ETV Bharat / entertainment

ಡಂಕಿ ಟ್ರೇಲರ್​​: 'ಎಸ್​​ಆರ್​ಕೆಯ 3rd ಬ್ಲಾಕ್​ಬಸ್ಟರ್' ಅಂತಿದ್ದಾರೆ ಫ್ಯಾನ್ಸ್ - ಶಾರುಖ್ ಖಾನ್ ಡಂಕಿ

Dunki Trailer: ಶಾರುಖ್​ ಖಾನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡಂಕಿ ಟ್ರೇಲರ್​ ಅನಾವರಣಗೊಂಡಿದೆ.

Dunki trailer
ಡಂಕಿ ಟ್ರೇಲರ್​​
author img

By ETV Bharat Karnataka Team

Published : Dec 5, 2023, 1:18 PM IST

ಬಾಲಿವುಡ್​​ ಕಿಂಗ್​​​ ಖ್ಯಾತಿಯ ಶಾರುಖ್​ ಖಾನ್​ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಡಂಕಿ''. ಈಗಾಗಲೇ 2023ರಲ್ಲಿ ಎರಡು ಬ್ಲಾಕ್​​ ಬಸ್ಟರ್ ಸಿನಿಮಾಗಳನ್ನು ನೀಡಿರುವ ಎಸ್​ಆರ್​ಕೆ ತಮ್ಮ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಜನಪ್ರಿಯ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್​ನ ಚೊಚ್ಚಲ ಚಿತ್ರ 'ಡಂಕಿ' ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಡಂಕಿ ಟ್ರೇಲರ್​: ಈಗಾಗಲೇ ಸಿನಿಮಾದ ಟೀಸರ್​, ಹಾಡುಗಳು ಅನಾವರಣಗೊಳಿಸಿ ಚಿತ್ರತಂಡ ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿದೆ. ಟ್ರೇಲರ್​ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಫೈನಲಿ ಚಿತ್ರತಂಡ ಇಂದು ಕಾಮಿಡಿ ಡ್ರಾಮಾದ ಟ್ರೇಲರ್ ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ.

ಟೀಸರ್, ಲುಟ್ ಪುಟ್ ಗಯಾ ಮತ್ತು ನಿಕ್ಲೆ ತೆ ಕಭಿ ಹಮ್ ಘರ್ ಸೇ ಹಾಡುಗಳ ನಂತರ ಟ್ರೇಲರ್ ಅನಾವರಣಗೊಂಡಿದೆ. ಇದನ್ನು ಡಂಕಿ ಡ್ರಾಪ್ 4 ಎಂದು ಹೆಸರಿಸಲಾಗುತ್ತಿದೆ. ಬಹು ನಿರೀಕ್ಷಿತ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ನೆಟಿಜನ್‌ಗಳು ಎಕ್ಸ್‌ (ಟ್ವಿಟರ್​) ಸೇರಿದಂತೆ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ಆ್ಯಕ್ಷನ್​​ನಿಂದ ಹಾಸ್ಯಕ್ಕೆ; ವಿದೇಶಕ್ಕೆ ಹೋಗಲು ಇಚ್ಛಿಸುವವರ, ಭಾಷಾ ಸಮಸ್ಯೆ ಎದುರಿಸುವವರ, ಅಲ್ಲಿ ಸಿಲುಕಿಕೊಳ್ಳುವವರ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ಪಠಾಣ್​​ ಮತ್ತು ಜವಾನ್​ ಮೂಲಕ ಆ್ಯಕ್ಷನ್​​​ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ಶಾರುಖ್​​ ಖಾನ್​​ ಈ ಚಿತ್ರದಲ್ಲಿ ನಿಮ್ಮ ಹೊಟ್ಟೆ ಹುಣ್ಣಾಗಿಸುವಷ್ಟು ನಗುವಿನ ಮನರಂಜನೆ ಕೊಡಲಿದ್ದಾರೆ. ಯುವ ಮತ್ತು ವಯಸ್ಸಾದ ಪಾತ್ರದಲ್ಲಿ ಎಸ್​ಆರ್​ಕೆ ಕಾಣಿಸಿಕೊಳ್ಳಲಿದ್ದಾರೆ.

