ಮುಂಬೈ(ಮಹಾರಾಷ್ಟ್ರ): ದುಬಾರಿ ವಾಚುಗಳಿಗೆ ಸುಂಕ ಕಟ್ಟದ ಕಾರಣಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಡೆದು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಸುಮಾರು 7 ಲಕ್ಷ ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಮುಂಬೈ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ತಡೆದದ್ದು ಶಾರುಖ್ ಖಾನ್ ಅವರನ್ನಲ್ಲ, ಬದಲಿಗೆ ಅವರ ಅಂಗರಕ್ಷಕ ರವಿ ಸಿಂಗ್ ಅವರನ್ನು ಎಂದು ತಿಳಿದುಬಂದಿದೆ.
- " class="align-text-top noRightClick twitterSection" data="
">
ಕಸ್ಟಮ್ಸ್ ಇಲಾಖೆಯ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಕಸ್ಟಮ್ಸ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾನ್ ಅವರ ಬಾಡಿ ಗಾರ್ಡ್ ರವಿ ಸಿಂಗ್ ಅವರನ್ನು ತಡೆದು ವಿಚಾರಣೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾರುಖ್ ಖಾನ್ ತಮ್ಮ ತಂಡದೊಂದಿಗೆ ದುಬೈನಿಂದ ಶುಕ್ರವಾರ ರಾತ್ರಿ ಮುಂಬೈಗೆ ಮರಳಿದ್ದರು. ಆ ವೇಳೆ, ಅಂಗರಕ್ಷಕ ಕಸ್ಟಮ್ಸ್ ಸುಂಕ ತುಂಬಿದ್ದಾರೆ. ಇದಾದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ದದ್ಲಾನಿ ದುಬೈನಿಂದ ಮರಳಿದ ಕೂಡಲೇ ಮುಂಬೈ ವಿಮಾನ ನಿಲ್ದಾಣ ತೊರೆದಿದ್ದರು. ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿಲ್ಲ. ಕೇವಲ ತಮ್ಮ ವಸ್ತುಗಳಿಗೆ ಸುಂಕ ಕಟ್ಟಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಯಾವುದೇ ದಂಡ ವಿಧಿಸಿಲ್ಲ ಎಂದು ಇಲಾಖೆ ತಿಳಿಸಿದೆ.
ಅಂಗರಕ್ಷಕ ರವಿ ಲಗೇಜ್ ಸಮೇತ ಬರುತ್ತಿದ್ದಾಗ ಗೇಟ್ ನಂಬರ್ 8ರಲ್ಲಿ ತಪಾಸಣೆಗೆ ನಿಲ್ಲಿಸಲಾಯಿತು. ಅವರ ಬಳಿ ಎರಡು ಐಷಾರಾಮಿ ವಾಚ್ಗಳು ಹಾಗೂ ನಾಲ್ಕು ಖಾಲಿ ವಾಚ್ ಬಾಕ್ಸ್ ಗಳಿದ್ದವು. ಇದಲ್ಲದೇ ಅಲ್ಲಿ ಅವರ ಲಗೇಜ್‌ನಲ್ಲಿ ಐವಾಚ್ ಸೀರೀಸ್ 8ರ ಖಾಲಿ ಬಾಕ್ಸ್ ಕೂಡ ಇತ್ತು ಎಂದು ಮುಂಬೈ ಕಸ್ಟಮ್ಸ್ ತಿಳಿಸಿದೆ.
ಎಐಯು ಎಲ್ಲಾ ಬಾಕ್ಸ್‌ಗಳ ಮೇಲೆ ಸುಂಕ ವಿಧಿಸಿದೆ ಮತ್ತು ಶಾರುಖ್ ಖಾನ್‌ಗೆ ಸುಂಕವನ್ನು ಮಾತ್ರ ಪಾವತಿಸಲು ಹೇಳಿದೆ. ಅವರು ಒಪ್ಪಿಕೊಂಡು ಸಂಪೂರ್ಣ ಸುಂಕವನ್ನು ಪಾವತಿಸಿದ್ದಾರೆ. 6.83 ಲಕ್ಷ ರೂ ಕಸ್ಟಮ್ ಸುಂಕವನ್ನು ಪಾವತಿಸಿದ ನಂತರ ಅವರೆಲ್ಲರಿಗೂ ಹೋಗಲು ಅನುಮತಿ ನೀಡಲಾಯಿತು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ಶಾರುಖ್ ಖಾನ್ ವಿಚಾರಣೆ - ಕಾರಣ?