ETV Bharat / entertainment

Jawan: ಜವಾನ್​ ಪೋಸ್ಟರ್- ಆ್ಯಕ್ಷನ್​ ಅವತಾರದಲ್ಲಿ ಎಸ್​ಆರ್​ಕೆ, ವಿಜಯ್​ ಸೇತುಪತಿ, ನಯನತಾರಾ! - ವಿಜಯ್​ ಸೇತುಪತಿ

Jawan new poster: ಸೂಪರ್​ ಸ್ಟಾರ್​ಗಳಾದ ಶಾರುಖ್​ ಖಾನ್​, ವಿಜಯ್​ ಸೇತುಪತಿ ಮತ್ತು ನಯನತಾರಾ ಅವರನ್ನೊಳಗೊಂಡ ಜವಾನ್​ ಪೋಸ್ಟರ್ ಬಿಡುಗಡೆಯಾಗಿದೆ.

jawan new poster
ಜವಾನ್​ ಪೋಸ್ಟರ್
author img

By

Published : Aug 10, 2023, 5:09 PM IST

ಜವಾನ್​. ಈ ಸಾಲಿನ ಬಹುನಿರೀಕ್ಷಿತ ಚಿತ್ರ. 2023ರಲ್ಲೇ ತೆರೆಕಾಣುತ್ತಿರುವ ಶಾರುಖ್​ ನಟನೆಯ ಮತ್ತೊಂದು ಆ್ಯಕ್ಷನ್​​ ಸಿನಿಮಾ. ಬಹು ಸಮಯದಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ರೊಮ್ಯಾಂಟಿಕ್​ ಹೀರೋ ಶಾರುಖ್​ ಅವರ ಎರಡನೇ ಆ್ಯಕ್ಷನ್​ ಚಿತ್ರವಿದು. ಸೌತ್​ ಸೂಪರ್​ ಸ್ಟಾರ್​ಗಳಾದ ವಿಜಯ್​ ಸೇತುಪತಿ ಮತ್ತು ನಯನತಾರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಚಿತ್ರರಂಗದವರೊಂದಿಗೆ ಬಾಲಿವುಡ್​ ಕಿಂಗ್​ ಕೈ ಜೋಡಿಸಿದ್ದು, ಚಿತ್ರದ ಮೇಲಿನ ಸಿನಿಪ್ರಿಯರ ನಿರೀಕ್ಷೆ ಬೆಟ್ಟದಷ್ಟಿದೆ.

ಅನೇಕ ಸಮಯದಿಂದ ಸದ್ದು ಮಾಡುತ್ತಿರುವ 'ಜವಾನ್​' ಇನ್ನೊಂದು ತಿಂಗಳಲ್ಲಿ ತೆರೆಕಾಣಲಿದೆ. ಸಿನಿಮಾ ಸಂಬಂಧ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಚಿತ್ರತಂಡ ಈಗಾಗಲೇ ವಿಭಿನ್ನ ಪ್ರಚಾರ ಪ್ರಾರಂಭಿಸಿದೆ. ಈ ಹೊತ್ತಿನಲ್ಲಿ ಶಾರುಖ್​ ಸಿನಿಮಾದ ಪ್ರಮುಖ ನಟರನ್ನೊಳಗೊಂಡ ಹೊಸ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಪೋಸ್ಟರ್​​ನಲ್ಲಿ ಸೂಪರ್​​ ಸ್ಟಾರ್​​ಗಳಾದ ಎಸ್​ಆರ್​ಕೆ ಮತ್ತು ವಿಜಯ್​ ಸೇತುಪತಿ ಮುಖಾಮುಖಿಯಾಗಿದ್ದಾರೆ. ಜೊತೆಗೆ, ನಯನತಾರಾ ಕೂಡ ಆ್ಯಕ್ಷನ್​ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.

ಎಸ್​ಆರ್​ಕೆ, ವಿಜಯ್​ ಸೇತುಪತಿ, ನಯನತಾರಾ ಅವರ ಪಾತ್ರಗಳನ್ನು ನೋಡಲು ಅವಕಾಶ ಮಾಡಿಕೊಟ್ಟ ಪೋಸ್ಟರ್ ಚಿತ್ರದ ಬಗೆಗಿನ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಆ್ಯಕ್ಷನ್​ ಅವತಾರದ ಪೋಸ್ಟರ್​ ಅನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ವೇದಿಕೆಯಲ್ಲಿ ಶೇರ್​ ಮಾಡಿರುವ ಪಠಾಣ್​ ನಟ, ''ದಿ ಡೇರಿಂಗ್​, ಡ್ಯಾಝ್ಲಿಂಗ್​​, ಡೇಂಜರೆಸ್​'' ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್​ 7 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಜವಾನ್​ ವಿಶ್ವಾದ್ಯಂತ ತೆರೆಕಾಣಲಿದೆ. ಸದ್ಯ ಪೋಸ್ಟರ್ ಅನಾವರಣಗೊಳ್ಳುವ ಮೂಲಕ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ.

ಇದನ್ನೂ ಓದಿ: Kiara Advani: ಕಣ್ಣಲ್ಲೇ ಕೊಲ್ತಾರೆ ಕಿಯಾರಾ ಅಡ್ವಾಣಿ ಅಂದಕ್ಕೆ ಹುಬ್ಬೇರಿಸಿದ ಅಭಿಮಾನಿ

ಶಾರುಖ್​ ಖಾನ್​​ ಪೋಸ್ಟರ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ಗೆ ಬಂದು ಸೇರಿದರು. ಎಂದಿನಂತೆ ಫೈಯರ್​ ಮತ್ತು ಲವ್​ ಸಿಂಬಲ್​ನೊಂದಿಗೆ ಕಾಮೆಂಟ್​ ವಿಭಾಗವನ್ನು ತುಂಬಿ ತುಳುಕಿಸಿದರು. ಅಭಿಮಾನಿಯೋರ್ವರು ಕಾಮೆಂಟ್​ ಮಾಡಿ, ಸಿನಿಮಾ ಬಿಡುಗಡೆ ಆಗೋವರೆಗೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಪೋಸ್ಟರ್​ಗೆ ಪ್ರತಿಕ್ರಿಯಿಸಿದ ಫ್ಯಾನ್​ ಓರ್ವರು, '' ಡೇರಿಂಗ್​​ - ಎಸ್​ಆರ್​ಕೆ, ಡ್ಯಾಝ್ಲಿಂಗ್​​ - ನಯನತಾರಾ, ಡೇಂಜರೆಸ್​ - ವಿಜಯ್​ ಸೇತುಪತಿ'' ಎಮದು ಬರೆದಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಶಾರುಖ್​ ಪೋಸ್ಟ್​ಗೆ ಕಾಮೆಂಟ್​ ಮಾಡಿ, ''ಪಠಾಣ್​ ನಮ್ಮನ್ನು ಕ್ಷಮಿಸಿ, ನಾವೀಗ ಜವಾನ್​ ಜೊತೆಗಿದ್ದೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್​ ಅಬ್ಬರ - 'ಕಿಂಗ್​ ಆಫ್​ ಕೋಥಾ' ಯಶಸ್ಸಿಗೆ ಶಾರುಖ್ ಶುಭ ಹಾರೈಕೆ

ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲೀ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಶಾರುಖ್​, ವಿಜಯ್​ ಸೇತುಪತಿ, ನಯನತಾರಾ ಅಲ್ಲದೇ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಪ್ರಮುಖ ಭಾಗಗಳಲ್ಲಿ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿಧಿ ಡೊಗ್ರಾ ಕೂಡ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.