ETV Bharat / entertainment

ಸೆಲೀನ ಗೊಮೆಜ್‌ಗೆ 400 ಮಿಲಿಯನ್‌ ಇನ್‌ಸ್ಟಾಗ್ರಾಮ್ ಫಾಲೋವರ್ಸ್! ಈ ಸಾಧನೆ ಮಾಡಿದ ಮೊದಲ ಮಹಿಳೆ - ಸೆಲೆನಾ ಗೋಮ್ಜ್‌ ಲೇಟೆಸ್ಟ್​​ ನ್ಯೂಸ್​​

ಸೆಲೀನ ಗೊಮೆಜ್‌ 400 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Selena Gomez
'ಸೆಲೆನಾ ಗೋಮ್ಜ್‌'..
author img

By

Published : Mar 20, 2023, 11:02 AM IST

Updated : Mar 20, 2023, 11:12 AM IST

ಸೆಲೆಬ್ರಿಟಿಗಳ ಜನಪ್ರಿಯತೆ ಅಳೆಯಲು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಕರ ಸಂಖ್ಯೆ ಕೂಡಾ ಒಂದು ಮಾನದಂಡ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ನಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳು ನಾನಾ ಕಸರತ್ತು ಮಾಡುತ್ತಾರೆ. ಹಲವು ವಿಭಿನ್ನ ಪೋಸ್ಟ್ ಹಾಕುತ್ತಾ ಗಮನ ಸೆಳೆಯುತ್ತಾರೆ. ಈಗ ಅಮೆರಿಕನ್​ ಖ್ಯಾತ ಗಾಯಕಿ ಸೆಲೀನ ಗೊಮೆಜ್‌ 400 ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಇನ್‌ಸ್ಟಾಗ್ರಾಮ್​​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಇನ್‌ಸ್ಟಾಗ್ರಾಮ್​​​ನಲ್ಲಿ ಗೊಮೆಜ್‌ ಅವರಿಗಿಂತ ಕೇವಲ ಇಬ್ಬರು ಮಾತ್ರ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಮಾರ್ಚ್ 18 ರಂದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದ ಮೊದಲ ಮಹಿಳೆ ಪಾಪ್​​ ತಾರೆ ಕೈಲೀ ಜೆನ್ನರ್ ಅವರನ್ನು ಹಿಂದಿಕ್ಕಿ ಸಾಮಾಜಿಕ ಮಾಧ್ಯಮದಲ್ಲಿ ಗೋಮ್ಜ್‌ ಮೈಲಿಗಲ್ಲು ಸಾಧಿಸಿದ್ದಾರೆ. ಫುಟ್‌ಬಾಲ್ ಆಟಗಾರರಾದ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತು ಲಿಯೋನೆಲ್ ಮೆಸ್ಸಿ ನಂತರ ಅವರು ಈಗ ವೇದಿಕೆಯಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ 3ನೇ ವ್ಯಕ್ತಿಯಾಗಿದ್ದಾರೆ.

ಪೋರ್ಚುಗೀಸ್‌ ಮೂಲದ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೋ ರೊನಾಲ್ಡೋ ಇನ್ಸ್ಟಾಗ್ರಾಮ್‌ನಲ್ಲಿ ಜಗತ್ತಿನಲ್ಲೇ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು 563 ಮಿಲಿಯನ್ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. ಮತ್ತೊಬ್ಬ ಖ್ಯಾತ ಫುಟ್ಬಾಲ್‌ ಆಟಗಾರ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ 2ನೇ ವ್ಯಕ್ತಿ. ಇವರು 443 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಖ್ಯಾತ ಮಾಡೆಲ್‌ ಕೈಲಿ ಜೆನ್ನರ್ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಪೈಕಿ ಟಾಪ್ 4ನೇ ಸ್ಥಾನದಲ್ಲಿದ್ದರು. ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಮೊದಲ ಮಹಿಳೆಯಾಗಿದ್ದರು. ಆದರೆ ಈಗ ಜೆನ್ನರ್ 382 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.

