ETV Bharat / entertainment

'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಟೀಸರ್​​ ರಿಲೀಸ್: ಹೆಚ್ಚಾಯ್ತು ಪ್ರೇಕ್ಷಕರ ಕುತೂಹಲ

author img

By ETV Bharat Karnataka Team

Published : Oct 28, 2023, 1:35 PM IST

Updated : Oct 28, 2023, 1:46 PM IST

sapta sagaradaache ello side b: ಬಹುನಿರೀಕ್ಷಿತ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಚಿತ್ರದ ಟೀಸರ್​ ಅನಾವರಣಗೊಂಡಿದೆ.

sapta sagaradaache ello side b
ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ

ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ'. ಮೊದಲ ಭಾಗ ಅಂದರೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ಇತ್ತೀಚೆಗಷ್ಟೇ ತೆರೆಕಂಡು ಸೂಪರ್​ ಹಿಟ್​​​ ಆಗಿದೆ. ಪ್ರೇಕ್ಷಕರನ್ನು ಪ್ರೇಮ ಪ್ರಪಂಚಕ್ಕೆ ಕೊಂಡೊಯ್ದ ಸಿನಿಮಾ ಇದು. 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ' ಬಿಡುಗಡೆಗೆ ದಿನಗಣನೆ ಆರಂಭಗೊಂಡಿದ್ದು, ಇಂದು ಟೀಸರ್​​ ರಿಲೀಸ್​ ಆಗಿದೆ.

ಟೀಸರ್​​​ ಅನಾವರಣ: ಕಳೆದ ಸೆಪ್ಟೆಂಬರ್​ 1ರಂದು 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ತೆರೆಗಪ್ಪಳಿಸಿತ್ತು. ನಿರೀಕ್ಷೆಯಂತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ಯಶಸ್ಸು ಕಂಡಿತು. ಅಂದಕೊಂಡಂತೆ ಕಂಟೆಂಟ್​​ ಆಧಾರಿತ ಸಿನಿಮಾದಲ್ಲಿ ಹೊಸತನವೂ ಇತ್ತು. ಸಿನಿಮಾ ತೆಲುಗಿಗೂ ಡಬ್​ ಆಗಿ ಬಿಡುಗಡೆ ಆಯಿತು. ಪಾರ್ಟ್ 2 ನವೆಂಬರ್​ 17 ರಂದು ತೆರೆಕಾಣಲಿದೆ. ಪ್ರಚಾರದ ಭಾಗವಾಗಿ ಇಂದು ಟೀಸರ್​​​ ಅನಾವರಣಗೊಳಿಸಲಾಗಿದೆ.

