ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರ ಬಹುನಿರೀಕ್ಷಿತ ಚಿತ್ರ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ( Mrs Chatterjee vs Norway) ಚಿತ್ರ ಇಂದು ತೆರೆಕಂಡಿದೆ. ರಾಣಿ ಮುಖರ್ಜಿ ನಟನೆಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಸಹ ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆಯಲ್ಲಿ ತಮ್ಮ ಆಪ್ತ ಗೆಳತಿ ರಾಣಿ ಮುಖರ್ಜಿ ಅವರ ಅಭಿನಯ ಹಾಡಿ ಹೊಗಳಿದ್ದಾರೆ.
- " class="align-text-top noRightClick twitterSection" data="
">
ಸಾಗರಿಕಾ ಚಕ್ರವರ್ತಿ ಅವರ ದಿ ಜರ್ನಿ ಆಫ್ ಎ ಮದರ್ ಕಥೆ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ರಾಣಿ ಮುಖರ್ಜಿ ಈ ಚಿತ್ರದಲ್ಲಿ, ತಮ್ಮ ಮಕ್ಕಳನ್ನು ರಕ್ಷಿಸಲು ರಾಜ್ಯದ ವಿರುದ್ಧ ಹೋರಾಡುವ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಶಿಮಾ ಚಿಬ್ಬರ್ ನಿರ್ದೇಶನದ ಈ ಚಿತ್ರದಲ್ಲಿ ನೀನಾ ಗುಪ್ತಾ, ಜಿಮ್ ಸರ್ಭ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ನಟಿಸಿದ್ದಾರೆ. ಇಂದು ದೇಶದ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ.
ರಾಣಿ ಮುಖರ್ಜಿ ನಟನೆಗೆ ಎಸ್‌ಆರ್‌ಕೆ ಮೆಚ್ಚುಗೆ: ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾದಲ್ಲಿ ನಟಿ ರಾಣಿ ಮುಖರ್ಜಿ ದೇಬಿಕಾ ಚಟರ್ಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮ್ಮ ಮಕ್ಕಳ ರಕ್ಷಣೆಗಾಗಿ ನಾರ್ವೇಜಿಯನ್ ಸರ್ಕಾರದ ವಿರುದ್ಧ ಹೋರಾಡುವ ತಾಯಿಯ ಕಥೆ ಇದು. ಈ ಸಿನಿಮಾ ವೀಕ್ಷಿಸಿದ ಸೂಪರ್‌ಸ್ಟಾರ್ ಶಾರುಖ್ ಖಾನ್ ರಾಣಿ ಮುಖರ್ಜಿ ನಟನೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
-
What a tremendous effort by the whole team of Mrs Chatterjee vs Norway. My Rani shines in the central role as only a Queen can. Director Ashima, shows a human struggle with such sensitivity. Jim, @AnirbanSpeaketh, #Namit, #SaumyaMukherjee, #BalajiGauri all shine. A must watch. pic.twitter.com/xKrphoY6SG
— Shah Rukh Khan (@iamsrk) March 16, 2023 " class="align-text-top noRightClick twitterSection" data="
">What a tremendous effort by the whole team of Mrs Chatterjee vs Norway. My Rani shines in the central role as only a Queen can. Director Ashima, shows a human struggle with such sensitivity. Jim, @AnirbanSpeaketh, #Namit, #SaumyaMukherjee, #BalajiGauri all shine. A must watch. pic.twitter.com/xKrphoY6SG
— Shah Rukh Khan (@iamsrk) March 16, 2023What a tremendous effort by the whole team of Mrs Chatterjee vs Norway. My Rani shines in the central role as only a Queen can. Director Ashima, shows a human struggle with such sensitivity. Jim, @AnirbanSpeaketh, #Namit, #SaumyaMukherjee, #BalajiGauri all shine. A must watch. pic.twitter.com/xKrphoY6SG
— Shah Rukh Khan (@iamsrk) March 16, 2023
ಶಾರುಖ್ ಖಾನ್ ಟ್ವೀಟ್: ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರತಂಡದ ಪ್ರಯತ್ನದ ಬಗ್ಗೆ ಮಾತನಾಡಲು ಶಾರುಖ್ ಖಾನ್ ಟ್ವಿಟ್ಟರ್ ಖಾತೆ ತೆಗೆದುಕೊಂಡರು. ಇಡೀ ತಂಡದ ಅದ್ಭುತ ಪ್ರಯತ್ನ. ಕೇಂದ್ರ ಪಾತ್ರದಲ್ಲಿ ನನ್ನ ರಾಣಿ ಮಿಂಚಿದ್ದಾರೆ, ಆ ಪಾತ್ರ ನಿಭಾಯಿಸಲು ರಾಣಿಗೆ ಮಾತ್ರ ಸಾಧ್ಯ. ನಿರ್ದೇಶಕಿ ಆಶಿಮಾ ಅವರು ಸೂಕ್ಷ್ಮವಾಗಿ ಮಾನವ ಹೋರಾಟದ ಕಥೆಯನ್ನು ತೆರೆ ಮೇಲೆ ತೋರಿಸಿದ್ದಾರೆ. ಉಳಿದ ಕಲಾವಿದರದ್ದೂ ಸಹ ಉತ್ತಮ ನಟನೆ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ರಾಣಿ ಮುರ್ಜಿ ಮತ್ತು ಎಸ್‌ಆರ್‌ಕೆ ಬಹಳ ಹಿಂದಿನಿಂದಲೂ ಆತ್ಮೀಯ ಸ್ನೇಹಿತರು. ಕುಚ್ ಕುಚ್ ಹೋತಾ ಹೈ, ಚಲ್ತೇ ಚಲ್ತೆ, ಕಭಿ ಖುಷಿ ಕಭಿ ಗಮ್, ಪಹೇಲಿ, ಕಭಿ ಅಲ್ವಿದಾ ನಾ ಕೆಹನಾ ಮತ್ತು ವೀರ್ ಝಾರಾ ಸೇರಿದಂತೆ ಹಲವು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ನವರಸನಾಯಕ ಜಗ್ಗೇಶ್ ಜನ್ಮದಿನ: ಏಳು-ಬೀಳು ಮೆಟ್ಟಿ ನಿಂತ ಸಾಧಕ
ಬಾಲಿವುಡ್ ನಟಿ ಕಾಜೋಲ್ ಸಹ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ರಾಣಿ ಮತ್ತು ಕಾಜೋಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದು ಬಾಲಿವುಡ್‌ನ ಅತ್ಯುತ್ತಮ ಸ್ನೇಹ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಚಿತ್ರ ಸೂಪರ್ ಹಿಟ್ ಆಗಿತ್ತು. ಇಂದು ಇನ್ಸ್ಟಾಗ್ರಾಮ್ನಲ್ಲಿ ನಟಿ ಕಾಜೋಲ್, ಸಂಬಂಧಿಯಾಗಿರುವ ರಾಣಿ ಮತ್ತು ಅವರ ಸಹೋದರಿ ತನಿಶಾ ಮುಖರ್ಜಿ ಅವರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸ್ಫೂರ್ತಿಯ ಸೆಲೆಯಾಗಿದ್ದ 'ಅಪ್ಪು' ಬದುಕಿನ ಚಿತ್ರಣ: Photos