ETV Bharat / entertainment

Satyaprem Ki Katha: ತೆರೆ ಮೇಲಿನ ಕಾರ್ತಿಕ್ ಕಿಯಾರಾ ಪ್ರೇಮಕಥೆಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ! - ಕಾರ್ತಿಕ್ ಆರ್ಯನ್

ಸತ್ಯಪ್ರೇಮ್ ಕಿ ಕಥಾ ಸಿನಿಮಾ ಇಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ.

Satyaprem Ki Katha
ಸತ್ಯಪ್ರೇಮ್ ಕಿ ಕಥಾ
author img

By

Published : Jun 29, 2023, 11:33 AM IST

Updated : Jun 29, 2023, 11:58 AM IST

ಬಾಲಿವುಡ್​ ಬಹುಬೇಡಿಕೆ ನಟರಾದ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೋಡಿಯ ರೊಮ್ಯಾಂಟಿಕ್​ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಇಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಕಾರ್ತಿಕ್ ಮತ್ತು ಕಿಯಾರಾ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಪ್ರೀತಿ ಗಳಿಸಿದೆ.

ಈ ಚಿತ್ರ ಹಿಟ್ ಆಗೋದು ಪಕ್ಕಾ: ಈ ಹಿಂದೆ ಇದೇ ಜೋಡಿ ಭೂಲ್ ಭುಲಯ್ಯಾ 2 ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಆ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಸತ್ಯಪ್ರೇಮ್ ಕಿ ಕಥಾ ಚಿತ್ರದ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟ್ಟರ್​ನಲ್ಲಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹುತೇಕ ವೀಕ್ಷಕರು ಈ ಚಿತ್ರ ಹಿಟ್ ಆಗೋದು ಪಕ್ಕಾ ಎಂದು ಹೇಳುತ್ತಿದ್ದಾರೆ. ಸಿನಿಮಾ ಹಿಟ್​ ಆಗುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಕಾರ್ತಿಕ್ ಕಿಯಾರಾ ರಾಕ್​​ : ಸತ್ಯಪ್ರೇಮ್ ಕಿ ಕಥಾ ಚಿತ್ರ ಬಿಡುಗಡೆಯಾದ ನಂತರ ಟ್ವಿಟರ್‌ನಲ್ಲಿ ಪ್ರೇಕ್ಷಕರು ಕಾಲಕಾಲಕ್ಕೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ಪ್ರಾರಂಭಿಸಿದರು. ಕಾರ್ತಿಕ್ ಕಿಯಾರಾ ಅವರ ಭೂಲ್ ಭುಲೈಯಾ 2 ನಂತರ, ಈ ಚಿತ್ರವೂ ಬ್ಲಾಕ್​ಬಸ್ಟರ್ ಆಗಲಿದೆ. ಸುಂದರವಾದ ಪ್ರೇಮಕಥೆ. ಅದ್ಭುತ, ಕಾರ್ತಿಕ್ ಕಿಯಾರಾ ರಾಕ್​​ ಎಂದೆಲ್ಲಾ ತಿಳಿಸಿದ್ದಾರೆ. ಮನರಂಜನೆ, ಪ್ರೀತಿ, ಭಾವನೆ ಎಲ್ಲವೂ ಈ ಚಿತ್ರದಲ್ಲಿದೆ. ತಂದೆ ಮಗನ ಮೇಲೆ ಚಿತ್ರಿಸಿರುವ ಚಿತ್ರದ ಕೆಲ ದೃಶ್ಯಗಳು ಹೃದಯ ಕರಗಿಸಿದೆ, ಕಾರ್ತಿಕ್ ಚೆನ್ನಾಗಿ ನಟಿಸಿದ್ದಾರೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ಸುನೀಲ್ ಶೆಟ್ಟಿ ಟ್ವೀಟ್: ಬಾಲಿವುಡ್​ ಹಿರಿಯ ನಟ ಸುನೀಲ್ ಶೆಟ್ಟಿ ನಿನ್ನೆ ರಾತ್ರಿ ಟ್ವೀಟ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಸತ್ಯಪ್ರೇಮ್ ಚಿತ್ರದ ಕಥೆಯ ಬಗ್ಗೆ ನಾನು ಕೇಳುತ್ತಿದ್ದೇನೆ. ಮತ್ತೊಂದು ಬ್ಲಾಕ್​​ಬಸ್ಟರ್ ಚಿತ್ರಕ್ಕಾಗಿ ಅಭಿನಂದನೆಗಳು ಸಾಜಿದ್ ಭಾಯ್ ಎಂದು ತಿಳಿಸಿದ್ದರು.

ಇದನ್ನೂ ಓದಿ: ರಾಜಮೌಳಿ ಸ್ಟೈಲಿಶ್​ ಲುಕ್: ಜಕ್ಕಣ್ಣ ಇಲ್ಲದ ಜಾಗವಿಲ್ಲ, ಜಾಹೀರಾತೊಂದರಲ್ಲಿ ಆರ್​ಆರ್​ಆರ್​ ಡೈರೆಕ್ಟರ್​ ಮಿಂಚು!​​

ಚಿತ್ರ ನೋಡಿದ ನಂತರ ಪ್ರೇಕ್ಷಕರಿಂದ ಟ್ವಿಟರ್‌ನಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಗಮನಿಸಿದರೆ, ಚಿತ್ರವು ಮೊದಲ ದಿನವೇ 10 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಚಿತ್ರದ ಆರಂಭಿಕ ದಿನದ ಗಳಿಕೆ 7-8 ಕೋಟಿ ರೂ. ಆಗಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ. ಭಾನುವಾರದ ವೇಳೆಗೆ ಚಿತ್ರ 40 ರಿಂದ 50 ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯವಹಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Parineeti Chopra: 'ಪರಿ'ಯ ಸೌಂದರ್ಯ ಹೆಚ್ಚಿಸಿದ ಸರಳತೆ - ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳ ಮೆಚ್ಚುಗೆ

Last Updated : Jun 29, 2023, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.