ETV Bharat / entertainment

'ಪಠಾಣ್'​ ಆ್ಯಕ್ಷನ್ ಸೀಕ್ವೆನ್ಸ್‌ ಶೂಟಿಂಗ್‌ ಹೇಗಿತ್ತು?: ಶಾರುಖ್‌ ಖಾನ್, ನಿರ್ದೇಶಕರ ಅನುಭವ ಕೇಳಿ.. - ಬಾಲಿವುಡ್ ಸ್ಟಾರ್ ಶಾರುಖ್ ಖಾನ್

ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಚಿತ್ರದ ಸಾಹಸ ದೃಶ್ಯಗಳ ಬಗ್ಗೆ ನಿರ್ದೇಶಕ ಸಿದ್ದಾರ್ಥ್ ಆನಂದ್ ಕೆಲವು ಇಂಟ್ರಸ್ಟಿಂಗ್​ ವಿಷಯಗಳನ್ನು ಹೇಳಿದ್ದಾರೆ.

shah rukh khan reacts Pathaan is the First movie ever to shut down Burj Khalifa boulevard dubai

author img

By

Published : Feb 9, 2023, 8:23 PM IST

ಮುಂಬೈ (ಮಹಾರಾಷ್ಟ್ರ): ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ 'ಪಠಾಣ್' ಚಿತ್ರ ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಹಲವು ವಿವಾದಗಳ ನಡುವೆಯೂ ತೆರೆಕಂಡ ಚಿತ್ರ ಇದೀಗ 1,000 ಕೋಟಿ ರೂ.ಯತ್ತ ಸಾಗಿದೆ. ಚಿತ್ರದಲ್ಲಿ ಮೂಡಿಬಂದ ಆ್ಯಕ್ಷನ್​ ಸೀಕ್ವೆನ್ಸ್‌ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬ ಅಂಶ ಇದೀಗ ಗುಟ್ಟಾಗಿ ಉಳಿದಿಲ್ಲ.

ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ನಡುವೆ ನಡೆಯುವ ಸಾಹಸಮಯ ದೃಶ್ಯಗಳನ್ನು ಅತ್ಯದ್ಭುತವಾಗಿ ಸೆರೆ ಹಿಡಿದಿದ್ದರಿಂದ ಚಿತ್ರಪ್ರೇಮಿಗಳು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಹಾಲಿವುಡ್​ ಚಿತ್ರಗಳಲ್ಲಿ ತೋರಿಸುವಂತೆ ಈ ಚಿತ್ರದಲ್ಲಿಯೂ ತಲೆ ತಿರುಗುವ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೆಣೆದಿದ್ದಾದರೂ ಹೇಗೆ ಎಂಬುದು ಹಲವರ ಪ್ರಶ್ನೆಯಾಗಿತ್ತು.

ಕುತೂಹಲಕಾರಿ ಪ್ರಶ್ನೆಗಳಿಗೆ ಚಿತ್ರ ನಿರ್ದೇಶಕ ಸಿದ್ದಾರ್ಥ್ ಆನಂದ್ ಉತ್ತರ ನೀಡಿದ್ದಾರೆ. "ಇದೊಂದು ಇತಿಹಾಸ. ಚಿತ್ರೀಕರಣದ ಸಾಹಸಮಯ ದೃಶ್ಯಗಳಿಗಳಿಗಾಗಿ ಅಷ್ಟೇ ಹರಸಾಹಸ ಪಡಬೇಕಾಯಿತು. ನನ್ನ ಸಿನಿ ಜರ್ನಿಯಲ್ಲಿ ಇದು ಮಹತ್ತರ ಮತ್ತು ಹೆಮ್ಮೆ ಪಡುವಂತಹ ಘಟನೆ. ಚಿತ್ರದಲ್ಲಿ ತೋರಿಸಲಾದ ಚಲಿಸುವ ರೈಲಿನ ಮೇಲಿನ ನಡೆಯುವ ದೃಶ್ಯ, ವಿಮಾನ ಮತ್ತು ಗಾಳಿಯ ನಡುವಿನ ದೃಶ್ಯ ಸೇರಿದಂತೆ ಹಲವು ಆ್ಯಕ್ಷನ್​ ಸೀಕ್ವೆನ್​ಗಳನ್ನು ಬುರ್ಜ್ ಖಲೀಫಾದ ಸುತ್ತಲೂ ಚಿತ್ರೀಕರಿಸಲಾಗಿದೆ. ದುಬೈನಂತಹ ರಾಷ್ಟ್ರದಲ್ಲಿ ಈ ರೀತಿಯ ಚಿತ್ರೀಕರಣ ಮಾಡುವುದು ಸುಲಭವಲ್ಲ. ಆದರೆ, ಪಠಾಣ್​ ಚಿತ್ರ ಮಾಡಿದೆ. ದುಬೈ ಪೊಲೀಸರು ಮತ್ತು ಅಧಿಕಾರಿಗಳ ಸಹಾಯದಿಂದ ಇದು ಸಾಧ್ಯವಾಯಿತು" ಎಂದು ಹೇಳಿದರು.

