ETV Bharat / entertainment

ಮುದ್ದಾದ ವಿಡಿಯೋ ಹಂಚಿಕೊಂಡು ಪುತ್ರಿಯ ಗುಣಗಾನ ಮಾಡಿದ ಕಿಂಗ್​​​​​​​ ಖಾನ್​​ - ಸುಹಾನಾ ಖಾನ್

ಶಾರುಖ್ ಖಾನ್​​ ಅವರು ಪುತ್ರಿ ಸುಹಾನಾ ಬಗ್ಗೆ ಗುಣಗಾನ ಮಾಡಿದ್ದಾರೆ.

Shah Rukh Khan praised Suhana
ಸುಹಾನಾ ಬಗ್ಗೆ ಶಾರುಖ್ ಖಾನ್​​ ಗುಣಗಾನ
author img

By

Published : Apr 13, 2023, 5:33 PM IST

ಬಾಲಿವುಡ್​​ ಸೂಪರ್ ಸ್ಟಾರ್ ಶಾರುಖ್​ ಖಾನ್​ ಪುತ್ರಿ ​ಸುಹಾನಾ ಖಾನ್ ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಪ್ರಾಡಕ್ಟ್ ಬ್ರ್ಯಾಂಡ್​ ಅಂಬಾಸಿಡರ್​ ಅಗಿದ್ದಾರೆ. ಬಾಲಿವುಡ್​​ ಸಮಾರಂಭಗಳಲ್ಲಿ ತಮ್ಮ ಗ್ಲಾಮರಸ್​ ಲುಕ್‌ ಮೂಲಕ ಗಮನ ಸೆಳೆಯುತ್ತಿದ್ದ ಸುಹಾನಾ ಖಾನ್ ಅವರೀಗ ಮೆಬಿಲಿನ್ ಬ್ಯೂಟಿ ಪ್ರಾಡಕ್ಟ್​​ ಬ್ರ್ಯಾಂಡ್ ಅಂಬಾಸಿಡರ್. ಈ ಹಿನ್ನೆಲೆ ಶಾರುಖ್​ ಪುತ್ರಿ ಈಗ ಹಾಟ್​ ಟಾಪಿಕ್ ಆಗಿದ್ದಾರೆ​.

ಸಿನಿಮಾಗೂ ಮುನ್ನ ​ಸುಹಾನಾ ಖಾನ್ ಅವರು ಇಷ್ಟು ದೊಡ್ಡ ಮಟ್ಟದ ಬ್ಯೂಟಿ ಪ್ರಾಡಕ್ಟ್ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಖಾನ್​ ಕುಟುಂಬದ ಅಭಿಮಾನಿಗಳು ಮಾತ್ರ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ತಂದೆ ಶಾರುಖ್ ಖಾನ್ ಅವರು ಕೂಡ ಈ ಕಾರ್ಯಕ್ರಮದ ಸುಹಾನಾ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯಕ್ಕೆ ಕಲ್ ಹೋ ನಾ ಹೋ ಹಾಡು ಹಾಕಿದ್ದಾರೆ.

ಟ್ವಿಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೂಪರ್‌ಸ್ಟಾರ್, "ಮೆಬಿಲಿನ್ ಮಗುಗೆ ಅಭಿನಂದನೆಗಳು. ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದೀರಿ. ಚೆನ್ನಾಗಿ ಮಾತನಾಡಿದ್ರಿ. ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದಿರಿ. ಲವ್ ಯು ಮೈ ಲಿಟಲ್​​ ಲೇಡಿ'' ಎಂದು ಬರೆದಿದ್ದಾರೆ. ತಮ್ಮ ತಂದೆಯ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸುಹಾನಾ "ನಿಮ್ಮನ್ನು ಪ್ರೀತಿಸುತ್ತೇನೆ! ವಿಡಿಯೋ ಪೋಸ್ಟ್ ತುಂಬಾ ಮುದ್ದಾಗಿದೆ ಎಂದು ಬರೆದು ಹಲವು ಹಾರ್ಟ್ ಮತ್ತು ಕಿಸ್ ಎಮೋಜಿಗಳನ್ನು ಹಾಕಿದ್ದಾರೆ.

