ETV Bharat / entertainment

Satyaprem Ki Katha: 5 ದಿನಗಳಲ್ಲಿ 40 ಕೋಟಿ ರೂ. ಗಡಿದಾಟಿದ 'ಸತ್ಯಪ್ರೇಮ್ ಕಿ ಕಥಾ' - ಕಾರ್ತಿಕ್ ಆರ್ಯನ್

'ಸತ್ಯಪ್ರೇಮ್ ಕಿ ಕಥಾ' ಸಿನಿಮಾ 5 ದಿನಗಳಲ್ಲಿ ಒಟ್ಟು 42.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಸತ್ಯಪ್ರೇಮ್ ಕಿ ಕಥಾ ಕಲೆಕ್ಷನ್​
Satyaprem Ki Katha collection
author img

By

Published : Jul 4, 2023, 12:52 PM IST

ಬಾಲಿವುಡ್ ನಟರಾದ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಈದ್​ ಸಂದರ್ಭ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದ್ರೆ ಸಿನಿಮಾ ರಿಲಿಸ್​ ಆದ ಬಳಿಕ ಮೊದಲ ಸೋಮವಾರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಕೊಂಚ ಇಳಿಕೆ ಕಂಡಿದೆ. ಐದನೇ ದಿನ ಸಿನಿಮಾ 4 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 'ಸತ್ಯಪ್ರೇಮ್ ಕಿ ಕಥಾ' ಸಿನಿಮಾದ ಒಟ್ಟು ಗಳಿಕೆ ಸುಮಾರು 42.50 ಕೋಟಿ ರೂಪಾಯಿ. ಇನ್ನೆರಡು ದಿನಗಳಲ್ಲಿ 50 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆ ಇದೆ.

ದಿನನಿತ್ಯದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ: ಆರಂಭಿಕ ಅಂದಾಜಿನ ಪ್ರಕಾರ ಸತ್ಯಪ್ರೇಮ್ ಕಿ ಕಥಾ ಸೋಮವಾರದಂದು 4 ಕೋಟಿ ರೂ. ಸಂಗ್ರಹಿಸಿದೆ. ಸದ್ಯ ದೇಶಿಯ ಬಾಕ್ಸ್ ಆಫೀಸ್ ಕಲೆಕ್ಷನ್‌ ಸಂಖ್ಯೆ 42.50 ಕೋಟಿ ರೂ. ಸಿನಿಮಾ ತೆರೆಕಂಡ ಮೊದಲ ದಿನ 9.25 ಕೋಟಿ ರೂ., 2ನೇ ದಿನ 7 ಕೋಟಿ ರೂ., 3ನೇ ದಿನ 10.10 ಕೋಟಿ ರೂ., 4ನೇ ದಿನ 12.15 ಕೋಟಿ ರೂ. ಗಳಿಸಿದೆ. ಈದ್​ ರಜೆ ಹಿನ್ನೆಲೆ 9.25 ಕೋಟಿ ರೂ.ನೊಂದಿಗೆ ಉತ್ತಮ ಆರಂಭ ಪಡೆದ ಸಿನಿಮಾ ವಾರಾಂತ್ಯದಲ್ಲಿಯೂ ಒಳ್ಳೆ ಸಂಪಾದನೆ ಮಾಡಿದೆ. ವಾರದ ದಿನಗಳಲ್ಲಿ ಅಂಕಿ ಅಂಶ ಕೊಂಚ ಕಡಿಮೆ ಇದೆ.