ಸೆಲೀನ ಗೊಮೆಜ್‌ ಖುಷಿ: ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದ ಗೊಮೆಜ್‌ ಭಾನುವಾರ ತಮ್ಮ ಅಭಿಮಾನಿಗಳಿಗೆ ಹೃತ್ಪೂರ್ವಕ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ. "ಎಲ್ಲ 400 ಮಿಲಿಯನ್ ಜನರನ್ನು ತಬ್ಬಿಕೊಳ್ಳಲು ಬಯಸುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರಸ್ತುತ ಇವರು ಇನ್‌ಸ್ಟಾಗ್ರಾಮ್​ನಲ್ಲಿ 401 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಗಾಯಕಿಯ ಅಭಿಮಾನಿಗಳು ಈ ಸುದ್ದಿಯಿಂದ ಸಂತೋಷಗೊಂಡಿದ್ದಾರೆ. ಅವರನ್ನು 'ಇನ್‌ಸ್ಟಾಗ್ರಾಮ್ ರಾಣಿ' ಎಂದು ಕರೆದಿದ್ದಾರೆ. ''ಒಮ್ಮೆ ರಾಣಿಯಾದರೆ ಅವರು ಯಾವಾಗಲೂ ರಾಣಿಯಾಗಿರುತ್ತಾರೆ ಎಂದು ಒಬ್ಬ ಬಳಕೆದಾರರೊಬ್ಬರು ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ''ನಿಮ್ಮಂತಹ ಒಳ್ಳೆಯ ಜನರಿಗೆ ಜೀವನವು ಪ್ರತಿಫಲ ನೀಡುತ್ತದೆ. ನೀವು ಅನನ್ಯ ಮತ್ತು ಅಧಿಕೃತ" ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ, ಸೆಲೀನ ಗೊಮೆಜ್‌​​ "ವೈಲೆಟ್ ಕೆಮಿಸ್ಟ್ರಿ" ಎಂಬ ಶೀರ್ಷಿಕೆಯೊಂದಿಗೆ ಸರಳ ಸೆಲ್ಫಿ ಹಂಚಿಕೊಂಡಿದ್ದರು. ಇದು ಮಿಲೀ ಸೈರಸ್‌ನ ಎಂಟನೇ ಸ್ಟುಡಿಯೋ ಆಲ್ಬಮ್ ಎಂಡ್‌ಲೆಸ್ ಸಮ್ಮರ್ ವೆಕೇಶನ್‌ನ ಟ್ರ್ಯಾಕ್ ಶೀರ್ಷಿಕೆಯಾಗಿದೆ.

ಇನ್ನು, ಅರಿಯಾನಾ ಗ್ರಾಂಡೆ (361 ಮಿಲಿಯನ್), ಕಿಮ್ ಕಾರ್ಡಶಿಯಾನ್ (349 ಮಿಲಿಯನ್), ಬೆಯೋನ್ಸ್ (301 ಮಿಲಿಯನ್) ಮತ್ತು ಕ್ಲೋಯ್ ಕಾರ್ಡಶಿಯಾನ್ (298 ಮಿಲಿಯನ್) ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿರುವ ಇತರ ಮಹಿಳೆಯರು.

ಸೆಲೀನ ಬಗ್ಗೆ ಒಂದಿಷ್ಟು..: ಅಮೆರಿಕನ್ ನಟಿ ಹಾಗೂ ಗಾಯಕಿ. ಈಕೆ ಎಮ್ಮಿ ಪ್ರಶಸ್ತಿ ವಿಜೇತ ಡಿಸ್ನಿ ವಾಹಿನಿಯ ಮೂಲ ಸರಣಿ ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ ನಲ್ಲಿನ ಅಲೆಕ್ಸ್ ರುಸ್ಸೋ ಪಾತ್ರದಿಂದ ಚಿರಪರಿಚಿತರು. ಕಿರುತೆರೆಯ ಅನದರ್ ಸಿಂಡ್ರೆಲ್ಲಾ ಸ್ಟೋರಿ ಮತ್ತು ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Instagram ನಲ್ಲಿ 15 ಮಿಲಿಯನ್​ ಅನುಯಾಯಿಗಳನ್ನು ಪಡೆದ ನಟ ಅಲ್ಲು ಅರ್ಜುನ್​!

Last Updated : Mar 20, 2023, 11:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.