ಕಾಠಿಣ್ಯಕರ ಆ್ಯಕ್ಷನ್ ಸೀಕ್ವೆನ್ಸ್‌ಗಳು ಈವರೆಗೆ ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಕಾಣಸಿಗುತ್ತಿದ್ದವು. ದುಬೈನಲ್ಲಿ ಈ ಸೀಕ್ವೆನ್ಸ್ ಶೂಟ್ ಮಾಡುವುದು ಮೊದಲು ನಮಗೂ ಅಸಾಧ್ಯ ಎನ್ನಿಸಿತ್ತು. ಆದರೆ, ಚಿತ್ರದ ಚಿತ್ರೀಕರಣಕ್ಕೆ ಈ ಸ್ಥಳ​ ನಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಬುರ್ಜ್ ಖಲೀಫಾ ಸಂಪರ್ಕ ಮಾಡುವ ಎಲ್ಲ ಮುಖ್ಯ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಬೇಕಾಯಿತು. ಇದಕ್ಕಾಗಿ ಅನುಮತಿ ಪಡೆಯಲಾಯಿತು. ಈ ರೀತಿ ಮಾರ್ಗಗಳನ್ನು ಬಂದ್​ ಮಾಡಿ ಚಿತ್ರೀಕರಿಸಿದ್ದು ಇತಿಹಾಸದಲ್ಲಿ ಇದೇ ಮೊದಲು. ಇದೊಂದು ಮಹತ್ತರ ಸಾಧನೆ ಎಂದು ನಿರ್ದೇಶಕರು ತಿಳಿಸಿದರು.

ಇದೇ ವೇಳೆ ಶಾರುಖ್ ಖಾನ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನನಗೆ ಮತ್ತು ಭಾರತೀಯ ಚಿತ್ರರಂಗದಿಂದ ಬರುವ ಪ್ರತಿಯೊಬ್ಬರಿಗೂ ದುಬೈ ತುಂಬಾ ದಯೆ ತೋರಿಸುವ ಸ್ಥಳ. ಇದು ಹೆಚ್ಚು ಟ್ರಾಫಿಕ್ ಸ್ಥಳವಾಗಿವಾದ್ದರಿಂದ ಈ ರೀತಿಯ ಸಾಹಸ ಮಾಡಿದ್ದು ಸಾಧನೆ. ಹಾಗಾಗಿ ಅನುಮತಿಗಾಗಿ ಸ್ಥಳೀಯ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದ್ದ ನಮ್ಮ ಪ್ರೊಡಕ್ಷನ್ ಟೀಮ್, ನನ್ನ ಮತ್ತು ಪಠಾಣ್​ ಚಿತ್ರದ ಬಗ್ಗೆ ಮನವರಿಕೆ ಮಾಡಿತ್ತು. ಅದರಂತೆ ಟ್ರಾಫಿಕ್ ಪೊಲೀಸರು ಅನುಮತಿ ನೀಡಲು ಒಪ್ಪಿಕೊಂಡರು. ಅವರು ನಮ್ಮ ಬ್ರಾಂಡ್ ಅಂಬಾಸಿಡರ್, ಸಾಧ್ಯವಾದಷ್ಟು ಬೇಗ ಶೂಟಿಂಗ್​ ಮುಗಿಸುವಂತೆ ಕೆಲವು ಷರತ್ತುಗಳನ್ನು ಹಾಕಿ ಒಪ್ಪಿಗೆ ನೀಡಿದ್ದರು. ಅದರಂತೆ ಚಿತ್ರೀಕರಣ ಮಾಡಿ ಮುಗಿಸಿದೆವು" ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

"ನನ್ನ ಪ್ರಕಾರ ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮಕ್ಕೆ ದುಬೈ ಹೇಳಿ ಮಾಡಿಸಿದ ಸ್ಥಳ. ಅತ್ಯುತ್ತಮ ಉಪಕರಣಗಳಿಂದ ಎಲ್ಲ ಸೌಲಭ್ಯಗಳು ಅಲ್ಲಿವೆ. ಆದ್ದರಿಂದ ದುಬೈ ಪ್ರವಾಸವೇ ಅದ್ಭುತ" ಎಂದು ಶ್ರೀಮಂತ ರಾಷ್ಟ್ರವನ್ನು ಶಾರುಖ್ ಖಾನ್ ಕೊಂಡಾಡಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ಕೆಜಿಎಫ್​ ನಟಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.