ETV Bharat / entertainment

ಮತ್ತೆ ಶುರುವಾಗಲಿದೆ ಬೌಲಿಂಗ್ ಲೀಗ್; ಆಟಕ್ಕೆ ಸಜ್ಜಾದ ಸ್ಯಾಂಡಲ್‌ವುಡ್ ಸ್ಟಾರ್ಸ್ಸ್ - ​ ETV Bharat Karnataka

Bowling league: ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿರುವ ಬೌಲಿಂಗ್ ಲೀಗ್ ಎರಡು ದಿನಗಳ ಕಾಲ ನಡೆಯಲಿದೆ.

ಬೌಲಿಂಗ್ ಲೀಗ್
ಬೌಲಿಂಗ್ ಲೀಗ್
author img

By ETV Bharat Karnataka Team

Published : Nov 6, 2023, 10:42 AM IST

ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಹೀಗೆ ಅನೇಕ ಲೀಗ್‌ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ ಕೂಡ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಬೌಲಿಂಗ್ ಲೀಗ್ ಯಶಸ್ವಿಯಾದ ಬೆನ್ನಲ್ಲೇ ಇದೀಗ 2ನೇ ಲೀಗ್‌ಗೆ ತಾರೆಯರು ಸಜ್ಜಾಗಿದ್ದಾರೆ. ಈ ಆಟ ಪ್ರಾರಂಭಕ್ಕೂ ಮೊದಲು ತಾರೆಗಳು ಮಾಧ್ಯಮದ ಮುಂದೆ ಹಾಜರಾಗಿದ್ದರು.

ಬೌಲಿಂಗ್ ಲೀಗ್‌ ಅನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದು ನಿರ್ಮಾಪಕ ಕಮರ್. ಕಳೆದ ವರ್ಷ ಬೌಲಿಂಗ್ ಲೀಗ್‌‌ ಯಶಸ್ವಿಯಾಗಿ ನಿಭಾಯಿಸಿದ್ದ ಇವರು, ಈ ಬಾರಿ ಕೂಡ ಅದೇ ಜೋಶ್‌​ನಲ್ಲಿ ಲೀಗ್ ನಡೆಸಲು ಮುಂದಾಗಿದ್ದಾರೆ. ಇತ್ತೀಚೆಗೆ ಈ ವಿಚಾರವಾಗಿ ಅವರು ಮಾಹಿತಿ ಹಂಚಿಕೊಂಡಿದ್ದರು.

ನಟಿಯರಾದ ಕಾರುಣ್ಯಾ ರಾಮ್, ಧನ್ಯಾ ರಾಮ್ ಕುಮಾರ್, ರಕ್ಷಿತಾ ಶೆಟ್ಟಿ, ರಚನಾ ಇಂದರ್, ಬೃಂದಾ ಆಚಾರ್ಯ, ಸಾಕ್ಷಿ ಹಾಗು ನಟರಾದ ತರುಣ್ ಚಂದ್ರ, ಕೆಂಪೇಗೌಡ, ಭರತ್ ಸೇರಿದಂತೆ ಅನೇಕರು ಹಾಜರಿದ್ದರು. ಈ ಸಲದ ಲೀಗ್‌ನಲ್ಲಿ ಒಟ್ಟು ಆರು ತಂಡಗಳಿದ್ದು, ತಾರೆಯರ ಜೊತೆಗೆ ಪತ್ರಕರ್ತರು ಕೂಡ ಭಾವಹಿಸುತ್ತಿರುವುದು ವಿಶೇಷ.

ಸ್ಯಾಂಡಲ್‌ವುಡ್ ಸ್ಟಾರ್ಸ್ಸ್ ಬೌಲಿಂಗ್ ಲೀಗ್
ಸ್ಯಾಂಡಲ್‌ವುಡ್ ಸ್ಟಾರ್ಸ್ಸ್ ಬೌಲಿಂಗ್ ಲೀಗ್

ಕಳೆದ ಬಾರಿ ಶ್ರೀನಗರ ಕಿಟ್ಟಿ ಮತ್ತು ತಂಡ ಗೆದ್ದು ಬೀಗಿದ್ದರು. ಈ ಸಲ ಕಪ್ ಯಾರ ಮುಡಿಗೇರಲಿದೆ ಎಂಬುದನ್ನು ಕಾದುನೋಡಬೇಕು. ಡಿಸೆಂಬರ್‌ನಲ್ಲಿ ಲೀಗ್ ಪ್ರಾರಂಭವಾಗಲಿದ್ದು, ಎರಡು ದಿನ ನಡೆಯಲಿದೆ. ಇನ್ನೂ ಏನೆಲ್ಲ ವಿಶೇಷತೆಗಲಿರಲಿದೆ, ಯಾರೆಲ್ಲ ಕಲಾವಿದರು ಭಾಗಿಯಾಗುತ್ತಾರೆ ಎನ್ನುವ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡಲಾಗುವುದು ಎಂದು ಕಮರ್ ಫಿಲ್ಮ್ ಫ್ಯಾಕ್ಟರಿ ತಿಳಿಸಿದೆ.

ಟಿಪಿಎಲ್​ ಸೀಸನ್​ 3: ಇತ್ತೀಚೆಗೆ ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಟೆಲಿವಿಷನ್​ ಪ್ರೀಮಿಯರ್​ ಲೀಗ್​ (ಟಿಪಿಎಲ್​) ಸೀಸನ್​ 3ರ ಟೀಂ ಲೋಗೋ ಬಿಡುಗಡೆ ಮಾಡಲಾಗಿತ್ತು. ಟಿಪಿಎಲ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದರು. ಜನವರಿಯಲ್ಲಿ ಟೆಲಿವಿಷನ್​ ಪ್ರೀಮಿಯರ್​ ಲೀಗ್​ 3 ನಡೆಯಲಿದೆ.

ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನೀಲ್ ಕುಮಾರ್ ನೇತೃತ್ವದಲ್ಲಿ ಪಂದ್ಯಾಟ ನಡೆಯುತ್ತಿದೆ. ಸೀಸನ್ 3ಯಲ್ಲಿ ಸಾಕಷ್ಟು ವಿಶೇಷಗಳಿದ್ದು, ಎನ್ 1 ಕ್ರಿಕೆಟ್ ಅಕಾಡೆಮಿಯಿಂದ ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್ (Batter), ಪರ್ಪಲ್ ಕ್ಯಾಪ್ ಹೋಲ್ಡರ್ (Bowler) ಪಡೆದವರಿಗೆ ಬೈಕ್ ಬಹುಮಾನ ಕೊಡಲಾಗುತ್ತದೆ.

ಇದನ್ನೂ ಓದಿ: ಟೆಲಿವಿಷನ್​ ಪ್ರೀಮಿಯರ್​ ಲೀಗ್ (TPL) ಸೀಸನ್ 3ರ ಟೀಂ ಲೋಗೋ ಬಿಡುಗಡೆ: ​ರಾಗಿಣಿ ದ್ವಿವೇದಿ ಬ್ರ್ಯಾಂಡ್​ ಅಂಬಾಸಿಡರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.