ETV Bharat / entertainment

Jawan​​: ಪ್ರಿಯಾಮಣಿ, ಅನಿರುಧ್ ರವಿಚಂದರ್​ ಜೊತೆ ಕುಣಿದು ಕುಪ್ಪಳಿಸಿದ ಶಾರುಖ್​​ - ವಿಜಯ್​ ಸೇತುಪತಿಯನ್ನಪ್ಪಿಕೊಂಡ ಎಸ್​ಆರ್​ಕೆ - ಅನಿರುಧ್ ರವಿಚಂದರ್

Jawan Pre Release Event: ತಮಿಳುನಾಡಿನಿಂದ ಜವಾನ್​​ ಪ್ರೀ ರಿಲೀಸ್​ ಈವೆಂಟ್​ನ ಫೋಟೋ, ವಿಡಿಯೋಗಳು ಒಂದಾದ ಬಳಿಕ ಒಂದರಂತೆ ಹೊರಬರುತ್ತಿವೆ.

Shah Rukh Khan dances with Priyamani and Anirudh Ravichander
ಯಾಮಣಿ, ಅನಿರುಧ್ ರವಿಚಂದರ್​ ಜೊತೆ ಶಾರುಖ್​ ಡ್ಯಾನ್ಸ್
author img

By ETV Bharat Karnataka Team

Published : Aug 30, 2023, 7:42 PM IST

ಇಂಡಿಯನ್​ ಸೂಪರ್​ ಸ್ಟಾರ್​​ ಶಾರುಖ್ ಖಾನ್​​​​ ಮತ್ತೊಮ್ಮೆ ದಾಖಲೆ ಸೃಷ್ಟಿಸಲು ಸಜ್ಜಾಗಿದ್ದಾರೆ. ಪಠಾಣ್​ ಬಳಿಕ ಬರುತ್ತಿರುವ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾ ಜವಾನ್​​. ಬಿಡುಗಡೆ ಹೊಸ್ತಿಲ್ಲಿರುವ ಜವಾನ್​​ ಸಿನಿಮಾದ ಪ್ರೀ ರಿಲೀಸ್​ ಈವೆಂಟ್​​ ಇಂದು ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಶ್ರೀ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅಟ್ಲೀ, ಶಾರುಖ್​ ಖಾನ್​​, ಪ್ರಿಯಾಮಣಿ, ವಿಜಯ್​ ಸೇತುಪತಿ, ಗಾಯಕ ಅನಿರುಧ್ ರವಿಚಂದರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇವರ ವಿಡಿಯೋ, ಫೋಟೋಗಳು ಸದ್ದು ಮಾಡುತ್ತಿವೆ.

ಮೊದಲು ಚೆನ್ನೈನ ಶ್ರೀ ಸಾಯಿರಾಮ್​ ಇಂಜಿನಿಯರಿಂಗ್​ ಕಾಲೇಜಿನ ವೇದಿಕೆಯ ಫೋಟೋ, ವಿಡಿಯೋಗಳು ವೈರಲ್​ ಆದವು. ಬಳಿಕ ಶಾರುಖ್​ ಖಾನ್​​ ಎಂಟ್ರಿ ವಿಡಿಯೋಗಳು ಸದ್ದು ಮಾಡಿದವು. ಇದೀಗ ಪ್ರಿಯಾಮಣಿ, ವಿಜಯ್​ ಸೇತುಪತಿ, ಗಾಯಕ ಅನಿರುಧ್ ರವಿಚಂದರ್ ಸೇರಿದಂತೆ ಹಲವರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

57ರ ಹರೆಯದ ಶಾರುಖ್​ ಖಾನ್​​ ಸಖತ್​ ಸ್ಟೈಲಿಶ್​ ಆಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟರು. ನಟನ ಎನರ್ಜಿ ಯುವಕರಿಗೆ ಸ್ಫೂರ್ತಿ ತುಂಬುವಂತಿತ್ತು. ಜವಾನ್​​ನಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿಜಯ್​ ಸೇತುಪತಿ ಸಹ ಕಾರ್ಯಕ್ರಮಕ್ಕೆ ಆಗಮಿಸಿದರು. ಶಾರುಖ್​ ಖಾನ್​ ವೇದಿಕೆ ಬಳಿ ಬರುತ್ತಿದ್ದಂತೆ ದಕ್ಷಿಣ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್​ ಸೇತುಪತಿ ಮತ್ತು ಸಂಗೀತ ಸಂಯೋಜಕ - ಗಾಯಕ ಅನಿರುಧ್ ರವಿಚಂದರ್​ ಅವರನ್ನು ಬಿಗಿದಪ್ಪಿ ಮಾತನಾಡಿಸಿದರು. ಬಳಿಕ ಚಿತ್ರತಂಡದವರನ್ನು ಮಾತನಾಡಿಸುತ್ತ ಮುನ್ನಡೆದರು.

ಜವಾನ್​ ಪ್ರೀ ರಿಲೀಸ್​ ಈವೆಂಟ್​ನ ಫೋಟೋ, ವಿಡಿಯೋಗಳು ಒಂದಾದ ಮೇಲೊಂದರಂತೆ ಹೊರ ಬರುತ್ತಿವೆ. ಒಂದು ವಿಡಿಯೋದಲ್ಲಿ ಗಾಯಕ ಅನಿರುಧ್ ರವಿಚಂದರ್ ಮತ್ತು ಸೂಪರ್​ ಸ್ಟಾರ್ ಶಾರುಖ್​ ಖಾನ್​ ಕಾಣಿಸಿಕೊಂಡಿದ್ದಾರೆ. ಜವಾನ್​ ಚಿತ್ರದ ಜಿಂದಾ ಬಂದಾ ಹಾಡಿಗೆ ಶಾರುಖ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡನ್ನು ವೇದಿಕೆಯಲ್ಲಿ ಸ್ವತಃ ಅನಿರುಧ್ ಅವರೇ ಹಾಡಿದ್ದಾರೆ. ಗಾಯಕ ರವಿಚಂದರ್​ ಜವಾನ್​ ಸಾಂಗ್​ ಅನ್ನು ಹಾಡಿದ್ದು ಮಾತ್ರವಲ್ಲದೇ ಎಸ್​ಆರ್​ಕೆ ಜೊತೆ ಮೈ ಕುಣಿಸಿದ್ದಾರೆ. ಇಬ್ಬರೂ ಎಂಗ್​ ಆ್ಯಂಡ್​ ಎನರ್ಜಿಟಿಕ್ ವೈಬ್​ ಬೀರಿದ್ದಾರೆ.

ಇದನ್ನೂ ಓದಿ: Jawan Grand Event: ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ -​ ವಿಡಿಯೋ ನೋಡಿದ್ರಾ?

ಮತ್ತೊಂದು ವಿಡಿಯೋದಲ್ಲಿ ಸೂಪರ್​ ಸ್ಟಾರ್​ ಎಸ್​ಆರ್​ಕೆ ಸಹ ನಟರಾದ ಪ್ರಿಯಾಮಣಿ ಮತ್ತು ಸುನೀಲ್​ ಗ್ರೋವರ್​ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸೂಪರ್​ ಹಿಟ್​ ಸಿನಿಮಾ ಚೆನ್ನೈ ಎಕ್ಸ್​ಪ್ರೆಸ್​ನ ಗೆಟ್​ ಆನ್​ ದ ಡ್ಯಾನ್ಸ್​ ಫ್ಲೋರ್​ಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಜವಾನ್​ ಬಿಡುಗಡೆಗೆ ದಿನಗಣನೆ: ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.