ಪೌರಾಣಿಕ ಕಥೆ ಆಧರಿಸಿ ತೆರೆಗೆ ಬಂದ 'ಶಾಕುಂತಲಂ' ಸಿನಿಮಾ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿತ್ತು. ಕಳೆದ ತಿಂಗಳು ಸೌತ್ ಟಾಪ್ ನಟಿ ಸಮಂತಾ ರುತ್ ಪ್ರಭು ಭರ್ಜರಿ ಪ್ರಚಾರ ಮಾಡಿದ್ದರು. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತೆ ಎಂದೇ ಅಂದಾಜಿಸಲಾಗಿತ್ತು. ಆದ್ರೆ ಲೆಕ್ಕಾಚಾರ ತಪ್ಪಾದಂತೆ ಕಾಣುತ್ತಿದೆ. 'ಶಾಕುಂತಲಂ' ಬಾಕ್ಸ್ ಆಫೀಸ್ ಕೆಲಕ್ಷನ್ ಸಂಖ್ಯೆ ಇಳಿದಿದೆ.
ಮೊದಲ ಬಾರಿಗೆ ಸಮಂತಾ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾಕುಂತಲಂ ಸಿನಿಮಾ ಶುಕ್ರವಾರ ಅದ್ಧೂರಿಯಾಗಿ ತೆರೆಕಂಡಿದೆ. ಆದ್ರೆ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವ ಸದ್ದು ಮಾಡಿಲ್ಲ. ಮಿಶ್ರ ಪ್ರತಿಕ್ರಿಯೆ ಪಡೆದ ಚಿತ್ರ ಎರಡನೇ ದಿನ ಕೇವಲ 1.5 ಕೋಟಿ ರೂ. ಗಳಿಸಿ ಈವರೆಗೆ ಒಟ್ಟು 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರ, ತೆಲುಗು ಆಕ್ಯುಪೆನ್ಸಿ (ಚಿತ್ರಮಂದಿರಗಳಲ್ಲಿ ಆಸನ ಭರ್ತಿ) ಶೇ. 20.59 ಮತ್ತು ಹಿಂದಿ ಆಕ್ಯುಪೆನ್ಸಿ ಶೇ. 8.35ರಷ್ಟಿತ್ತು.
ದೇಶದ ಹೆಚ್ಚಿನ ಪ್ರದೇಶಗಳು ಶನಿವಾರ ಹೊಸ ವರ್ಷ ಆಚರಿಸಿದ (ವಿಶು ಹಬ್ಬ) ಕಾರಣ, ಅಂಕಿ ಅಂಶಗಳು ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಇಂದು ರಜಾ ದಿನವಿದ್ದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇದೆ. ಸಮಂತಾರ ಬಹು ನಿರೀಕ್ಷೆೆಯ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಚಿತ್ರದ, ಚಿತ್ರತಂಡಕ್ಕೆ ನಿಜವಾದ ಪರೀಕ್ಷೆಯಾಗಿದೆ.
ಜಯದೇವ್ ಮೋಹನ್, ಮೋಹನ್ ಬಾಬು, ಪ್ರಕಾಶ್ ರಾಜ್, ಸಚಿನ್ ಖೇಡೇಕರ್, ಅದಿತಿ ಬಾಲನ್, ಜಿಶು ಸೇನ್‌ಗುಪ್ತಾ, ಮಧೂ ಮತ್ತು ಅಲ್ಲು ಅರ್ಹಾ ಅವರನ್ನೊಳಗೊಂಡಿರುವ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ದೇವ್ ಮೋಹನ್ ಜೊತೆ ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕವಿ ಕಾಳಿದಾಸರ ಜನಪ್ರಿಯ ಭಾರತೀಯ ಶ್ರೇಷ್ಠ ನಾಟಕ ಅಭಿಜ್ಞಾನ ಶಾಕುಂತಲಂ ಆಧರಿಸಿದೆ. ಶಕುಂತಲಾ ರಾಜ ದುಷ್ಯಂತನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಧೂರ್ವಾಸ ಮುನಿಯ ಶಾಪದ ಪರಿಣಾಮವಾಗಿ ಸವಾಲುಗಳನ್ನು ಎದುರಿಸುವ ರಾಜ ದುಷ್ಯಂತ ಮತ್ತು ಶಕುಂತಲೆಯ ಹೃದಯಸ್ಪರ್ಶಿ ಪ್ರೇಮಕಥೆ ಹೊಂದಿದೆ.
ಇದನ್ನೂ ಓದಿ: ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್ ಭೂಮಿ ಮೇಲಿರಲು ಇವರೇ ಕಾರಣ
ಗುಣಾ ಟೀಮ್‌ವರ್ಕ್ಸ್ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣದ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಚಲನಚಿತ್ರದ ಬಗ್ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಅನೇಕರು ಸಮಂತಾ ಅಭಿನಯವನ್ನು ಹೊಗಳಿದ್ದಾರೆ. ಸಮಂತಾರ ವೃತ್ತಿಜೀವನದಲ್ಲೇ ಅತ್ಯುತ್ತಮ ಅಭಿನಯದ ಚಿತ್ರವಿದು ಎಂದು ಹಲವರು ಹೇಳಿದ್ದಾರೆ. ಕೆಲವರು VFX ಚೆನ್ನಾಗಿದೆ ಎಂದು ಹೇಳಿದ್ದರೂ, ಟ್ರೇಲರ್ ನೀಡಿದ ಭರವಸೆ ತಲುಪಿಲ್ಲ ಎಂದು ಕೆಲವು ವಿಮರ್ಶಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್ ಫಿಕ್ಸ್
ಸಮಂತಾ ಕೊನೆಯದಾಗಿ ವೈಜ್ಞಾನಿಕ ಥ್ರಿಲ್ಲರ್ ಚಲನಚಿತ್ರ ಯಶೋದಾದಲ್ಲಿ ನಟಿಸಿದ್ದಾರೆ. ಇದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ರೊಮ್ಯಾಂಟಿಕ್ ಡ್ರಾಮಾ ಖುಷಿ ಚಿತ್ರದಲ್ಲಿ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸುತ್ತಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ ಸಿಟಾಡೆಲ್‌ನಲ್ಲಿ ಬಾಲಿವುಡ್ ವರುಣ್ ಧವನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.