ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಇಬ್ಬರ ಈ ವಿಡಿಯೋ ವೈರಲ್ ಆಗಿದೆ. ಸಾರಾ ಶುಭಮನ್ ಅವರದ್ದು ಎಂದು ಹೇಳಲಾದ ವಿಡಿಯೋದಲ್ಲಿ ಸಾರಾ ಮತ್ತು ಶುಭಮನ್ ರಾಯಲ್ ರೆಸ್ಟೋರೆಂಟ್‌ನಲ್ಲಿ ಸಮಯ ಕಳೆದಿದ್ದಾರೆ.
ವೈರಲ್ ವಿಡಿಯೋದಲ್ಲಿ, ಸಾರಾ ಶುಭಮನ್ ಅವರೊಂದಿಗೆ ಡಿನ್ನರ್ ಮಾಡುತ್ತಿರುವುದನ್ನು ಕಾಣಬಹುದು. ವೈಟರ್ ಮೇಜಿನ ಬಳಿ ನಿಂತಿದ್ದಾರೆ. ಸಾರಾ ಶುಭಮನ್ ಇಬ್ಬರೂ ಆಹಾರ ಆರ್ಡರ್ ಮಾಡುತ್ತಿರುವುದು ಕಂಡುಬರುತ್ತದೆ. ನಟಿ ಸಾರಾ ಅಲಿ ಖಾನ್ ಪಿಂಕ್ ಡ್ರೆಸ್ ಧರಿಸಿದ್ದರೆ, ಶುಭಮನ್ ಗಿಲ್ ಬಿಳಿ ಮತ್ತು ಹಸಿರು ಶರ್ಟ್ ಧರಿಸಿದ್ದರು.
-
Shubman gill date sara ali khan ko kar eha tha aur hum kisi aur hi sara ko lapet rhe the🥲#Shubmangill #CricketTwitter pic.twitter.com/oEAAXqXgOz
— Arun (@ArunTuThikHoGya) August 29, 2022 " class="align-text-top noRightClick twitterSection" data="
">Shubman gill date sara ali khan ko kar eha tha aur hum kisi aur hi sara ko lapet rhe the🥲#Shubmangill #CricketTwitter pic.twitter.com/oEAAXqXgOz
— Arun (@ArunTuThikHoGya) August 29, 2022Shubman gill date sara ali khan ko kar eha tha aur hum kisi aur hi sara ko lapet rhe the🥲#Shubmangill #CricketTwitter pic.twitter.com/oEAAXqXgOz
— Arun (@ArunTuThikHoGya) August 29, 2022
ಈ ಹಿಂದೆ ಶುಭಮನ್ ಗಿಲ್ ಅವರು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು ಎಂಬ ವದಂತಿಗಳಿದ್ದವು. ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ಉದಾಹರಣೆಗಳಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟೊಟ್ಟಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಶುಭಮನ್ ಹೆಸರು ಸಾರಾ ಅವರೊಂದಿಗೆ ಥಳಕು ಹಾಕಿಕೊಂಡಿದೆ.
ಇದೀಗ ಬಾಲಿವುಡ್ ತಾರೆ ಮತ್ತು ಕ್ರಿಕೆಟ್ ತಾರಾ ಜೋಡಿಯಾಗಲಿದ್ದಾರಾ ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. "ಕ್ರಿಕೆಟಿಗನ ಮಗಳಿಂದ (ಸಾರಾ ತೆಂಡೂಲ್ಕರ್) ಕ್ರಿಕೆಟಿಗನ ಮೊಮ್ಮಗಳು (ಸಾರಾ ಅಲಿ ಖಾನ್) # ಶುಭಮನ್ ಗಿಲ್ ಬಹಳ ದೂರ ಬಂದರು" ಎಂದು ಬರೆದಿದ್ದಾರೆ.
ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ನ ಜಾಗತಿಕ ಟಾಪ್ 10 ಸ್ಥಾನ ಪಡೆದ ಗಂಗೂಬಾಯಿ, ಆರ್‌ಆರ್‌ಆರ್, ಭೂಲ್ ಭುಲೈಯಾ 2
ಇನ್ನು, ಸಾರಾ ಬಗ್ಗೆ ಹೇಳೋದಾದರೆ, ಈ ಹಿಂದೆ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಈ ಬಗ್ಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಕಾಫಿ ವಿತ್ ಕರಣ್ 7 ರಲ್ಲಿ ಮಾತನಾಡಿದ್ದರು. ಅಲ್ಲದೇ ದಿ. ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೂ ಡೀಪ್ ಫ್ರೆಂಡ್ಶಿಪ್ ಇತ್ತು ಎಂಬ ವದಂತಿಗಳಿವೆ.