ETV Bharat / entertainment

ಡಂಕಿ ಪ್ರಮೋಶನ್​ ಶುರು: ಸ್ಟೈಲಿಶ್​ ಲುಕ್​ನಲ್ಲಿ ಕಿಂಗ್​​ ಖಾನ್​​, ನಾಳೆ ಸಾಂಗ್​​ ರಿಲೀಸ್! - ಡಂಕಿ ಪ್ರಮೋಷನ್

Dunki Promotions: ಡಂಕಿ ಸಿನಿಮಾ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ.

shah rukh khan
ನಟ ಶಾರುಖ್ ಖಾನ್
author img

By ETV Bharat Karnataka Team

Published : Nov 21, 2023, 6:39 PM IST

ಇಂಡಿಯನ್​​ ಸೂಪರ್‌ ಸ್ಟಾರ್ ಶಾರುಖ್ ಖಾನ್ ಮುಖ್ಯಭೂಮಿಕೆಯ 'ಡಂಕಿ' ಬಿಡುಗಡೆಗೆ ಇನ್ನೊಂದೇ ತಿಂಗಳು ಬಾಕಿ. ನಾಯಕ ಮತ್ತು ನಿರ್ಮಾಪಕನಾಗಿ ಕೆಲಸ ಮಾಡಿರುವ ಕಿಂಗ್​​ ಖಾನ್​​​, ಸಿನಿಮಾ ಬಿಡುಗಡೆಗೆ ಸರಿಯಾಗಿ ಒಂದು ತಿಂಗಳು ಬಾಕಿ ಇರುವಾಗ ಪ್ರಚಾರ ಪ್ರಾರಂಭಿಸಿದ್ದಾರೆ. ಡಂಕಿ ಪ್ರಮೋಶನ್​ ಭಾಗವಾಗಿ ಸಖತ್​ ಸ್ಟೈಲಿಶ್​ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಡಂಕಿ ಪ್ರಮೋಶನ್​​: ಪಠಾಣ್​ ಎಂಬ ಬ್ಲಾಕ್​ಬಸ್ಟರ್ ಮೂಲಕ ವರ್ಷಾರಂಭ ಮಾಡಿದ ಎಸ್​ಆರ್​ಕೆ ಜವಾನ್​ ಮೂಲಕ ಮತ್ತೊಮ್ಮೆ ವಿಜಯೋತ್ಸವ ಆಚರಿಸಿದ್ದರು. 58ರ ಹರೆಯದ ನಟ ಡಂಕಿ ಮೂಲಕ 2023 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪಣ ತೊಟ್ಟಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ಬಿಡುಗಡೆಗೆ ಎಸ್​ಆರ್​ಕೆ ಸಜ್ಜಾಗಿದ್ದಾರೆ.

ಕಿಂಗ್​ ಖಾನ್​ಗೆ ಪ್ರೀತಿಯ ಮಳೆ: ಈ ನಿಟ್ಟಿನಲ್ಲಿ ಬಹುನಿರೀಕ್ಷಿತ ಸಿನಿಮಾದ ಪ್ರಚಾರ ಆರಂಭಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಿಂಗ್ ಖಾನ್ ಸಖತ್​ ಸ್ಟೈಲಿಶ್​ ಅಂಡ್​​ ಹ್ಯಾಂಡ್ಸಮ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಲಾಗಿದೆ. 58ರ ಹರೆಯದಲ್ಲೂ ಯುವಕರೂ ನಾಚುವಂತ ಫಿಟ್​ ಅಂಡ್​ ಹ್ಯಾಂಡ್ಸಮ್​ ಲುಕ್​ ಒಳಗೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.

ಫೋಟೋ ಹಂಚಿಕೊಂಡ ಪೂಜಾ ದದ್ಲಾನಿ: ಹೌದು, ಇಂದು ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸೂಪರ್​ ಸ್ಟಾರ್​ನ ಸ್ಟನ್ನಿಂಗ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಖಾನ್ ಯುವಕನಂತೆ ಕಾಣಿಸಿಕೊಂಡಿದ್ದಾರೆ. ಡಾರ್ಕ್ ಬ್ಲ್ಯೂ ಸೂಟ್, ಬೂದು ಬಣ್ಣದ ಪ್ಯಾಂಟ್‌, ವೈಟ್ ಶರ್ಟ್​​ನಲ್ಲಿ ಯುವಕನಂತೆ ಕಂಗೊಳಿಸಿದ್ದಾರೆ. ಮೂರು ಆಕರ್ಷಕ ಫೋಟೋಗಳನ್ನು ಹಂಚಿಕೊಂಡ ಪೂಜಾ ದದ್ಲಾನಿ, "30 ದಿನದಲ್ಲಿ ಡಂಕಿ ಬರಲಿದೆ'' ಎಂಬರ್ಥದಲ್ಲಿ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ: 'ಕಾಫಿ ವಿತ್ ಕರಣ್​'ನಲ್ಲಿ ಪಾಸ್ಟ್ ರಿಲೇಶನ್​ಶಿಪ್ ಚರ್ಚೆ:​ 'ಗೌಪ್ಯತೆ' ಗೌರವಿಸಿ ಎಂದ ಕಾರ್ತಿಕ್ ಆರ್ಯನ್

ಪೂಜಾ ಅವರು ಶಾರುಖ್​ ಅವರ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ಕಿಂಗ್ ಖಾನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಡಂಕಿ ಸಿನಿಮಾದ ಮೊದಲ ಹಾಡಿನ ಅಪ್​ಡೇಟ್ಸ್ ಅನ್ನು ನಟ ಹಂಚಿಕೊಂಡಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪೋಸ್ಟರ್ ಹಂಚಿಕೊಂಡ ನಟ, ನಾಳೆ 'ಲಟ್ಟ್ ಪುಟ್ಟ್' ಗಯಾ ಹಾಡು ಅನಾವರಣಗೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪೋಸ್ಟರ್‌ನಲ್ಲಿ, ನಟ ಶಾರುಖ್​ ಖಾನ್​ ಅವರ ಕೈ ಹಿಡಿದು ತಾಪ್ಸಿ ಪನ್ನು ಹೆಜ್ಜೆ ಹಾಕುತ್ತಿದ್ದು, ಇದೊಂದು ಪ್ರೇಮಗೀತೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಹಾಡಿಗೆ ಅಭಿಮಾನಿಗಳು ಕಾತರರಾಗಿದ್ದು, ಸಿನಿಮಾ ಡಿಸೆಂಬರ್​​ 22 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.

ಇದನ್ನೂ ಓದಿ: ಅಪ್ಪನ ಜೊತೆಗೆ ತೆರೆ ಹಂಚಿಕೊಳ್ಳಲು ಸಿದ್ದಳಾದ ಸುಹಾನಾ ಖಾನ್​; ಮತ್ತೊಂದು ಆ್ಯಕ್ಷನ್​ ಚಿತ್ರದಲ್ಲಿ 'ಕಿಂಗ್​' ಖಾನ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.