ETV Bharat / entertainment

'ಇದು ಸರಿ ಕಾಣುತ್ತಿಲ್ಲ' ಪಾಪ್​ಗಳ ಜೊತೆ ಕೋಪಗೊಂಡ ನಟಿ ಸಾರಾ ಅಲಿ ಖಾನ್​ - ಈಟಿವಿ ಭಾರತ ಕನ್ನಡ

Sara Ali Khan angry on paps: ನಟಿ ಸಾರಾ ಅಲಿ ಖಾನ್​ ಪಾಪರಾಜಿಗಳ ವಿರುದ್ಧ ಸಿಡಿದೆದ್ದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

sara ali khan
ನಟಿ ಸಾರಾ ಅಲಿ ಖಾನ್​
author img

By ETV Bharat Karnataka Team

Published : Aug 24, 2023, 10:42 AM IST

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ಮಾಧ್ಯಮದ ಮುಂದೆ ಬಂದಾಗಲೆಲ್ಲಾ ತಮ್ಮ ನಗುಮುಖದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಮುದ್ದಾದ ಸ್ಮೈಲ್​ನಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಆದರೆ, ಈ ಬಾರಿ ಮಾಲ್​ವೊಂದರಲ್ಲಿ ನಟಿ ಪಾಪ್​ಗಳ ವಿರುದ್ಧ ಕೋಪಗೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ಸಾರಾ ಅಲಿ ಖಾನ್​ ಆಹಾರ ಪದಾರ್ಥಗಳನ್ನು, ಅಗತ್ಯ ವಸ್ತುಗಳನ್ನು ಖರೀದಿಸಲು ಮಾಲ್​ಗೆ ಹೋಗುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಪಾಪ್​ಗಳು ಅವರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ. ಈ ವೇಳೆ, ಕೋಪಗೊಂಡ ನಟಿ ಕ್ಯಾಮರಾ ಆಫ್​ ಮಾಡುವಂತೆ ಕೇಳುತ್ತಾರೆ. "ಸರ್​! ದಯವಿಟ್ಟು ನಿಲ್ಲಿಸಿ. ಇದು ಸರಿ ಕಾಣುತ್ತಿಲ್ಲ" ಎಂದು ಹೇಳುತ್ತಾರೆ.

ವಿಡಿಯೋದಲ್ಲಿ ಸಾರಾ ಅಲಿ ಖಾನ್​ ಸಂಪೂರ್ಣ ವೈಟ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸುಂದರವಾದ ಸೂಟ್​ ಧರಿಸಿದ್ದಾರೆ. ಲೈಟ್​ ಮೇಕಪ್​ ಮತ್ತು ಪೋನಿಟೇಲ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋಗೆ ನೆಟ್ಟಿಗರು ಬಗೆ ಬಗೆ ಕಮೆಂಟ್​ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. 'ಸಾರಾ ಅಲಿ ಖಾನ್​ ಅವರನ್ನು ಬಿಟ್ಟು ಬಿಡಿ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಬ್ರೇಕ್ ಬಳಿಕ ತೆರೆ ಹಂಚಿಕೊಳ್ಳಲಿದ್ದಾರೆ ಅಕ್ಷಯ್​ ಕುಮಾರ್​-ರವೀನಾ ಟಂಡನ್​

ಸಾರಾ ಅಲಿ ಖಾನ್​ ಸಿನಿಮಾಗಳು: ಸಾರಾ ಕೊನೆಯದಾಗಿ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಕಾಣಿಸಿಕೊಂಡರು. ವಿಕ್ಕಿ ಕೌಶಲ್​ ಜೊತೆ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತು. ಜೂನ್​ 2 ರಂದು ಈ ಚಿತ್ರ ಥಿಯೇಟರ್​ಗಳಲ್ಲಿ ತೆರೆಕಂಡಿತು. ಸುಮಾರು 40 ಕೋಟಿ ಬಜೆಟ್​ನ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಒಂದು ತಿಂಗಳು ಪ್ರದರ್ಶನ ಕಂಡು 80ಕ್ಕೂ ಹೆಚ್ಚು ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಗಿದೆ. ಈ ರೊಮ್ಯಾಂಟಿಕ್, ಕಾಮಿಡಿ, ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿ ಆಗಿದೆ.

ಇದೀಗ ಅನುರಾಗ್ ಬಸು ಅವರ ಮುಂಬರುವ ಚಿತ್ರ 'ಮೆಟ್ರೋ...ಇನ್ ದಿನೋ' ಅಲ್ಲಿ ಅಭಿನಯಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್‌ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣ ಸೇನ್ ಶರ್ಮಾ, ಅನುಪಮ್ ಖೇರ್, ಫಾತಿಮಾ ಸನಾ ಶೇಖ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಕೂಡ ಇದ್ದಾರೆ. 'ಏ ವತನ್ ಮೇರೆ ವತನ್' ಪ್ರಾಜೆಕ್ಟ್​ ಕೂಡ ನಟಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ: ಹಸೆಮಣೆ ಏರಲು ಸಜ್ಜಾದ ವರುಣ್​ ತೇಜ್ ​- ಲಾವಣ್ಯ ತ್ರಿಪಾಠಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.