಿಸಲಿದ್ದಾರೆ. ನಂತರ ನಿರ್ಮಾಣ ಕಾರ್ಯ ಪ್ರಾರಂಭಿಸುವರು ಎಂಬುದು ಖಚಿತವಾಗಿದೆ. ತಮ್ಮ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಸಪ್ರೈಸ್ ಕೊಡುವ ಉದ್ದೇಶದಿಂದ, ಸದ್ಯ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲವಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.