ಬಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಾದ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅದ್ಭುತ ನಟನೆಯ ಪಠಾಣ್ ಸಿನಿಮಾ ಕಳೆದ 10 ದಿನಗಳಲ್ಲಿ ವಿಶ್ವದಾದ್ಯಂತ 729 ಕೋಟಿ ರೂಪಾಯಿ ಗಳಿಸಿದೆ. ಪಠಾಣ್ ಸಿನಿಮಾ ಜನವರಿ 25ರಂದು ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆ ಆಗಿದೆ. ಚಿತ್ರ ಬಿಡುಗಡೆಗೂ ಮುನ್ನ ತೀವ್ರ ಆಕ್ರೋಶ ಎದುರಿಸಿತ್ತು. ಚಿತ್ರ ತೆರೆಕಂಡ ಮೊದಲೆರಡು ದಿನಗಳು ಸಹ ಹಲವೆಡೆ ನಡೆದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದ್ರೀಗ ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲರ ಹುಬ್ಬೇರುವಂತೆ ಮಾಡಿದೆ.
-
Action aur entertainment ka 💥 combo #Pathaan is getting love across the world!Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 4, 2023 " class="align-text-top noRightClick twitterSection" data="
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/5VPnM9mHTY
">Action aur entertainment ka 💥 combo #Pathaan is getting love across the world!Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 4, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/5VPnM9mHTYAction aur entertainment ka 💥 combo #Pathaan is getting love across the world!Book your tickets now! https://t.co/SD17p6x9HI | https://t.co/VkhFng6vBj
— Yash Raj Films (@yrf) February 4, 2023
Celebrate #Pathaan with #YRF50 only at a big screen near you, in Hindi, Tamil and Telugu. pic.twitter.com/5VPnM9mHTY
ಪಠಾಣ್ ಯಶಸ್ಸು: ಹೊರ ದೇಶಗಳಲ್ಲಿ ಚಿತ್ರ 276 ಕೋಟಿ ರೂ. ಮತ್ತು ಭಾರತದಲ್ಲಿ 453 ಕೋಟಿ ರೂ. ಸೇರಿ ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ 729 ಕೋಟಿ ರೂ. ಆಗಿದೆ. ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಪಠಾಣ್ ಆಗಿದೆ.
-
5000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH
— Shah Rukh Khan (@iamsrk) February 4, 2023 " class="align-text-top noRightClick twitterSection" data="
">5000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH
— Shah Rukh Khan (@iamsrk) February 4, 20235000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH
— Shah Rukh Khan (@iamsrk) February 4, 2023
ಶಾರುಖ್ ಖಾನ್ ಹೀಗಂದ್ರು: ಪಠಾಣ್ ಸಿನಿಮಾದ ನೈಜ ಕಲೆಕ್ಷನ್ ಬಗ್ಗೆ ಪ್ರಶ್ನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಇಂದು ಸೂಪರ್ ಸ್ಟಾರ್ ಶಾರುಖ್ ಖಾನ್ ಸೂಕ್ತ ಉತ್ತರ ನೀಡಿದ್ದಾರೆ. ಶಾರುಖ್ ಖಾನ್ ತಮ್ಮ ಅಭಿಮಾನಿಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಟ್ವಿಟರ್‌ನಲ್ಲಿ 'ಆಸ್ಕ್ ಮಿ ಎನಿಥಿಂಗ್' / askSRK ಸೆಷನ್ ಆಯೋಜಿಸುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇಂದು ಅಭಿಮಾನಿಗಳೊಂದಿಗೆ ನಡೆದ ಟ್ವಿಟರ್ ಸಂವಾದದ ಸಮಯದಲ್ಲಿ, ಓರ್ವ ಬಳಕೆದಾರರು ಪಠಾಣ್ ಸಿನಿಮಾದ ನಿಜವಾದ ಕಲೆಕ್ಷನ್ ಎಷ್ಟು ಎಂದು ಕೇಳಿದ್ದಾರೆ.
ಹಾಸ್ಯಭರಿತ ಮತ್ತು ಉಲ್ಲಾಸದ ಪ್ರತಿಕ್ರಿಯೆಗಳಿಗೆ ಹೆಸರುವಾಸಿಯಾಗಿರುವ ಎಸ್ಆರ್ಕೆ ಈ ಪ್ರಶ್ನೆಗೂ ಅದೇ ಮಾರ್ಗದಲ್ಲಿ ಉತ್ತರ ನೀಡಿದ್ದಾರೆ. ''5,000 ಕೋಟಿ ಪ್ರೀತಿ, 3,000 ಕೋಟಿ ಮೆಚ್ಚುಗೆ, 3,250 ಕೋಟಿ ಅಪ್ಪುಗೆ, 2 ಬಿಲಿಯನ್ ಸ್ಮೈಲ್ಸ್ ಮತ್ತು ಇನ್ನೂ ಕಲೆಕ್ಷನ್ ಬಿರುಸಿನಿಂದ ಸಾಗಿದೆ. ನಿಮ್ಮ ಅಕೌಂಟೆಂಟ್ ಏನು ಹೇಳುತ್ತಿದ್ದಾರೆ ? ಎಂದು ಶಾರುಖ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಆ್ಯಕ್ಷನ್ ಸ್ಟಾರ್ ಆಗಿ ಒಂದು ಯುಗವನ್ನೇ ಸೃಷ್ಟಿಸಲಿದ್ದಾರೆ: ಎಸ್ಆರ್ಕೆ ಬಗ್ಗೆ ಸಿದ್ಧಾರ್ಥ್ ಆನಂದ್ ಗುಣಗಾನ
ಪಠಾಣ್ ಕಲೆಕ್ಷನ್: ಪಠಾಣ್ ಚಿತ್ರ ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಐದನೇ ದಿನ 112 ಕೋಟಿ (ಭಾರತದಲ್ಲಿ 70 ಕೊಟಿ ರೂ. + ವಿದೇಶಗಳಲ್ಲಿ 42 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಆರನೇ ದಿನ 41.5 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಏಳನೇ ದಿನ 43 (ಭಾರತದಲ್ಲಿ 25.50 ಕೊಟಿ ರೂ. + ವಿದೇಶಗಳಲ್ಲಿ 16 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎಂಟನೇ ದಿನಕ್ಕೆ 667 ಕೋಟಿ ರೂಪಾಯಿ, 9ನೇ ದಿನಗಳಲ್ಲಿ 667 ಕೋಟಿ ರೂಪಾಯಿ ಸಂಗ್ರಹಿಸಿದ ಪಠಾಣ್ ಈವರೆಗೆ ಅಂದರೆ ಒಟ್ಟು 10 ದಿನಗಳಲ್ಲಿ ವಿಶ್ವದಾದ್ಯಂತ 729 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಯಶ್ ರಾಜ್ ಫಿಲ್ಮ್ಸ್ ತಿಳಿಸಿದೆ.