ETV Bharat / entertainment

ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ಅಪ್ ವದಂತಿ​: ಸಾರಾ ಅಲಿ ಖಾನ್ ಹೇಳಿದ್ದಿಷ್ಟು! - Koffee with Karan

'ಕಾಫಿ ವಿತ್ ಕರಣ್‌' ಸೀಸನ್​ 8ರ ಮೂರನೇ ಸಂಚಿಕೆಯಲ್ಲಿ ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಭಾಗಿಯಾಗಿದ್ದಾರೆ.

Sara Ali Khan talks about break up with Kartik Aaryan
ಸಾರಾ ಅಲಿ ಖಾನ್ ಕಾರ್ತಿಕ್
author img

By ETV Bharat Karnataka Team

Published : Nov 9, 2023, 3:53 PM IST

ಜನಪ್ರಿಯ ಕಾರ್ಯಕ್ರಮ 'ಕಾಫಿ ವಿತ್ ಕರಣ್‌' ಸೀಸನ್​ 8ರ ಮೂರನೇ ಸಂಚಿಕೆಯಲ್ಲಿ ಬಾಲಿವುಡ್​ ಬೆಡಗಿಯರಾದ ಸಾರಾ ಅಲಿ ಖಾನ್ ಹಾಗೂ ಅನನ್ಯಾ ಪಾಂಡೆ ಅತಿಥಿಗಳಾಗಿ ಆಗಮಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ಮಾಪಕ - ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಚಾಟ್​ ಶೋನಲ್ಲಿ ನಟಿಮಣಿಯರು ತಮ್ಮ ಮಾಜಿ ಗೆಳೆಯ ಕಾರ್ತಿಕ್ ಆರ್ಯನ್ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆ.

ಮಾತುಕತೆ ಸಮಯದಲ್ಲಿ, ನಿರೂಪಕ ಕರಣ್ ಜೋಹರ್ ನೇರವಾಗಿ ಕಾರ್ತಿಕ್ ಆರ್ಯನ್ ಅವರೊಂದಿಗಿನ ಸಂಬಂಧದ ಬಗ್ಗೆ ಸಾರಾ ಹಾಗೂ ಅನನ್ಯಾ ಬಳಿ ಪ್ರಶ್ನಿಸಿದರು. ಕರಣ್​​ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾರಾ, ಡೇಟಿಂಗ್ ಮತ್ತು ಬ್ರೇಕಪ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. "ಇದೆಲ್ಲವೂ ಸುಗಮವಾಗಿ ಸಾಗುತ್ತಿದೆ ಎಂದು ತೋರಿಸಲು ನಾನು ಬಯಸುವುದಿಲ್ಲ, ಏಕೆಂದರೆ ಅದು ಅಂದಿನ ಪರಿಸ್ಥಿತಿಯ ಮಹತ್ವವನ್ನು ಕಡಿಮೆ ಮಾಡಿಬಿಡುತ್ತದೆ. ಇಂತಹ ವಿಚಾರಗಳು ಯಾವಾಗಲೂ ಸುಲಭವಾಗಿರುವುದಿಲ್ಲ. ನೀವು ಯಾರೊಂದಿಗಾದರೂ ಕನೆಕ್ಷನ್​ ಇಟ್ಟುಕೊಂಡಿದ್ದರೆ, ಸ್ನೇಹ, ವೃತ್ತಿಪರ ಅಥವಾ ಪ್ರಣಯ ಯಾವುದೇ ಇರಬಹದು, ವಿಶೇಷವಾಗಿ ಅದು ನನ್ನ ವಿಚಾರಕ್ಕೆ ಬಂದ್ರೆ ನಾನು ಅದರಲ್ಲಿ ಆಳವಾಗಿ ತೊಡಗಿಸಿಕೊಳ್ಳುತ್ತೇನೆ. ಇದೊಂದು ಕ್ಯಾಶುವಲ್​ ಆ್ಯಟಿಟ್ಯೂಡ್​ ಅಲ್ಲ. ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅಂತಿಮವಾಗಿ ನೀವು ಮೇಲೇರಲೇಬೇಕು, ಮುಂದೆ ಸಾಗಬೇಕು" ಎಂದು ಪ್ರಬುದ್ಧವಾಗಿ ಉತ್ತರಿಸಿದರು.