  • " class="align-text-top noRightClick twitterSection" data="">

ಈ ಸಿನಿಮಾದಲ್ಲಿ ಮಾಡದ ತಪ್ಪಿಗೆ ಜೈಲು ಸೇರುವ ಯುವಕನ ನೋವನ್ನು ನಿರ್ದೇಶಕರು ಅದ್ಭುತವಾಗಿ ತೋರಿಸಿದ್ದಾರೆ. ಯುವಕನನ್ನು ಜೈಲಿನಿಂದ ಹೊರತರಲು ಗೆಳತಿ ಪಡುವ ಹರಸಾಹಸವನ್ನೂ ಭಾವುಕವಾಗಿ ತೋರಿಸಲಾಗಿದೆ. ಭಾವನಾತ್ಮಕ ಕಥೆಯ ಮುಂದುವರಿದ ಭಾಗ ನವೆಂಬರ್​ 17 ರಂದು ಕನ್ನಡ, ತೆಲುಗು, ತಮಿಳು, ಮಲೆಯಾಳಂನಲ್ಲಿ ಬಿಡುಗಡೆ ಆಗಲಿದ್ದು, ಇಂದು ರಿಲೀಸ್​ ಆಗಿರುವ ಟೀಸರ್​ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಹೇಮಂತ್​ ಎಂ ರಾವ್ ಆ್ಯಕ್ಷನ್​ ಕಟ್​ ಹೇಳಿರುವ 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ಚಿತ್ರದಲ್ಲಿ ಸಿಂಪಲ್​ ಸ್ಟಾರ್ ರಕ್ಷಿತ್​ ಶೆಟ್ಟಿ ಜೊತೆ ರುಕ್ಮಿಣಿ ವಸಂತ್​ ಸ್ಕ್ರೀನ್​​ ಶೇರ್ ಮಾಡಿದ್ದರು. ಮನು ಮತ್ತು ಪ್ರಿಯಾ ಪಾತ್ರದಲ್ಲಿ ಈ ಜೋಡಿ ಮಿಂಚಿತ್ತು. ಅದ್ಭುತ ಪ್ರೇಮಕಥೆಯನ್ನು ತೆರೆ ಮೇಲೆ ಬಹಳ ಅಚ್ಚುಕಟ್ಟಾಗಿ ರವಾನಿಸಲಾಗಿತ್ತು. ಮುಂದುವರಿದ ಭಾಗದಲ್ಲಿ ಚೈತ್ರಾ ಜೆ ಆಚಾರ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗ ಸಿನಿಮಾ ಒಟಿಟಿಯಲ್ಲಿ ಲಭ್ಯವಿದ್ದು, ಎರಡನೇ ಭಾಗ ವೀಕ್ಷಿಸಲು ಪ್ರೇಕ್ಷಕರು ಸಾಕಷ್ಟು ಕುತೂಹಲರಾಗಿದ್ದಾರೆ. ಮತ್ತೊಮ್ಮೆ ಪ್ರೇಮಪ್ರಪಂಚಕ್ಕೆ ಭೇಟಿ ಕೊಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಇದನ್ನೂ ಓದಿ: 'ತೇಜಸ್​​'ಗೆ ಮಿಶ್ರ ಪ್ರತಿಕ್ರಿಯೆ: ಕಂಗನಾ ರಣಾವತ್​ ಸಿನಿಮಾ 'ಗಳಿಕೆ'ಯಲ್ಲಿ ಹಿನ್ನೆಡೆ!

ಅತಿ ಕಡಿಮೆ ಅವಧಿಯಲ್ಲಿ ಸೀಕ್ವೆಲ್​​ ರಿಲೀಸ್​ ಆಗುತ್ತಿರುವುದು ಎಂಬ ಹೆಗ್ಗಳಿಕೆಯೂ ಈ ಚಿತ್ರ ಪಾತ್ರವಾಗಿದೆ. ಸಿನಿಮಾ ರಿಲೀಸ್​ ಡೇಟ್​ ಅನ್ನು ಎರಡು ಬಾರಿ ಮುಂದೂಡಲಾಗಿದ್ದರೂ ಕೂಡ ಎರಡೂವರೆ ತಿಂಗಳಲ್ಲೇ ಪಾರ್ಟ್ 2 ಬಿಡುಗಡೆ ಆಗುತ್ತಿದೆ. ಸೆಪ್ಟೆಂಬರ್​ 1 ರಂದು 'ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ' ತೆರೆಗಪ್ಪಳಿಸಿತ್ತು. ಒಂದು ತಿಂಗಳ ಅಂತರದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಅಕ್ಟೋಬರ್​ 20 ರಂದು ಸೀಕ್ವೆಲ್​ ರಿಲೀಸ್​ ಆಗಲಿದೆ ಎಂದು ಹೇಳಲಾಯಿತು. ನಂತರ ಅಕ್ಟೋಬರ್​ 27 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಹೇಳಲಾಯಿತು. ಅಂತಿಮವಾಗಿ ನವೆಂಬರ್​ 17 ರಂದು ಪಾರ್ಟ್ ಬಿ ತೆರೆಕಾಣಲಿದೆ.

ಇದನ್ನೂ ಓದಿ: ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಕ್ಷಮೆಯಾಚಿಸಿದ ಬಿಜೆಪಿ ಮುಖಂಡ ಸುರೇಶ್ ಗೋಪಿ

Last Updated : Oct 28, 2023, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.