ETV Bharat / entertainment

"ದಿ ಕೇರಳ ಸ್ಟೋರಿ" ಸಂಬಂಧ ನಿಮ್ಮ ಸಮಸ್ಯೆಯೇನು? ಬ್ಯಾನ್​​ ಮಾಡಿದ 2 ರಾಜ್ಯಕ್ಕೆ ಸುಪ್ರೀಂ ಪ್ರಶ್ನೆ

"ದಿ ಕೇರಳ ಸ್ಟೋರಿ" ನಿಷೇಧದ ಕುರಿತು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

the Kerala Story movie
ದಿ ಕೇರಳ ಸ್ಟೋರಿ
author img

By

Published : May 12, 2023, 6:49 PM IST

ದೇಶದ ಎರಡು ರಾಜ್ಯಗಳಲ್ಲಿ "ದಿ ಕೇರಳ ಸ್ಟೋರಿ" ನಿಷೇಧವನ್ನು ಪ್ರಶ್ನಿಸಿ ಚಲನಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಇಂದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳಿಂದ ಉತ್ತರವನ್ನು ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಅವರ ಪೀಠವು ಸಿನಿಮಾ ಬ್ಯಾನ್​ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸಿದೆ. ಯಾವುದೇ ಸಮಸ್ಯೆಯಿಲ್ಲದೇ ದೇಶದ ಉಳಿದ ಭಾಗಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ ಮತ್ತು ನಿಷೇಧಕ್ಕೆ ಯಾವುದೇ ಕಾರಣವಿಲ್ಲ ಎಂದು ತೋರುತ್ತಿದೆ. ಸರಿಸುಮಾರು ನಿಮ್ಮ ರಾಜ್ಯದಲ್ಲಿರುವಷ್ಟೇ ಜನಸಂಖ್ಯೆ ಹೊಂದಿರುವ ಕೆಲ ರಾಜ್ಯಗಳು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಚಲನಚಿತ್ರವು ಓಡುತ್ತಿದೆ. ಅಲ್ಲಿ ಏನೂ ಆಗಿಲ್ಲ. ಜನರು ಚಲನಚಿತ್ರವನ್ನು ಇಷ್ಟಪಡದಿದ್ದರೆ, ಅವರು ಚಲನಚಿತ್ರವನ್ನು ನೋಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಪೀಠ ಹೇಳಿದೆ.

ಗುಪ್ತಚರ ಮಾಹಿತಿಯ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಆಗಬಹುದು ಮತ್ತು ವಿವಿಧ ಸಮುದಾಯಗಳ ನಡುವೆ ಶಾಂತಿ ಉಲ್ಲಂಘನೆ ಆಗುವ ಸಾಧ್ಯತೆಗಳಿವೆ ಎಂದು ವಕೀಲ ಅಭಿಷೇಕ್ ಸಿಂಘ್ವಿ ಹೇಳಿದರು.

"ದಿ ಕೇರಳ ಸ್ಟೋರಿ" ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ಗಳಿಗೆ ಸೂಕ್ತ ಭದ್ರತೆ ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪೀಠವು ತಮಿಳುನಾಡು ಸರ್ಕಾರವನ್ನು ಕೇಳಿದೆ. ರಾಜ್ಯದಲ್ಲಿ ಭದ್ರತೆ ಒದಗಿಸುವ ಮೂಲಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಬೇರೆ ರಾಜ್ಯಗಳಲ್ಲಿ ಚಿತ್ರಕ್ಕೆ ವಿರೋಧವಿಲ್ಲ ಎಂದಾಗ, ನಿಮ್ಮ ಆಕ್ಷೇಪಣೆ ಏನು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಚಿತ್ರದ ನಿರ್ಮಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನ ಮಾಡುವ ಥಿಯೇಟರ್‌ಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಹಾಗಾಗಿ ಅವರು ಪ್ರದರ್ಶನವನ್ನು ನಿಲ್ಲಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದಂತೆ, ನಾವು ನಿಷೇಧ ಆದೇಶವನ್ನು ರದ್ದುಗೊಳಿಸುವಂತೆ ಕೋರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಮಾಜಿ ಪತ್ನಿ ಸಮಂತಾ ಬಗ್ಗೆ ನಾಗಚೈತನ್ಯ ಗುಣಗಾನ: ಏನಂದ್ರು?

"ನಾವು ಎರಡೂ ರಾಜ್ಯಗಳಿಗೆ ನೋಟಿಸ್ ನೀಡುತ್ತಿದ್ದೇವೆ ಮತ್ತು ಅವರು ಮುಂದಿನ ಬುಧವಾರದೊಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು. ಅದಾದ ಬಳಿಕ ಮುಂದಿನ ಗುರುವಾರ ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತೇವೆ" ಎಂದು ಪೀಠ ಹೇಳಿದೆ.

ಇದನ್ನೂ ಓದಿ: ವಿಡಿಯೋ: ಸಂದರ್ಶನದ ನಡುವೆಯೇ ಬಂದು ದೀಪಿಕಾಗೆ ಕಿಸ್​ ಕೊಟ್ಟ ರಣ್​​ವೀರ್​

"ದಿ ಕೇರಳ ಸ್ಟೋರಿ" ಚಿತ್ರ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತವಾಗಿ ಪ್ರದರ್ಶನ ಕಾಣುತ್ತಿದೆ. 7 ದಿನಗಳಲ್ಲಿ 80 ಕೋಟಿ ರೂ. ವ್ಯವಹಾರ ನಡೆಸಿದೆ. ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸುದಿಪ್ತೋ ಸೇನ್ ನಿರ್ದೇಶನದ ಈ ಚಲನಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರದ ಕಥೆ ಕೇರಳದ ಮಹಿಳೆಯರ ಸುತ್ತ ಸುತ್ತುತ್ತದೆ. ಮತಾಂತರ, ಭಯೋತ್ಪಾದಕ ಸಂಘಟನೆಗಳಿಗೆ ಒತ್ತಾಯಪೂರ್ವಕವಾಗಿ ಸೇರಿಸುವಿಕೆ ಕುರಿತು ಸಿನಿಮಾ ಮಾಡಲಾಗಿದೆ. ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.