ETV Bharat / entertainment

ಸಾರಾ ಅಲಿ ಖಾನ್ ವರ್ಕ್​ಔಟ್​​: ಎರಡೇ ವಾರದಲ್ಲಿ ಎಷ್ಟೊಂದು ವ್ಯತ್ಯಾಸ - ನಟಿಯಿಂದ ಫೋಟೋ ಶೇರ್ - Sara Ali Khan photos

Sara Ali Khan: ನಟಿ ಸಾರಾ ಅಲಿ ಖಾನ್​ ಶೇರ್ ಮಾಡಿರುವ ಇನ್​ಸ್ಟಾಗ್ರಾಮ್​​ ಸ್ಟೋರಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Sara Ali Khan
ಸಾರಾ ಅಲಿ ಖಾನ್
author img

By ETV Bharat Karnataka Team

Published : Nov 7, 2023, 12:25 PM IST

ಸಾರಾ ಅಲಿ ಖಾನ್ ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ನಟಿ. ಸಿನಿಮಾ, ಸೌಂದರ್ಯದ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋ ಮುಖೇನ, ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​​ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ತಾರೆಯರಿಗಾಗಿ ದೀಪಾವಳಿ ಪಾರ್ಟಿ ಹಮ್ಮಿಕೊಂಡಿದ್ದರು. ಸಮಾರಂಭಕ್ಕೆ ಸಾರಾ ಸಹ ಸಾಕ್ಷಿಯಾಗಿದ್ದರು. ಮಿನುಗುವ ಉಡುಗೆ ತೊಟ್ಟು ಕಂಗೊಳಿಸಿದ ಅಲಿಖಾನ್​​ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದರು.

ಸೋಷಿಯಲ್​ ಮೀಡಿಯಾದಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ತಮ್ಮ ವರ್ಕ್​​ ಔಟ್​ ರಿಸಲ್ಟ್​ ಫೋಟೋವನ್ನೂ ಶೇರ್ ಮಾಡಿದ್ದಾರೆ. ತಮ್ಮ ಅದ್ಭುತ ರೂಪಾಂತರಕ್ಕೂ ಮುನ್ನದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೇವಲ ಎರಡು ವಾರಗಳ ಅವಧಿಯಲ್ಲಿ ಹೊಟ್ಟೆಯ ಕೊಬ್ಬನ್ನು ಇಳಿಸಿದ್ದು, ತಮ್ಮ ಫಿಟ್ನೆಸ್​ ಪ್ರಯಾಣವನ್ನು ಬಹಳ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ತಮ್ಮ ಈ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಫಿಟ್ನೆಸ್​ ವಿಚಾರವಾಗಿ ಅಭಿಮಾನಿಗಳಿಗೂ ಸ್ಪೂರ್ತಿ ಆಗಿದ್ದಾರೆ.