ಮಾತು ಮುಂದುವರಿಸಿದ ಸಾರಾ ಅಲಿ ಖಾನ್​​, ಸ್ನೇಹದ (ಯಾರೊಂದಿಗಾದರು) ಶಾಶ್ವತ ಭರವಸೆ ನೀಡುವುದು ಅಥವಾ ನಮ್ಮ ಈ ಎಂಟರ್​ಟೈನ್ಮೆಂಟ್ ಫೀಲ್ಡ್​ನಲ್ಲಿ ಮತ್ತೆ ಯಾರೊಂದಿಗೂ ಮಾತನಾಡಲು ಬಯಸುವುದಿಲ್ಲ ಎಂದು ಘೋಷಿಸಿಬಿಡುವುದು ಅವಿವೇಕತನ. ನನ್ನ ವೈಯಕ್ತಿಕ ಅನುಭವಗಳ ಮೂಲಕ, ಈ ಉದ್ಯಮದಲ್ಲಿ ಯಾವುದೇ ಪರ್ಮನೆಂಟ್​ ಕಮಿಟ್​ಮೆಂಟ್ಸ್ ಇರುವುದಿಲ್ಲ ಎಂಬುದನ್ನು ನಾನು ಕಲಿತಿದ್ದೇನೆ. ಪರ್ಮನೆಂಟ್​ ಫ್ರೆಂಡ್​ಶಿಪ್​, ಪಿಂಕಿ ಪ್ರಾಮಿಸಸ್ ಅಥವಾ 'ನಾನು ನಿಮ್ಮೊಂದಿಗೆ ಎಂದಿಗೂ ಮಾತನಾಡುವುದಿಲ್ಲ' ಎಂದು ಹೇಳುವುದು ಪ್ರ್ಯಾಕ್ಟಿಕಲ್​ ವಿಚಾರಗಳಲ್ಲ. ಇವೆಲ್ಲವೂ ಯಾವಾಗಲೂ ಸಂಭವಿಸುವುದಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ: ಅಂತ್ಯಗೊಂಡ ದಾಂಪತ್ಯ, ಅನಾರೋಗ್ಯ: ಕಠಿಣ ದಿನಗಳ ಬಗ್ಗೆ ಸಮಂತಾ ರುತ್​​ ಪ್ರಭು ಮನದಾಳ

ಕರಣ್ ಜೋಹರ್​ ಅವರು ಕರೀನಾ ಕಪೂರ್ ಖಾನ್​ ಮತ್ತು ಕಾಜೋಲ್ ಅವರೊಂದಿಗಿನ ಸ್ನೇಹ ಮತ್ತು ಮನಸ್ತಾಪಗಳ ಬಗ್ಗೆ ಮಾತನಾಡಿ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು. ಅಂತಿಮವಾಗಿ ಅವರುಗಳು ರಾಜಿ ಮಾಡಿಕೊಂಡಿದ್ದಾರೆ. ನಿಮ್ಮ ಸ್ನೇಹ ಸುದೀರ್ಘ ಇತಿಹಾಸ ಹೊಂದಿದೆ, ಹಾಗಾಗಿ ಹೆಚ್ಚು ತೂಕ ಹೊಂದಿದೆ ಎಂದು ಹೇಳಿ ಸಾರಾ ಗಮನಸೆಳೆದರು. ಸಾರಾ ಮತ್ತು ಕಾರ್ತಿಕ್ ಡೇಟಿಂಗ್​ ನಡೆಸಿದ್ದರು. ಆದಾಗ್ಯೂ, ಈ ಸಂಬಂಧವು ಬೇಗನೇ ಕೊನೆಗೊಂಡಿತು ಎಂಬ ವದಂತಿಗಳಿವೆ. ನಂತರ ಕಾರ್ತಿಕ್ ಹೆಸರು ಅನನ್ಯಾ ಜೊತೆಗೂ ಕೇಳಿಬಂತು. ಸದ್ಯ ಅನನ್ಯಾ ಹೆಸರು ನಟ ಆದಿತ್ಯ ರಾಯ್ ಕಪೂರ್​ ಜೊತೆ ಕೇಳಿಬರುತ್ತಿದೆ. ತಮ್ಮ ಸಂಬಂಧವನ್ನು ನಟ ನಟಿಯರೇ ಅಧಿಕೃತವಾಗಿ ಘೋಷಿಸೋವರೆಗೂ ಎಲ್ಲವೂ ವದಂತಿಗಳೇ..

ಇದನ್ನೂ ಓದಿ: 'ಕೆಜಿಎಫ್​ಗೂ ಮುನ್ನ ಯಶ್​ ಯಾರು?': ನಟ ಅಲ್ಲು ಅರ್ಜುನ್​ ತಂದೆ ಹೀಗೆ ಹೇಳಿದ್ದೇಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.