ETV Bharat / entertainment

ಸ್ವಿಜರ್ಲ್ಯಾಂಡ್​ನಲ್ಲಿ 'ಸಂಜು ವೆಡ್ಸ್​ ಗೀತಾ 2' ಶೂಟಿಂಗ್'​: ಹಿಮದಲ್ಲಿ ಕುಣಿದಾಡಿದ ರಚಿತಾ ರಾಮ್ - ಈಟಿವಿ ಭಾರತ ಕನ್ನಡ

'ಸಂಜು ವೆಡ್ಸ್​ ಗೀತಾ 2' ಚಿತ್ರತಂಡ ಶೂಟಿಂಗ್​ಗಾಗಿ ಸ್ವಿಜರ್ಲ್ಯಾಂಡ್​ಗೆ ತೆರಳಿದ್ದಾರೆ. ಅಲ್ಲಿನ ಫೋಟೋಗಳನ್ನು ನಟಿ ರಚಿತಾ ರಾಮ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sanju Weds Geeta 2 shooting in Switzerland rachita ram shares photos
ಸ್ವಿಜರ್ಲ್ಯಾಂಡ್​ನಲ್ಲಿ 'ಸಂಜು ವೆಡ್ಸ್​ ಗೀತಾ 2 ಶೂಟಿಂಗ್'​: ಹಿಮದಲ್ಲಿ ಕುಣಿದಾಡಿದ ರಚಿತಾ ರಾಮ್
author img

By ETV Bharat Karnataka Team

Published : Dec 19, 2023, 10:52 PM IST

ಒಳ್ಳೆಯ ಕಂಟೆಂಟ್‌​, ಇಂಪಾದ ಹಾಡುಗಳೊಂದಿಗೆ 12 ವರ್ಷಗಳ ಹಿಂದೆ ಬೆಳ್ಳಿ ತೆರೆಗೆ ಬಂದಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರವನ್ನು ಕನ್ನಡ‌ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್​ ಬರುತ್ತಿದೆ. ಪ್ರೇಕ್ಷಕರ ಕುತೂಹಲವೂ ಹೆಚ್ಚಾಗಿದೆ. ನಾಗಶೇಖರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಮೊದಲ ಭಾಗದಲ್ಲಿದ್ದ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿಯುತ್ತಿದ್ದಾರೆ. ಫಾರ್ ಎ ಚೇಂಜ್​ ಎಂಬಂತೆ ಮೋಹಕತಾರೆ ರಮ್ಯಾ ಅವರ ಬದಲಿಗೆ ಡಿಂಪಲ್​ ಕ್ವೀನ್​​ ರಚಿತಾ ರಾಮ್ ನಾಯಕಿಯಾಗಿದ್ದಾರೆ.

ಇದೀಗ ಚಿತ್ರತಂಡ ಶೂಟಿಂಗ್​ಗಾಗಿ ಸ್ವಿಜರ್ಲ್ಯಾಂಡ್​ಗೆ ತೆರಳಿದ್ದಾರೆ. ಸುಂದರ ತಾಣಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಟಿ ರಚಿತಾ ರಾಮ್​ ಈ ಬಗ್ಗೆ ಅಪ್​ಡೇಟ್​ ನೀಡಿದ್ದು, ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ​ಸ್ವಿಸ್​ ಪದ್ಧತಿಯಂತೆ ನಯಾ ಡ್ರೆಸ್​ ತೊಟ್ಟು ಹಿಮದಲ್ಲಿ ಕುಣಿದು ಡಿಂಪಲ್​ ಕ್ವೀನ್​ ಸಂಭ್ರಮಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಈ ಉಡುಗೆ ತೊಡಲು ತುಂಬಾ ಥ್ರಿಲ್​ ಆಗಿದ್ದೇನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ನಟಿಯ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ.

ಈ ಹಿಂದೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕ ನಾಗಶೇಖರ್, ''ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಸೀಕ್ವೆಲ್​​ ನಿರ್ಮಾಣಕ್ಕೆ ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನದ ಶೂಟಿಂಗ್ ನಡೆಸಿದ್ದೇವೆ. ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾಗಿವೆ. ರಂಗಾಯಣ ರಘು, ಸಾಧು ಕೋಕಿಲ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್​ಮೇಟ್ ಕುಮಾರ್ ಜೊತೆಗೂಡಿದ್ದಾರೆ. ನನ್ನ ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಶ್ರೀಧರ್ ಸಂಭ್ರಮ್ ಒಳ್ಳೆಯ ಟ್ಯೂನ್ ಕೊಟ್ಟಿದ್ದಾರೆ" ಎಂದು ತಿಳಿಸಿದ್ದರು.

''ಲೀಡ್ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಉತ್ತಮವಾಗಿ ನಟಿಸುತ್ತಿದ್ದಾರೆ. ಡಿಸೆಂಬರ್ 2ರಿಂದ ಬೆಂಗಳೂರಲ್ಲಿ, ಡಿ. 9ರಿಂದ ಸ್ವಿಟ್ಜರ್ಲ್ಯಾಂಡ್​ನಲ್ಲಿ 12 ದಿನಗಳ ಶೂಟಿಂಗ್ ಮುಗಿಸಿ ನಂತರ ಮುಂಬೈ, ಹೈದರಾಬಾದ್​ನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ. 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ. ಅದೇ ದಿನ ಮೊದಲ ಭಾಗ ಬಿಡುಗಡೆಯಾಗಿತ್ತು. ಜೊತೆಗೆ ಇದೇ ಡಿಸೆಂಬರ್ 29ರಂದು ನಮ್ಮ ನಿರ್ಮಾಪಕರಾದ ಚಲವಾದಿ ಕುಮಾರ್ ಅವರ ಹುಟ್ಟುಹಬ್ಬ. ಅಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ'' ಎಂದು ಮಾಹಿತಿ ನೀಡಿದ್ದರು.

ಇದರ ಅನುಸಾರ ಡಿಸೆಂಬರ್​ ತಿಂಗಳಲ್ಲಿ ಶೂಟಿಂಗ್​ಗಾಗಿ ಚಿತ್ರತಂಡ ಸ್ವಿಜರ್ಲ್ಯಾಂಡ್​ನಲ್ಲಿದೆ. ನಂತರ ಮುಂಬೈ, ಹೈದರಾಬಾದ್​ನಲ್ಲಿ 'ಸಂಜು ವೆಡ್ಸ್ ಗೀತಾ 2' ಚಿತ್ರೀಕರಣ ನಡೆಯಲಿದೆ. ಟ್ರೇಲರ್​ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಏಪ್ರಿಲ್​ 1ರಂದು ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ 2' ಟೀಸರ್ ರಿಲೀಸ್​: ಅದ್ಭುತ ಪ್ರೇಮಕಥೆಯ ಶೂಟಿಂಗ್​ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.