ETV Bharat / entertainment

ವೈದ್ಯರು, ನರ್ಸ್​​ಗಳ ಸವಾಲುಗಳನ್ನು ತೋರಿಸಲಿದೆ ಸೆಪ್ಟಂಬರ್ 13 ಸಿನಿಮಾ - ಮಾಜಿ ಶಾಸಕ ಇವಾನ್ ನಿಗ್ಲಿ

ವೈದ್ಯರು, ನರ್ಸ್​​ಗಳ ಸವಾಲುಗಳನ್ನು ತೋರಿಸಲಿರುವ ಸೆಪ್ಟಂಬರ್ 13 ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

September 13 movie will shows challenges of doctors nurses
ವೈದ್ಯರು, ನರ್ಸ್​​ಗಳ ಸವಾಲುಗಳನ್ನು ತೋರಿಸಲಿದೆ ಸೆಪ್ಟಂಬರ್ 13 ಸಿನಿಮಾ
author img

By

Published : Aug 23, 2022, 3:08 PM IST

ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ನಿರ್ಮಾಣ ಮಾಡಿರುವ ‘ಸೆಪ್ಟಂಬರ್ 13 ಸಿನಿಮಾ’ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹೆಸರಾಂತ ನಿರ್ಮಾಪಕ ಡಾ ರಾಜಾ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ.

ಕೋವಿಡ್ ಸಮಯದಲ್ಲಿ ಇಡೀ ಜಗತ್ತೇ ನಲುಗಿ ಹೋಗಿತ್ತು. ಈ ಸಮಯದಲ್ಲಿ ಸಮರ್ಪಣಾ ಭಾವದಿಂದ ದುಡಿದವರು ವೈದ್ಯಕೀಯ ಕ್ಷೇತ್ರದವರು. ಅದರಲ್ಲಿಯೂ ನರ್ಸಿಂಗ್ ಸಮುದಾಯದ ಸೇವೆ ಅಪಾರ. ನರ್ಸಿಂಗ್ ಕುರಿತ ಕಥೆಯನ್ನೊಳಗೊಂಡ ಸೆಪ್ಟಂಬರ್ 13 ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯಾ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದಾರೆ. ಶ್ರೀಯಾರಿಧಿಬನ್ ನಾಯಕಿಯಾಗಿ ಈ ಸೆಪ್ಟಂಬರ್ 13 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಕೆಲ ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ.

September 13 movie will shows challenges of doctors nurses
ಸೆಪ್ಟಂಬರ್ 13 ಸಿನಿಮಾ

ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಇವಾನ್ ನಿಗ್ಲಿ, ಈ ಕಥೆ ಬರೆಯೋದಿಕ್ಕೆ ಕಾರಣ ಕೋವಿಡ್​ ತಂದ ಸಂಕಷ್ಟ. ಮೊದಲು ನನಗೆ, ಬಳಿಕ ಮಗನಿಗೆ ಕೋವಿಡ್ ಸೋಂಕು ತಗುಲಿತ್ತು. ಆ ನಂತರ ನನ್ನ ಪತ್ನಿ, ಬಳಿಕ ನನ್ನ ಮಗನಿಗೆ ಕೊರೊನಾ ವಕ್ಕರಿಸಿತ್ತು. ಆಗ ಪರಿಸ್ಥಿತಿ ತುಂಬಾ ಸೀರಿಯಸ್ ಆಗಿಬಿಡ್ತು. ಈ‌ ಸನ್ನಿವೇಶದ ಆಧಾರದ ಮೇಲೆ ಕಥೆ ಬರೆದಿದ್ದೇನೆ. ನಾನು ಕಿರುಚಿತ್ರಗಳು, ಧಾರಾವಾಹಿ ಮಾಡಿದ್ದೇನೆ. ಈ ಮೊದಲ ಮಲಯಾಳಂ, ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೂರನೇ ಚಿತ್ರ. ಈ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿರುವುದರ ಜೊತೆಗೆ ನಟನೆ ಕೂಡ ಮಾಡಿರುವುದಾಗಿ ಹೇಳಿದರು.

ಬಳಿಕ ಹಿರಿಯ ನಟಿ ವಿನಯಾ ಪ್ರಸಾದ್ ಮಾತನಾಡಿ, ನರ್ಸ್ ಜೀವನ ಬಹಳ ಚಾಲೆಂಜಿಂಗ್. ಪ್ರತಿಯೊಬ್ಬರು ನರ್ಸ್​​ಗಳನ್ನು ಭೇಟಿ ಮಾಡಿರುತ್ತೇವೆ. ಅವರು ಪ್ರತಿ ನಿಮಿಷ, ರೋಗ ರುಜಿನೆ, ಕೋಪ, ಆತಂಕದ ಜೊತೆಯಲ್ಲೇ ಜೀವನ ಮಾಡುತ್ತಾರೆ. ಅವರು ತಮ್ಮ ಮನೆಗೆ ಹೋಗಿ ಹೇಗೆ ಜೀವನ ಮಾಡ್ತಾರೆ? ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸ್ತಾರೆ? ಅನ್ನೋದು ಚಿತ್ರದ ತಿರುಳು ಎಂದು ವಿವರಿಸಿದರು.

ಇದನ್ನೂ ಓದಿ: ಇಂದು ಸಂಜೆ ಡೊಳ್ಳು ಸಿನಿಮಾ ನೋಡಲಿರುವ ಸಿದ್ದರಾಮಯ್ಯ: ಚಿತ್ರತಂಡದಿಂದ ವಿಶೇಷ ಆಹ್ವಾನ

ನಿರ್ದೇಶಕ ಡಾ. ರಾಜಾ ಬಾಲಕೃಷ್ಣನ್ ಮಾತನಾಡಿ, ಒಂದಷ್ಟು ಹಿರಿಯರ ಜೊತೆಗೆ ಒಂದಷ್ಟು ಹೊಸಬರು ಸೇರಿ ಸಿನಿಮಾ ಮಾಡಿದ್ದೇವೆ. ನಾನು ಕನ್ನಡ ಇಂಡಸ್ಟ್ರಿಗೆ ಹೊಸಬ. ಹೊಸಬರು ನನಗೆ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತರು. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸೆಪ್ಟಂಬರ್ 13 ಚಿತ್ರತಂಡ ಬ್ಯುಸಿಯಾಗಿದೆ. ಸದ್ಯದಲ್ಲೇ ಈ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.