ಪ್ರೇಕ್ಷಕರ ಪ್ರೀತಿಗೆ ಚಿತ್ರತಂಡ ಕೃತಜ್ಞತೆ: ಸತ್ಯಪ್ರೇಮ್ ಕಿ ಕಥಾ ಭಾನುವಾರದಂದು 12.15 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮೊದಲ ವಾರಾಂತ್ಯದ ಕಲೆಕ್ಷನ್​​ 38.50 ಕೋಟಿ ರೂಪಾಯಿಗೆ ತಲುಪಿತು. ಕಳೆದ ಐದು ದಿನಗಳಲ್ಲಿ ಭಾನುವಾರದ ಅಂಕಿ ಅಂಶ ತುಸು ಹೆಚ್ಚೇ ಇದೆ. ಚಿತ್ರ ನಿರ್ಮಾಪಕರು ಟ್ವಿಟರ್​ನಲ್ಲಿ "ಸತ್ತು ಮತ್ತು ಕಥಾವನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು, ನಮ್ಮ ಹೃದಯ ಕೃತಜ್ಞತೆ ಮತ್ತು ಶುದ್ಧ ಪ್ರೀತಿಯಿಂದ ತುಂಬಿವೆ. ಸತ್ಯಪ್ರೇಮ್ ಕಿ ಕಥಾ ಸದ್ಯ ಸಿನಿಮಾ ಹಾಲ್​ಗಳಲ್ಲಿ ಲಭ್ಯ, ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿ" ಎಂದು ಬರೆದಿದ್ದಾರೆ.

ಸತ್ಯಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಕಾರ್ತಿಕ್​, ಕಿಯಾರಾ ಜೊತೆಗೆ ಸುಪ್ರಿಯಾ ಪಾಠಕ್, ಗಜ್​​ರಾಜ್ ರಾವ್, ಸಿದ್ಧಾರ್ಥ್ ರಾಂಧೇರಿಯಾ, ಅನೂರಾಧಾ ಪಟೇಲ್, ರಾಜ್ಪಾಲ್ ಯಾದವ್, ನಿರ್ಮಿತ್ ಸಾವಂತ್ ಮತ್ತು ಶಿಖಾ ತಲ್ಸಾನಿಯಾ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ 'ಸತ್ಯಪ್ರೇಮ್' ಪಾತ್ರದಲ್ಲಿ ನಟಿಸಿದ್ದರೆ, ಕಿಯಾರಾ 'ಕಥಾ' ಪಾತ್ರವನ್ನು ನಿರ್ವಹಿಸಿದ್ದಾರೆ. ಕಾರ್ತಿಕ್ ಕಿಯಾರಾಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅವರ ಮದುವೆಯ ನಂತರ, ಕಿಯಾರಾ ಮತ್ತು ಕಾರ್ತಿಕ್ ಹಲವು ಸವಾಲಿನ ಸಂದರ್ಭಗಳನ್ನು ಎದುರಿಸುತ್ತಾರೆ. ಸಮೀರ್ ವಿದ್ವಾನ್ಸ್ ನಿರ್ದೇಶನದ ಈ ಸಿನಿಮಾವನ್ನು ಸಾಜಿದ್ ನಾಡಿಯಾಡ್ವಾಲಾ ಮತ್ತು ನಮಃ ಪಿಕ್ಚರ್ಸ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: Mouni Roy: ಸೀರೆಯುಟ್ಟು ಮೈ ಬಳುಕಿಸಿದ ಮೌನಿ ಸೌಂದರ್ಯದ ಖನಿ! - Photos ನೋಡಿ

ಕಾರ್ತಿಕ್ ಮತ್ತು ಕಿಯಾರಾ ನಟಿಸಿದ ಎರಡನೇ ಚಿತ್ರವಿದು. 2022 ರಲ್ಲಿ ತೆರೆಕಂಡು ಸೂಪರ್​ ಹಿಟ್​ ಆದ ಹಾರರ್ ಕಾಮಿಡಿ ವಿತ್​ ಲವ್​ ಸ್ಟೋರಿ ಸಿನಿಮಾ ಭೂಲ್ ಭುಲೈಯಾ 2ರಲ್ಲಿ ಕಾಣಿಸಿಕೊಂಡಿದ್ದರು. ಮೊದಲ ದಿನವೇ 14 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಸದ್ದು ಮಾಡಿ, ಯಶಸ್ಸು ಕಂಡಿತ್ತು. ಎರಡನೇ ಸಿನಿಮಾ ಕೂಡ ಯಶಸ್ಸಿನ ಮಾರ್ಗದಲ್ಲಿದೆ.

ಇದನ್ನೂ ಓದಿ: ಪಿಆರ್​ಕೆ ಪ್ರೊಡಕ್ಷನ್ಸ್ ನಿರ್ಮಾಣದ ಆಚಾರ್ & ಕೋ ಸಿನಿಮಾ ಬಿಡುಗಡೆ ಮುಹೂರ್ತ ಫಿಕ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.