ETV Bharat / entertainment

ಲೋಹಿತಾಶ್ವ ವಿಧಿವಶ.. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಇನ್ನಿಲ್ಲ - Senior Actor Lohithashwa news

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ಕಳೆದ ತಿಂಗಳು ಹೃದಯಾಘಾತವಾಗಿತ್ತು. ಬಳಿಕ ಅವರನ್ನು ಕುಮಾರಸ್ವಾಮಿ ಲೇಔಟ್​ನಲ್ಲಿರುವ ಸಾಗರ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಹಿರಿಯ ನಟ ಲೋಹಿತಾಶ್ವ ವಿಧಿವಶ
ಹಿರಿಯ ನಟ ಲೋಹಿತಾಶ್ವ ವಿಧಿವಶ
author img

By

Published : Nov 8, 2022, 5:46 PM IST

Updated : Nov 8, 2022, 7:46 PM IST

ಬೆಂಗಳೂರು: ಕನ್ನಡ ಹಿರಿಯ ನಟ ಲೋಹಿತಾಶ್ವ ಅವರು ಮಂಗಳವಾರ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 2.30ರ ಸುಮಾರಿಗೆ ಅಪೋಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿದ್ದು, ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದರು.

ಲೋಹಿತಾಶ್ವ ಮಗ ಶರತ್ ಲೋಹಿತಾಶ್ವ ಮಾತನಾಡಿ, ಕುಮಾರಸ್ವಾಮಿ ಲೇಔಟ್​​ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ತಂದೆಗೆ ಚಿಕಿತ್ಸೆ ಕೊಡುಸುತ್ತಿದ್ವಿ. ಆದರೆ ವಿಧಿಯಾಟದ ಮುಂದೆ ತಂದೆಯವರು ಬದುಕಲಿಲ್ಲ. ಕುಮಾರಸ್ವಾಮಿ ಲೇಔಟ್​​ನಲ್ಲಿರುವ ಮನೆಗೆ ತಂದೆಯ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಬೆಳಗ್ಗೆ 11.30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ. ಬಳಿಕ ತುಮಕೂರು ಬಳಿಯ ಸ್ವಗ್ರಾಮವಾದ ತೋಂಡಗೇರೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸವುದಾಗಿ ಹೇಳಿದ್ದಾರೆ.

ಶರತ್ ಲೋಹಿತಾಶ್ವ

ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೋಹಿತಾಶ್ವ ನಿವೃತ್ತ ಉಪನ್ಯಾಸಕರು ಹಾಗೂ ರಂಗ ಕಲಾವಿದರು ಆಗಿದ್ದರು. ಮೂಲತಃ ತುಮಕೂರಿನ ತೊಂಡೆಗೆರೆ ಗ್ರಾಮದವರಾಗಿದ್ದ ಅವರು ಡಾ. ರಾಜ್​ ಕುಮಾರ್​, ವಿಷ್ಣುವರ್ಧನ್​, ಅಂಬರೀಶ್​ ಸೇರಿದಂತೆ ಹಲವಾರು ದಿಗ್ಗಜ ನಟರೊಂದಿಗೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಚಿತ್ರದ ಮೂಲಕ ಲೋಹಿತಾಶ್ವ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ಮೊದಲ ಕಮರ್ಷಿಯಲ್‌ ಸಿನಿಮಾ ಗೀತಾ. ‌ಈ ಸಿನಿಮಾ ಬಳಿಕ ಲೋಹಿತಾಶ್ವ ಕಮರ್ಷಿಯಲ್ ನಟನಾಗಿ ಹೊರ ಹೊಮ್ಮಿದ್ದರು.

ಈಟಿವಿ ಭಾರತ್​ಕ್ಕೆ ಶರತ್​​ ಲೋಹಿತಾಶ್ವ ಪ್ರತಿಕ್ರಿಯೆ

Last Updated : Nov 8, 2022, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.