ಶಾರುಖ್ ಖಾನ್ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಬಗ್ಗೆ ಯಾವುದೇ ಅನುಮಾನವಿಲ್ಲ. ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಶಾರುಖ್ ಸಹ ಅಭಿಮಾನಿಗಳಿಗೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಕೆಲವು ಬಾರಿ ಅಂತಹ ಪರಿಸ್ಥಿತಿಗಳಿಂದ ಹೊರಬರಲು ಎಸ್‌ಆರ್‌ಕೆ ಹರಸಾಹಸ ಪಡೋದುಂಟು.
ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡಿದ್ದರು. ನಿರೀಕ್ಷೆಯಂತೆ ಅವರ ಸುತ್ತ ಅಭಿಮಾನಿಗಳು ಬಂದು ಸೇರಿದರು. ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಶಾಂತವಾಗಿರುವ ಎಸ್‌ಆರ್‌ಕೆ, ಈ ಬಾರಿ ಅಭಿಮಾನಿಯೊಬ್ಬರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಶಾಂತತೆಯನ್ನು ಕಳೆದುಕೊಂಡರು.
- " class="align-text-top noRightClick twitterSection" data="
">
ಆನ್ಲೈನ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ, ಶಾರುಖ್ ಖಾನ್ ಸಂಪೂರ್ಣ ಕಪ್ಪು ಬಣ್ಣದ ಉಡುಪನ್ನು ಧರಿಸಿ ಬರುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಅವರನ್ನು ಸುತ್ತುವರೆದರು. ಎಸ್‌ಆರ್‌ಕೆ ಮುಂದೆ ಸಾಗುತ್ತಿದ್ದಂತೆ, ಅಭಿಮಾನಿಗಳು ಶಾರುಖ್.. ಶಾರುಖ್.. ಎಂದು ಕೂಗತೊಡಗಿದರು. ನಟನೊಂದಿಗೆ ಬಾಡಿಗಾರ್ಡ್ಸ್, ಮ್ಯಾನೇಜರ್ ಸಹ ಇದ್ದರು. ಆದಾಗ್ಯೂ, ಪಠಾಣ್ ನಟ ತಮ್ಮ ಶಾಂತತೆ ಕಳೆದುಕೊಂಡಿದ್ದಾರೆ. ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯನ್ನು ದೂರ ಸರಿಸಿದ್ದಾರೆ.
ಪಾಪರಾಜಿ ಖಾತೆಯಿಂದ ಈ ವಿಡಿಯೋ ಹೊರಬಿದ್ದ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರು ನಟನ ನಡವಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್‌ಆರ್‌ಕೆ ಅವರ ನಡವಳಿಕೆ ಮತ್ತು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯನ್ನು ಅವರು ತಳ್ಳಿದ ರೀತಿಗೆ ಕೆಲ ನೆಟಿಜನ್‌ಗಳು ಅಸಮಾಧಾನಗೊಂಡಿದ್ದಾರೆ. ಮತ್ತೆ ಕೆಲವರು ಶಾರುಖ್ ಬೆಂಬಲಕ್ಕೆ ನಿಂತಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, 'ಅನಗತ್ಯ ಆ್ಯಟಿಟ್ಯೂಡ್' ಎಂದು ಬರೆದಿದ್ದಾರೆ. ಇನ್ನೊಬ್ಬರು 'ಯಾಕೆ ಜನರು ಇಂತಹ ಅಹಂಕಾರಿ ನಟರ ಸುತ್ತಲೂ ಓಡುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ನಟನ ಬೆಂಬಲಕ್ಕೆ ನಿಂತ ಅಭಿಮಾನಿಗಳು, 'ಎಸ್‌ಆರ್‌ಕೆ ಅಭಿಮಾನಿಯನ್ನು ತಳ್ಳಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರದಂದು ಸಹ ನಟ ಇದೇ ಪರಿಸ್ಥಿತಿ ಎದುರಿಸಿದ್ದರು. ಶ್ರೀನಗರ ಏರ್ಪೋರ್ಟ್ನಲ್ಲಿ ಪಠಾಣ್ ಹೀರೋ ಕಾಣಿಸಿಕೊಂಡಿದ್ದರು. ಆ ವೇಳೆಯೂ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಾಕಷ್ಟು ಸಂಖ್ಯೆಯ ಅಭಿಮಾನಿಗಳ ನಡುವೆ ಶಾರುಖ್ ಹೆಣಗಾಡುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.
ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ಮೇಘನಾ ರಾಜ್: 'ತತ್ಸಮ ತದ್ಭವ' ಪೋಸ್ಟರ್ ರಿಲೀಸ್
ಶಾರುಖ್ ಖಾನ್ ಸಿನಿಮಾ ವಿಚಾರ ಗಮನಿಸುವುದಾದರೆ, ಪಠಾಣ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಮುಂದಿನ ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಡಂಕಿ ಮತ್ತು ಜವಾನ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಡಂಕಿ ಸಿನಿಮಾ ಶೂಟಿಂಗ್ ಸಲುವಾಗಿ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದರು. ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ 'ಟೈಗರ್ 3' ಚಿತ್ರದಲ್ಲೂ ಶಾರುಖ್ ಖಾನ್ ಅತಿಥಿ ಪಾತ್ರ ವಹಿಸಲಿದ್ದಾರೆ. ಇದೇ ಮೇ 8ರಿಂದ 'ಟೈಗರ್ 3' ಸಿನಿಮಾದ ವಿಶೇಷ ಸೀಕ್ವೆನ್ಸ್‌ನ ಶೂಟಿಂಗ್ ಪ್ರಾರಂಭವಾಗಲಿದೆ. ಎಸ್‌ಆರ್‌ಕೆ ಮತ್ತು ಸಲ್ಲು ಅವರನ್ನು ಒಟ್ಟಾಗಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: ಎಸ್‌ಆರ್‌ಕೆ - ಸಲ್ಲು ಶೂಟಿಂಗ್ಗೆ ದಿನ ನಿಗದಿ: ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