ಇಂದೋರ್ (ಮಧ್ಯಪ್ರದೇಶ): ಉಜ್ಜಯಿನಿಯ ಪ್ರಸಿದ್ಧ ಮಹಾಕಾಲ್ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್‌ಗಿರಿಗೆ ಒಳಗಾದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇದೀಗ ತಕ್ಕ ತಿರುಗೇಟು ಕೊಟ್ಟಿದ್ದಾರೆ. ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ನಾಳೆ ಅದ್ಧೂರಿಯಾಗಿ ತೆರೆಕಾಣಲಿದೆ. ಕಳೆದ ಕೆಲವು ದಿನಗಳಿಂದ ಚಿತ್ರತಂಡ ಪತ್ರಿಕಾಗೋಷ್ಟಿಯಲ್ಲಿ ಬ್ಯುಸಿಯಾಗಿದೆ. ವಿಕ್ಕಿ ಮತ್ತು ಸಾರಾ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಮುಸಲ್ಮಾನರಾಗಿರುವ ನಟಿ ಸಾರಾ ಅಲಿ ಖಾನ್ ತಾವು ದೇವಸ್ಥಾನಗಳಿಗೆ ಭೇಟಿ ಕೊಡುವ ವಿಚಾರದ ಕುರಿತು ಮಾತನಾಡಿದರು.
-
#WATCH | Indore, Madhya Pradesh | When asked about internet trolling after her visit to Mahakal Temple in Ujjain, actress Sara Ali Khan says, "...I take my work very seriously. I work for people, for you. I would feel bad if you don't like my work but my personal beliefs are my… pic.twitter.com/ffXdurUCDY
— ANI (@ANI) May 31, 2023 " class="align-text-top noRightClick twitterSection" data="
">#WATCH | Indore, Madhya Pradesh | When asked about internet trolling after her visit to Mahakal Temple in Ujjain, actress Sara Ali Khan says, "...I take my work very seriously. I work for people, for you. I would feel bad if you don't like my work but my personal beliefs are my… pic.twitter.com/ffXdurUCDY
— ANI (@ANI) May 31, 2023#WATCH | Indore, Madhya Pradesh | When asked about internet trolling after her visit to Mahakal Temple in Ujjain, actress Sara Ali Khan says, "...I take my work very seriously. I work for people, for you. I would feel bad if you don't like my work but my personal beliefs are my… pic.twitter.com/ffXdurUCDY
— ANI (@ANI) May 31, 2023
"ನಾನು ನನ್ನ ಕೆಲಸವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ. ಜನರಿಗಾಗಿ, ನಿಮಗಾಗಿ ಕೆಲಸ ಮಾಡುತ್ತೇನೆ. ನನ್ನ ಕೆಲಸ ನಿಮಗೆ ಇಷ್ಟವಾಗದಿದ್ದರೆ ನನಗೆ ದುಃಖವಾಗುತ್ತದೆ. ಆದರೆ, ನನ್ನ ವೈಯಕ್ತಿಕ ನಂಬಿಕೆಗಳು ನನ್ನದೇ ಆಗಿರುತ್ತವೆ. ನಾನು ಬಾಂಗ್ಲಾ ಸಾಹಿಬ್ ಅಥವಾ ಮಹಾಕಾಲ್‌ಗೆ ಹೋಗುವಾಗ ಇರುವ ಅದೇ ಭಕ್ತಿಯಲ್ಲಿ ನಾನು ಅಜ್ಮೀರ್ ಶರೀಫ್‌ಗೂ ಹೋಗುತ್ತೇನೆ. ನಾನು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಬಹುದು, ನನಗೆ ಯಾವುದೇ ತೊಂದರೆ ಇಲ್ಲ. ಯಾವುದೇ ಸ್ಥಳದ ಶಕ್ತಿ ನಿಮಗೆ ಇಷ್ಟವಾಗಬೇಕು, ನಾನು ಆ ಶಕ್ತಿಯಲ್ಲಿ ನಂಬಿಕೆ ಹೊಂದಿದ್ದೇನೆ" ಎಂದು ತಿಳಿಸಿದ್ದಾರೆ.
ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಟ್ರೋಲ್ ಆಗುವುದು ಇದೇ ಮೊದಲಲ್ಲ. ಇತ್ತೀಚೆಗೆ, ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ನಟಿ ಟೀಕೆಗಳನ್ನು ಎದುರಿಸಿದ್ದರು. ಆದ್ರೆ ನಕಾರಾತ್ಮಕ ವಿಷಯಗಳಿಗೆ ಕಿವಿಗೊಡದೇ ಮುಂದುವರಿಯುತ್ತಿದ್ದಾರೆ. ನಟಿಯ ಸಕಾರಾತ್ಮಕತೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ನಿನ್ನೆ ಮುಂಜಾನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಾರಾ ಅಲಿ ಖಾನ್ ಪ್ರಾರ್ಥನೆ ಸಲ್ಲಿಸಿದ್ದರು. ಮುಂಜಾನೆ ನಡೆದ 'ಭಸ್ಮ ಆರತಿ'ಯಲ್ಲಿಯೂ ಭಾಗವಹಿಸಿದ್ದರು. ಭಸ್ಮಾರತಿ ಮಹಾಕಾಳೇಶ್ವರ ದೇವಸ್ಥಾನದ ಪ್ರಸಿದ್ಧ ಪದ್ಧತಿ. ಇದನ್ನು ಬೆಳಿಗ್ಗೆ 4 ರಿಂದ 5:30 ರವರೆಗೆ ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ. ದೇವಸ್ಥಾನದ ಸಂಪ್ರದಾಯಗಳ ಪ್ರಕಾರವೇ ಸಾರಾ ಅಲಿ ಖಾನ್ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು.
ಇದನ್ನೂ ಓದಿ: ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಖಾನ್ ಪುತ್ರಿ: ಸಾಮರಸ್ಯದ ಸಂದೇಶ ಸಾರಿದ ನಟಿ ಸಾರಾ
ಲಕ್ಷ್ಮಣ್ ಉಟೇಕರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದಲ್ಲಿ ಸಾರಾ ಅಲಿ ಖಾನ್ ಮಧ್ಯಮ ವರ್ಗದ, ಅವಿಭಕ್ತ ಕುಟುಂಬದ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಾಳೆ (ಶುಕ್ರವಾರ) ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ವಿಕ್ಕಿ ಮತ್ತು ಸಾರಾ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಹಿಂದಿ ಸಿನಿಮಾ 'ದಿ ಕೇರಳ ಸ್ಟೋರಿ'