ನೆಟ್ಟಿಗರ ರಿಯಾಕ್ಷನ್ಸ್​​​: ಡಂಕಿ ಡ್ರಾಪ್ 4ರಲ್ಲಿ ಸಿನಿಮಾದ ಕಥಾವಸ್ತುವಿನ ಒಂದು ನೋಟ ಸಿಕ್ಕಂತಾಗಿದೆ. ಸಂಜು, ಪಿಕೆ, 3 ಈಡಿಯಟ್ಸ್ ಮತ್ತು ಮುನ್ನಾ ಭಾಯ್​​ ಅಂತಹ ಹಿಟ್ ಸಿನಿಮಾಗಳ ನಿರ್ದೇಶಕರು ಇದೇ ಮೊದಲ ಬಾರಿಗೆ ಎಸ್​ಆರ್​ಕೆ ಜೊತೆ ಕೈ ಜೋಡಿಸಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ನಿರೀಕ್ಷೆಗೆ ತಕ್ಕಂತೆ ಟ್ರೇಲರ್ ಮೂಡಿಬಂದಿದ್ದು, ಸಿನಿಪ್ರಿಯರು ಸಂಪೂರ್ಣ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಬಾಲಿವುಡ್​ನ ಐಕಾನ್​ಗಳು ಸೇರಿ ಸಿನಿಮಾ ಮಾಡಿರುವ ಹಿನ್ನೆಲೆ ಸಿನಿಪ್ರಿಯರು ಹಬ್ಬಾಚರಿಸುತ್ತಿದ್ದಾರೆ. ಟ್ರೇಲರ್​​ ವಿಕ್ಷಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. "ರಾಜ್‌ಕುಮಾರ್ ಹಿರಾನಿ ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ಕಿಂಗ್​ ಆಫ್​​ ಕಂಟೆಂಟ್​​ ಮೀಟ್ಸ್ ಬಾಲಿವುಡ್ ಕಿಂಗ್​​​​, ಡಂಕಿ ಟ್ರೇಲರ್​" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ರಾಜ್‌ಕುಮಾರ್ ಹಿರಾನಿ ಅವರು ಶಾರುಖ್ ಖಾನ್ ಜೊತೆ ಅತ್ಯುತ್ತಮ ಸಿನಿಮಾವನ್ನು ಯಾವಾಗ ಬೇಕಾದರೂ ತಂದೇ ತರುತ್ತಾರೆಂಬ ನಂಬಿಕೆ ನನ್ನಲ್ಲಿತ್ತು. ಡಂಕಿ ಟ್ರೇಲರ್​ ಈ ನಂಬಿಕೆಯನ್ನು ದೃಢಪಡಿಸಿದೆ'' ಎಂದು ತಿಳಿಸಿದ್ದಾರೆ.

  • Not upto the mark... Ghatya editing..
    This is not a Raju Hirani film. #DunkiTrailer 👎👎👎

    — Rajat Agrawal 📈 (@rajatag16) December 5, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಸೋಮವಾರವೂ ಭರ್ಜರಿ ಕಲೆಕ್ಷನ್​​: ಅನಿಮಲ್​​​​ ಬಾಕ್ಸ್ ಆಫೀಸ್​ ಪ್ರಯಾಣ ಅತ್ಯುತ್ತಮ

ಎಕ್ಸ್ ಬಳಕೆದಾರರೋರ್ವರು ಶಾರುಖ್ ಖಾನ್ ಅವರ ಹಿಂದಿನ ಪಠಾಣ್​ ಸಿನಿಮಾವನ್ನು ಉಲ್ಲೇಖಿಸಿ ಕಾಮೆಂಟ್​ ಮಾಡಿದ್ದಾರೆ. ಪಠಾಣ್​, ಜವಾನ್​ ಬಳಿಕ ಮತ್ತೊಂದು ಹಿಟ್​​ ಕೊಡಲು ಶಾರುಖ್​ ಸಜ್ಜಾಗಿದ್ದಾರೆ ಅನ್ನೋ ಅರ್ಥದಲ್ಲಿ ಕಾಮೆಂಟ್​ ಮಾಡಿದ್ದಾರೆ. ಅಲ್ಲದೇ ಸಲಾರ್​ ತಂಡವನ್ನೂ ಎಚ್ಚಿಸಿದ್ದಾರೆ. ಸಲಾರ್​ ಮತ್ತು ಡಂಕಿ ಒಂದೇ ದಿನ ತೆರೆಕಾಣಲಿದೆ. ಸಿನಿಮಾ ಬ್ಲಾಕ್​ಬಸ್ಟರ್ ಆಗಲಿದೆ ಅನ್ನೋ ಅರ್ಥದಲ್ಲಿ ಪ್ರತಿಕ್ರಿಯೆಗಳು ಬರುತ್ತಿವೆ. ಉಳಿದಂತೆ ಕೆಲವರಿಂದ ಟ್ರೇಲರ್​ ಸಾಧಾರಣವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಕಾಂಗರೂ ಸಿನಿಮಾ ಮೂಲಕ ಮತ್ತೆ ಖಾಕಿ ಖದರ್​ನಲ್ಲಿ ಅಬ್ಬರಿಸಲು ರೆಡಿಯಾದ ಆದಿತ್ಯ

ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ, ಅನಿಲ್ ಗ್ರೋವರ್, ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೋಮನ್ ಇರಾನಿ ಮತ್ತು ವಿಕ್ರಮ್ ಕೊಚ್ಚಾರ್ ಕೂಡ ನಟಿಸಿದ್ದಾರೆ. ಕನಿಕಾ ಧಿಲ್ಲೋನ್, ರಾಜ್​​ಕುಮಾರ್​ ಹಿರಾನಿ ಮತ್ತು ಅಭಿಜಿತ್ ಜೋಶಿ ಸೇರಿ ಬರೆದಿದ್ದಾರೆ. ಸಿನಿಮಾ ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ನಿರ್ಮಾಣಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.