ETV Bharat / entertainment

ಉಷಾ ಮೆಹ್ತಾ ಬಯೋಪಿಕ್ - ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ಸಾರಾ ಅಲಿ ಖಾನ್ - Aye Watan Mere Watan

ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಪಾತ್ರದಲ್ಲಿ ನಟಿಸಲು ನಟಿ ಸಾರಾ ಅಲಿ ಖಾನ್ ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Sara Ali Khan as freedom fighter in Usha Mehta biopic
ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ಸಾರಾ ಅಲಿಕಾನ್
author img

By

Published : Aug 19, 2022, 8:12 PM IST

2018ರಲ್ಲಿ ಕೇದಾರನಾಥ್‌ ಸಿನಿಮಾದೊಂದಿಗೆ ಬಾಲಿವುಡ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸಾರಾ ಅಲಿ ಖಾನ್ ಸದ್ಯ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ನಿರ್ಮಾಪಕ ಕರಣ್ ಜೋಹರ್ ಅವರ ಮುಂಬರುವ ಬಯೋಪಿಕ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಪಾತ್ರದಲ್ಲಿ ನಟಿಸಲು ನಟಿ ಸಾರಾ ಅಲಿ ಖಾನ್ ಸಜ್ಜಾಗುತ್ತಿದ್ದಾರೆ.

ಚಿತ್ರಕ್ಕೆ ಆಯೇ ವತನ್ ಮೇರೆ ವತನ್ ಎಂದು ಹೆಸರಿಡಲಾಗಿದೆ. ಮಾಹಿತಿ ಪ್ರಕಾರ ಸೆಪ್ಟೆಂಬರ್​ನಲ್ಲಿ ಬಯೋಪಿಕ್‌ನ ಚಿತ್ರೀಕರಣ ಪ್ರಾರಂಭವಾಗಲಿದೆ. ಸಾರಾ ಅಲಿ ಖಾನ್ ಈ ವರ್ಷದ ಆರಂಭದಲ್ಲೇ ಚಿತ್ರಕ್ಕೆ ಒಪ್ಪಿ ಸಹಿ ಹಾಕಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೆ ಸಜ್ಜಾದ ಅಕ್ಷಯ್ ಕುಮಾರ್ ಅಭಿನಯದ ಕಟ್‌ಪುಟ್ಲಿ

ಉಷಾ ಮೆಹ್ತಾ ಪರಿಚಯ: ಮಾರ್ಚ್​​ 1920ರಲ್ಲಿ ಗುಜರಾತ್ ರಾಜ್ಯದಲ್ಲಿ ಜನಿಸಿದ ಉಷಾ ಮೆಹ್ತಾ ಅಪ್ಪಟ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು. 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಭಾರತೀಯರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಚಳುವಳಿಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಲ ಭೂಗತ ರೇಡಿಯೋ ಸ್ಟೇಷನ್ ಎಂದು ಕರೆಯಲ್ಪಡುವ ಕಾಂಗ್ರೆಸ್ ರೇಡಿಯೊ ಸಂಘಟಿಸಿದ್ದಕ್ಕಾಗಿ ಅವರನ್ನು ಇಂದಿಗೂ ಸ್ಮರಿಸಲಾಗುತ್ತದೆ. 1998ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿದೆ. 2000ರ ಆಗಸ್ಟ್ 11ರಂದು ಉಷಾ ಮೆಹ್ತಾ ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.