ಇದಕ್ಕೂ ಮುನ್ನ ಸುಹಾನಾ ಅವರ ಚೊಚ್ಚಲ ಚಿತ್ರ 'ದಿ ಆರ್ಚೀಸ್‌'ನ ಫಸ್ಟ್ ಲುಕ್​​ ಹಂಚಿಕೊಂಡಾಗ ಕಿಂಗ್ ಖಾನ್ ಪ್ರತಿಕ್ರಿಯಿಸಿದ್ದರು. "ಸುಹಾನಾ ಖಾನ್ ನೆನಪಿಡಿ, ನೀವು ಪರಿಪೂರ್ಣರಾಗಲು ಹೋಗುತ್ತಿಲ್ಲ. ಆದರೆ, ನೀವು ನೀವಾಗಿರುವುದು ಅದಕ್ಕೆ ಹತ್ತಿರವಾಗಿದೆ. ದಯೆಯಿಂದಿರಿ ಮತ್ತು ಓರ್ವ ನಟರಾಗಿ ಕೆಲಸ ಮಾಡಿ. ಚಪ್ಪಾಳೆಗಳನ್ನು ಇಟ್ಟುಕೊಳ್ಳಲು ಅವು ನಿಮ್ಮದಲ್ಲ. ಪರದೆಯ ಮೇಲಿನ ನಿಮ್ಮ ಪಾತ್ರ ಮಾತ್ರ ನಿಮಗೆ ಸೇರಿರುತ್ತದೆ. ನೀವು ಬಹಳ ದೂರ ಸಾಗಿದ್ದೀರಿ ಮಗು. ಆದರೆ, ಜನರ ಹೃದಯದ ಹಾದಿಗೆ ಅಂತ್ಯವಿಲ್ಲ. ಮುಂದೆ ಸಾಗಿ ಮತ್ತು ನಿಮ್ಮಿಂದ ಸಾಧ್ಯವಾದಷ್ಟು ಎಲ್ಲರನ್ನು ನಗುವಂತೆ ಮಾಡಿ. ಕ್ಯಾಮೆರಾ, ಆ್ಯಕ್ಷನ್! ಮತ್ತೊಬ್ಬ ಕಲಾವಿದರಿಗೆ ಸಹಿ ಹಾಕಿದೆ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಬ್ಯೂಟಿ ಪ್ರೊಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​​ ಆಗಿ ಶಾರುಖ್ ಖಾನ್​​ ಪುತ್ರಿ: ಜಾಲತಾಣದಲ್ಲಿ ಚರ್ಚೆ ಶುರು

1991ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿದರು. ಸ್ಟಾರ್ ದಂಪತಿಯ ಹಿರಿಯ ಮಗ ಆರ್ಯನ್ (25 ವರ್ಷಗಳು), ಕಳೆದ ವರ್ಷ ಐಷಾರಾಮಿ ಬ್ರ್ಯಾಂಡ್ ಒಂದನ್ನು ಪ್ರಾರಂಭಿಸಿದ್ದಾರೆ. ಮಗಳು ಸುಹಾನಾ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ. ಎಸ್‌ಆರ್‌ಕೆ ಮತ್ತು ಗೌರಿ ಪ್ರಸ್ತುತ ಮುಂಬೈನಲ್ಲಿದ್ದು, ಕಿರಿಯ ಪುತ್ರ ಅಬ್ರಾಹಾಂ (9 ವರ್ಷ) ವಿದ್ಯಾಭ್ಯಾಸ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಹೆಸರಾಂತ ಬ್ಯೂಟಿ ಪ್ರಾಡಕ್ಟ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಖಾನ್​ ಪುತ್ರಿ: ಟ್ವಿಟರ್‌ನಲ್ಲಿ ಸುಹಾನಾ ಟ್ರೆಂಡಿಂಗ್

ಜೋಯಾ ಅಖ್ತರ್ ನಿರ್ಮಾಣದ ದಿ ಆರ್ಚೀಸ್‌ ವೆಬ್​ ಸಿರೀಸ್​ನಲ್ಲಿ ಸುಹಾನಾ ನಟಿಸಲಿದ್ದಾರೆ. ವೆರೋನಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಚೊಚ್ಚಲ ಚಿತ್ರವಿದು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಕಪೂರ್ ಈ ಚಿತ್ರದಲ್ಲಿದ್ದಾರೆ. ಅಗಸ್ತ್ಯ ನಂದಾ ಜೊತೆ ಡೇಟಿಂಗ್ ವಿಚಾರವಾಗಿಯೂ ಸುಹಾನಾ ಸದ್ದು ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.