Sara Ali Khan
ಸಾರಾ ಅಲಿ ಖಾನ್ ಇನ್​ಸ್ಟಾಗ್ರಾಮ್​ ಸ್ಟೋರಿ

ಸೋಮವಾರ ರಾತ್ರಿ ನಟಿ ಸಾರಾ ಅಲಿ ಖಾನ್​​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಸ್ಟೋರಿಸ್​ ವಿಭಾಗದಲ್ಲಿ ತಮ್ಮ ಮೂರು ಫೋಟೋಗಳ ಕೊಲ್ಯಾಜ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಟ್ಟೆಯ ಕೊಬ್ಬನ್ನು ಇಳಿಸಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಮೇಲಿರುವ ಫೋಟೋವನ್ನು ಶೇರ್ ಮಾಡಲು ನಿಜವಾಗಿಯೂ ಅನ್​​ಕಂಫರ್ಟಬಲ್​ ಫೀಲ್ ಆಗುತ್ತಿದೆ. ಆದರೆ ನನಗೆ 2 ವಾರಗಳಲ್ಲಿ ಈ ಫಲಿತಾಂಶ ಸಿಕ್ಕಿದ್ದು, ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ತೂಕದ ಸಮಸ್ಯೆ ಯಾವಾಗಲೂ ನನಗೆ ಹೋರಾಟವೇ. ಆದ್ರೆ ನನ್ನನ್ನು ಸರಿಯಾದ ಟ್ರ್ಯಾಕ್‌ನಲ್ಲಿ ಇರಿಸಿದ್ದಕ್ಕಾಗಿ ತರಬೇತುದಾರರಿಗೆ ಧನ್ಯವಾದಗಳು. ಹಾಲಿಡೇ ಕ್ಯಾಲೋರಿಗಳಿಗೆ ಬೈ ಬೈ​. ಫಿಟ್ನೆಸ್​​ ಒಂದು ಪ್ರಯಾಣ. ಹಾಗಾಗಿ ಮುಂದುವರಿಯಿರಿ" ಎಂದು ಬರೆದುಕೊಂಡಿದ್ದಾರೆ. (ಕೊಲ್ಯಾಜ್​ನಲ್ಲಿ ಮೇಲಿರುವ / ಮೊದಲಿರುವ ಫೋಟೋ ವರ್ಕ್​​​ಔಟ್​ ವೇಳೆಯದ್ದು. ಶಾರ್ಟ್ ಡ್ರೆಸ್​ ಆದ ಹಿನ್ನೆಲೆ ಅದನ್ನು ಹಂಚಿಕೊಳ್ಳಳು ನಟಿ ಅನ್​​ಕಂಫರ್ಟಬಲ್​ ಫೀಲ್ ಮಾಡಿದ್ದಾರೆ).

ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಅನುಷ್ಕಾ ಶೆಟ್ಟಿ! ಯೋಗ ಶಿಕ್ಷಕಿ ವೃತ್ತಿಯಿಂದ ಸೂಪರ್‌ ನಟಿಯಾಗಿ ಬೆಳೆದ ತುಳುನಾಡ ಬೆಡಗಿ ​​

28ರ ಹರೆಯದ ನಟಿ ತಮ್ಮ ಪಿಸಿಒಡಿ (Polycystic Ovary Syndrome) ಸವಾಲುಗಳ ಕುರಿತು ಹಲವು ಬಾರಿ ಚರ್ಚಿಸಿದ್ದಾರೆ. ಈ ಸಮಸ್ಯೆ ನಟಿಯ ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ತಮ್ಮ ಕಾಲೇಜು ದಿನಗಳಲ್ಲಿ, ನಟನೆಯನ್ನು ವೃತ್ತಿಜೀವನವಾಗಿ ಆಯ್ದುಕೊಳ್ಳಲು ನಿರ್ಧರಿಸಿದ ಸಂದರ್ಭ ಅವರು 96 ಕೆ.ಜಿ ತೂಕವಿದ್ದರು. ಅಭಿನಯ ಜಗತ್ತಿಗೆ ಎಂಟ್ರಿ ಕೊಡುವ ಸಲುವಾಗಿ ತೂಕ ಇಳಿಸಿಕೊಂಡಿದ್ದನ್ನು ಕೆಲ ಸಂದರ್ಶನಗಳಲ್ಲಿ ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಮಿನುಗುವ ಉಡುಗೆಯಲ್ಲಿ ಚೆಂದುಳ್ಳಿ ಚೆಲುವೆಯರು: ಕಣ್ಮನ ಸೆಳೆದ ಸಾರಾ, ಕಿಯಾರಾ, ಕೃತಿ ಕಾಂತಿ

ಕೆಲಸದ ವಿಚಾರ ಗಮನಿಸುವುದಾದರೆ, ಸಾರಾ ಅಲಿ ಖಾನ್ ನಟಿ ಅನನ್ಯಾ ಪಾಂಡೆ ಜೊತೆಗೆ ಕಾಫಿ ವಿತ್ ಕರಣ್ ಸೀಸನ್ 8ರ ಮೂರನೇ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುವಾರ ಈ ಶೋ ಒಟಿಟಿ ವೇದಿಕೆಯಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಏ ವತನ್ ಮೇರೆ ವತನ್, ಮೆಟ್ರೋ ಇನ್ ದಿನೋ, ಮರ್ಡರ್ ಮುಬಾರಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.