ETV Bharat / entertainment

'ತ್ರಿವಿಕ್ರಮ' ವಿಕ್ಕಿಗೆ ಸಾಥ್ ಕೊಡಲಿರುವ ಸ್ಯಾಂಡಲ್‌ವುಡ್ ಸ್ಟಾರ್ಸ್! - ತ್ರಿವಿಕ್ರಮ ಸಿನಿಮಾ ಜೂನ್ 24ರಂದು ಬಿಡುಗಡೆ

ನಟ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್​ ಅಭಿನಯದ 'ತ್ರಿವಿಕ್ರಮ' ಸಿನಿಮಾ ಜೂನ್ 24ರಂದು ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರತಂಡ ಬೃಹತ್​ ಸಮಾರಂಭ ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ ತಾರೆಯರು ಭಾಗಿಯಾಗಲಿದ್ದಾರೆ..

Trivikrama Cinema Released on June 24th
'ತ್ರಿವಿಕ್ರಮ' ವಿಕ್ಕಿಗೆ ಸಾಥ್ ಕೊಡಲಿರುವ ಸ್ಯಾಂಡಲ್ ವುಡ್ ಸ್ಟಾರ್ಸ್
author img

By

Published : Jun 17, 2022, 7:32 PM IST

ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಎರಡನೇ ಮಗ ವಿಕ್ರಮ್ ಅಭಿನಯದ ಸಿನಿಮಾ ದೊಡ್ಡ ಮಟ್ಟದಲ್ಲಿ ಲಾಂಚ್ ಆಗಲು ವೇದಿಕೆ ಸಿದ್ಧವಾಗಿದೆ. ವಿಕ್ಕಿ ನಟನೆಯ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಜೂನ್ 24ರಂದು ಬಿಡುಗಡೆಯಾಗಲಿದೆ. ಹೀಗಾಗಿ, ಸಿನಿಮಾ ಬಿಡುಗಡೆಗೂ ಮುನ್ನ ತ್ರಿವಿಕ್ರಮ ಚಿತ್ರತಂಡ ಬೃಹತ್‌ ಸಮಾರಂಭ ಏರ್ಪಡಿಸಿದೆ. ಇದೇ ಜೂನ್ 19ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ದಂಡು ಸಾಕ್ಷಿಯಾಗಲಿದೆ.

ವಿಕ್ಕಿಗೆ ಶುಭ ಹಾರೈಸಲು ಅದ್ಧೂರಿ ವೇದಿಕೆ ಸೃಷ್ಟಿಯಾಗಲಿದೆ. ರಂಗೀನ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಆಗಮಿಸಲಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ಶರಣ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 19ರಂದು ನಾಯಂಡಹಳ್ಳಿ ಬಳಿಯಿರುವ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ.

Trivikrama Cinema Released on June 24th
'ತ್ರಿವಿಕ್ರಮ' ವಿಕ್ಕಿಗೆ ಸಾಥ್ ಕೊಡಲಿರುವ ಸ್ಯಾಂಡಲ್‌ವುಡ್ ಸ್ಟಾರ್ಸ್

ಸಹನಾಮೂರ್ತಿ 'ತ್ರಿವಿಕ್ರಮ'ನಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ 'ಪ್ಲೀಸ್ ಮಮ್ಮಿ', 'ಹನಿ ಬನಿ ಫೀಲ್ ಮೈಲವ್' ಹಾಗೂ 'ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್' ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್​​ಗಟ್ಟಲೇ ಹಿಟ್ಸ್ ದಾಖಲಿಸಿರುವುದು 'ತ್ರಿವಿಕ್ರಮ'ನ ಹೆಚ್ಚುಗಾರಿಕೆ.

ಇದನ್ನೂ ಓದಿ: ಜುಲೈ 8ಕ್ಕೆ ರಾಜ್ಯಾದ್ಯಂತ 'ತೂತು ಮಡಿಕೆ' ತೆರೆಗೆ

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ. ಪ್ರಕಾಶ್ ಸಂಕಲನವಿದೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ ತ್ರಿವಿಕ್ರಮ ಟೀಂ, ಟ್ರೇಲರ್ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. ಇದೇ 19ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ 'ತ್ರಿವಿಕ್ರಮ' ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.