ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆಗಳಿರುತ್ತದೆ. ಇವರು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿಂಪಲ್ ಕಥೆಯನ್ನು ವಿಭಿನ್ನವಾಗಿ, ನೋಡುಗರ ಮನಮುಟ್ಟುವಂತೆ ಕಟ್ಟಿಕೊಡುವ ರೀತಿ ನಿಜಕ್ಕೂ ಅಮೋಘ. ಬಹುಶಃ ಈ ಎಲ್ಲ ಕಾರಣದಿಂದ ಶೆಟ್ರ ಸಿನಿಮಾಗಳು ಪ್ರತಿ ಬಾರಿಯೂ ನೆಕ್ಸ್ಟ್ ಲೆವೆಲ್ನಲ್ಲಿ ಸಕ್ಸಸ್ ಕಾಣುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ತೆರೆ ಕಂಡ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
-
Become a part of Manu and Priya’s world, once again 🤍
— Rakshit Shetty (@rakshitshetty) September 29, 2023 " class="align-text-top noRightClick twitterSection" data="
Sapta Sagaradaache Ello - Side A streaming now on @PrimeVideoIN 😊#SSESideAOnPrime : https://t.co/fLuKJLHjiS pic.twitter.com/mWZ8Pe1H3T
">Become a part of Manu and Priya’s world, once again 🤍
— Rakshit Shetty (@rakshitshetty) September 29, 2023
Sapta Sagaradaache Ello - Side A streaming now on @PrimeVideoIN 😊#SSESideAOnPrime : https://t.co/fLuKJLHjiS pic.twitter.com/mWZ8Pe1H3TBecome a part of Manu and Priya’s world, once again 🤍
— Rakshit Shetty (@rakshitshetty) September 29, 2023
Sapta Sagaradaache Ello - Side A streaming now on @PrimeVideoIN 😊#SSESideAOnPrime : https://t.co/fLuKJLHjiS pic.twitter.com/mWZ8Pe1H3T
ಒಂದು ಪ್ರೇಮಕಥೆ. ಮನು ಮತ್ತು ಪ್ರಿಯಾಳ ಪ್ರೀತಿ ಪ್ರಪಂಚ. ಇವರಿಬ್ಬರ ಪರಿಶುದ್ಧ ಪ್ರೀತಿಯನ್ನು ಕಾವ್ಯಾತ್ಮಕವಾಗಿ ತೋರಿಸಿದ ಪರಿ ನಿಜಕ್ಕೂ ವರ್ಣಿಸಲಾಗದು. ಅದ್ಭುತ ಕಂಟೆಂಟ್ ಜೊತೆಗೆ ಅಭಿನಯ ನೋಡುಗರನ್ನು ಮೋಡಿ ಮಾಡುತ್ತಿದೆ. ಕೆಲವು ಥಿಯೇಟರ್ಗಳಲ್ಲಿ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಪ್ರದರ್ಶನ ಕಾಣುತ್ತಿದೆ. ಜೊತೆಗೆ ತೆಲುಗು ಭಾಷೆಗೂ ಡಬ್ ಆಗಿ 'ಸಪ್ತ ಸಾಗರಾಲು ದಾಟಿ' ಎಂಬ ಹೆಸರಿನಿಂದ ತೆಲುಗು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪುಟ್ಟಿ ಮತ್ತು ಮನುವಿನ ಪ್ರೇಮಕಾವ್ಯಕ್ಕೆ ತೆಲುಗು ರಾಜ್ಯಗಳ ಜನರು ಕೂಡ ಮನಸೋತಿದ್ದಾರೆ.
ಇಷ್ಟೊಂದು ಯಶಸ್ಸು ಕಂಡಿರುವ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಸಿನಿಮಾ ಇದೀಗ ಓಟಿಟಿಗೂ ಎಂಟ್ರಿ ಕೊಟ್ಟಿದೆ. ಓಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ಗಳಲ್ಲಿ ಸಿನಿಮಾ ನೋಡದವರು ಮನೆಯಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಕೆಲವೇ ದಿನಗಳಲ್ಲಿ ಸೈಡ್ ಬಿ ಕೂಡ ತೆರೆಗೆ ಬರಲಿದ್ದು, ಈ ಕಾರಣಕ್ಕೆ ಸೈಡ್ ಎ ಅನ್ನು ನಿನ್ನೆಯಿಂದ ಓಟಿಟಿಗೆ ಬಿಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ನಿಮಗೆ ಲಭ್ಯವಿದೆ.
SSESideB ಬಿಡುಗಡೆ ದಿನಾಂಕ ಮುಂದೂಡಿಕೆ: ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ಒಂದು ತಿಂಗಳ ಅಂತರದಲ್ಲಿ ಸೀಕ್ವೆಲ್ ಬಿಡುಗಡೆಯಾಗುತ್ತಿದೆ. ಈ ವಿಚಾರ ಈಗಾಗಲೇ ಗೊತ್ತಿದೆ. ಆದರೆ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಈ ಮೊದಲು ಅಕ್ಟೋಬರ್ 20 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರತಂಡ ಇದರಲ್ಲಿ ಕೊಂಚ ಬದಲಾವಣೆ ಮಾಡಿ ಅಕ್ಟೋಬರ್ 27 ರಂದು ರಿಲೀಸ್ ಮಾಡಲು ನಿರ್ಧರಿಸಿದೆ. ಅತ್ಯಂತ ಸಣ್ಣ ಅಂತರದಲ್ಲಿ ಸೀಕ್ವೆಲ್ ರಿಲೀಸ್ ಮಾಡುತ್ತಿರುವುದು ಇದೇ ಮೊದಲು.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗೆ ಹೇಮಂತ್ ಎಂ.ರಾವ್ ನಿರ್ದೇಶನವಿದೆ. ಜೊತೆಗೆ ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ. 'ಸೈಡ್ ಎ'ನಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. 'ಸೈಡ್ ಬಿ'ನಲ್ಲಿ ರುಕ್ಮಿಣಿ ಜೊತೆಗೆ ಚೈತ್ರಾ.ಜೆ. ಆಚಾರ್ ಕೂಡ ಇದ್ದಾರೆ. ಇವರಲ್ಲದೇ ಚಿತ್ರದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ.
ಸಿನಿಮಾಗೆ ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಬಂಡವಾಳ ಹೂಡಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿದೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. 'ಸೈಡ್ ಎ' ಈಗಾಗಲೇ ಸೂಪರ್ ಹಿಟ್ ಆಗಿದ್ದು, 'ಸೈಡ್ ಬಿ'ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: 'ಸಪ್ತಸಾಗರದಾಚೆ ಎಲ್ಲೋ' ತೆಲುಗು ಆವೃತ್ತಿ ಬಿಡುಗಡೆಗೆ ಮುಹೂರ್ತ: ಪ್ರೇಕ್ಷಕರಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?