ETV Bharat / entertainment

ಸಹೋದರನೊಂದಿಗಿನ ಫೋಟೋ ಹಂಚಿಕೊಂಡ ಸಾರಾ ಅಲಿ ಖಾನ್​: ಪಟೌಡಿ ವಂಶಸ್ಥರಿಗೆ ಫ್ಯಾನ್ಸ್​ ಮೆಚ್ಚುಗೆ - ಇಬ್ರಾಹಿಂ ಅಲಿ ಖಾನ್

Sara Ali Khan with Brother Ibrahim Ali Khan: ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಫೋಟೋಗಳನ್ನು ನಟಿ ಸಾರಾ ಅಲಿ ಖಾನ್​ ಶೇರ್ ಮಾಡಿದ್ದಾರೆ.

Sara Ali Khan with Brother Ibrahim Ali Khan
ಸಹೋದರನೊಂದಿಗಿನ ಫೋಟೋ ಹಂಚಿಕೊಂಡ ಸಾರಾ ಅಲಿಖಾನ್
author img

By ETV Bharat Karnataka Team

Published : Sep 3, 2023, 7:56 PM IST

ಸಾರಾ ಅಲಿ ಖಾನ್​ ಸದ್ಯ ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲೋರ್ವರು. ನಟಿಯ ಬೆಳವಣಿಗೆಗೆ ಪಟೌಡಿ ವಂಶಸ್ಥರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಸಾರಾ ಕೂಡ ನಟನೆ ಮಾತ್ರವಲ್ಲದೇ ತಮ್ಮ ನಡೆ ನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸೂಪರ್​ ಹಿಟ್ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ನಟಿ ಇನ್ನೂ ರಕ್ಷಾಬಂಧನ ಸಂಭ್ರದಲ್ಲಿರುವಂತೆ ತೋರುತ್ತಿದೆ. ಆಗಸ್ಟ್ 31 ರಂದು ಸಹೋದರರಾದ ಇಬ್ರಾಹಿಂ ಅಲಿ ಖಾನ್​​, ತೈಮೂರ್​ ಅಲಿ ಖಾನ್​​ ಮತ್ತು ಜೆಹ್ ಅಲಿ ಖಾನ್​​ ಅವರೊಂದಿಗಿನ ಫೋಟೋ ಶೇರ್ ಮಾಡಿದ್ದರು. ಪಟೌಡಿ ವಂಶಸ್ಥರ ರಕ್ಷಾಬಂಧನ ಸಂಭ್ರಮವನ್ನು ನಟಿ ಸಾರಾ ಅಲಿ ಖಾನ್​ ಮತ್ತು ಬಾಲಿವುಡ್​ ಬೇಬೋ ಕರೀನಾ ಕಪೂರ್​ ಖಾನ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಸ್ವಂತ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಸರಣಿ ಫೋಟೋಗಳನ್ನು ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

Sara Ali Khan with Brother Ibrahim Ali Khan
ಸಾರಾ ಅಲಿಖಾನ್​ ಇನ್​ ಸ್ಟಾ ಸ್ಟೋರಿ

ಲವ್​ ಆಜ್​ ಕಲ್​ ಸಿನಿಮಾ ನಟಿ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್​​ ಜೊತೆಗಿನ ಸರಣಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಾಲ್ಕು ವಿಭಿನ್ನ ಹಾರ್ಟ್ ಎಮೋಜಿಗಳನ್ನು ತಮ್ಮ ಪೋಸ್ಟ್​​ಗೆ ಶೀರ್ಷಿಕೆಯಾಗಿ ಕೊಟ್ಟಿದ್ದಾರೆ. ಕಡಿಮೆ ಮೇಕ್​ ಅಪ್​ನೊಂದಿಗೆ ನಟಿ ಪಿಂಕ್​ ಜಂಪ್​ಸೂಟ್​ನಲ್ಲಿ ಕಾಣಿಸಿಕೊಂಡರೆ, ಇಬ್ರಾಹಿಂ ಬ್ಲ್ಯಾಕ್​​ ಶರ್ಟ್​ನಲ್ಲಿ ಕೂಲ್​ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ಅಕ್ಕ ತಮ್ಮ ಫನ್ನಿ ಪೋಸ್​ ಕೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Chandramukhi 2 Trailer: ಸ್ಟೈಲಿಶ್​ ಸೀರೆಯುಟ್ಟು ಮನಮೋಹಕ ನೋಟ ಬೀರಿದ 'ಚಂದ್ರಮುಖಿ' ತಾರೆ ಕಂಗನಾ ರಣಾವತ್

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಗದರ್​ 2 ಸಿನಿಮಾದ ಸಕ್ಸಸ್​ ಸಲೆಬ್ರೇಶನ್ ಈವೆಂಟ್ ಅನ್ನು ಚಿತ್ರತಂಡ ಶನಿವಾರ ಸಂಜೆ ಆಯೋಜಿಸಿತ್ತು. ಶಾರುಖ್​ ಖಾನ್​ ಗೌರಿ ಖಾನ್​​, ಅಮೀರ್​ ಖಾನ್​, ಸಲ್ಮಾನ್​ ಖಾನ್​​, ಅನುಪಮ್​​ ಖೇರ್, ಸಾಜಿದ್​ ಖಾನ್​ ಸೇರಿದಂತೆ ಬಾಲಿವುಡ್​ನ ಯಂಗ್​ ಸ್ಟಾರ್ಸ್ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ನಟಿ ಸಾರಾ ಅಲಿ ಖಾನ್​ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದರು. ಮಾಜಿ ರೂಮರ್​ ಬಾಯ್​ ಫ್ರೆಂಡ್​ ಕಾರ್ತಿಕ್​ ಆರ್ಯನ್​ ಜೊತೆ ಉತ್ತಮ ಕ್ಷಣ ಕಳೆದು ಸಾರಾ ಅಭಿಮಾನಿಗಳ ಗಮನ ಸೆಳೆದರು. ಲವ್​ ಆಜ್​​ ಕಲ್​ ಸಿನಿಮಾದಲ್ಲಿ ಸ್ಕ್ರೀನ್​ ಶೇರ್​ ಮಾಡಿದ್ದ ಈ ಜೋಡಿ ಡೇಟಿಂಗ್​ನಲ್ಲಿದ್ದರು ಎಂಬ ವದಂತಿಗಳಿದ್ದವು.

ಇದನ್ನೂ ಓದಿ: 'ಗದರ್-2' ಪಾರ್ಟಿಯಲ್ಲಿ ಅಪ್ಪಿಕೊಂಡ 'ಮಾಜಿ ಲವ್​ಬರ್ಡ್ಸ್': ಕಾರ್ತಿಕ್​-ಸಾರಾ ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.