ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕ, ಸ್ಟಾರ್ ಹೀರೊಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಪತ್ರಿಕಾ ಸಂಪರ್ಕಾಧಿಕಾರಿಗಳು. ಪಿಆರ್‌ಓ ಇಲ್ಲದೆ ಹೋದಲ್ಲಿ ಆ ಸಿನಿಮಾ ಜನರಿಗೆ ತಲುಪುವುದು ಕೂಡ ಅನುಮಾನ. ಅದರಂತೆ ಕನ್ನಡ ಸಿನಿಲೋಕದಲ್ಲಿ ಫೇಮಸ್ ಪತ್ರಿಕಾ ಪ್ರಚಾರಕ ಅಂದ್ರೆ ಸುಧೀಂದ್ರ ವೆಂಕಟೇಶ್ ಅವರು.
ಸುಧೀಂದ್ರ ವೆಂಕಟೇಶ್ ಅವರು ತಮ್ಮ ಸಿನಿ ಜರ್ನಿ ಶುರು ಮಾಡಿದ್ದು 1985ರಲ್ಲಿ. ದಿವಂಗತ ಸುಧೀಂದ್ರ ಅಂದ್ರೆ ವೆಂಕಟೇಶ್ ಅವರ ಚಿಕ್ಕಪ್ಪನ ಜೊತೆ ಸಹಾಯಕರಾಗಿ ವೃತ್ತಿ ಆರಂಭಿಸಿದ್ದರು. ಸುಧೀಂದ್ರ ಅವರೇ ಶ್ರೀ ರಾಘವೇಂದ್ರ ಚಿತ್ರವಾಣಿ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು. ಸುಮಾರು ಮೂರುವರೆ ದಶಕಗಳಿಂದ ವೆಂಕಟೇಶ್ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಸದ್ಯ ಚಿತ್ರರಂಗದಲ್ಲಿ ಡಿಜೆ ವೆಂಕಟೇಶ್ ಗುರುತಿಸಿಕೊಂಡಿರುವ ಸುಧೀಂದ್ರ ವೆಂಕಟೇಶ್ ಮಗಳ ಅದ್ದೂರಿ ಮದುವೆ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ಪ್ರತಿಷ್ಠಿತ ಆದಿತ್ಯ ಕಲ್ಯಾಣ ಮಂಟಪದಲ್ಲಿ ಸುಧೀಂದ್ರ ವೆಂಕಟೇಶ್ ಅವರ ಪುತ್ರಿ ಚಂದನ ಪ್ರಸನ್ನ ಭಾಸ್ಕರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ನವ ಜೋಡಿಗೆ ಹಾರೈಯಿಸಲು ಕನ್ನಡ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಬಂದಿದ್ದು ವಿಶೇಷ.
ಇದನ್ನೂ ಓದಿ: ಅರಿಜಿತ್ ಸಿಂಗ್ ಕೈ ಹಿಡಿದೆಳೆದ ಮಹಿಳಾ ಅಭಿಮಾನಿ: ಸ್ಟಾರ್ ಸಿಂಗರ್‌ಗೆ ಗಾಯ
ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಧ್ರುವ ಸರ್ಜಾ, ಅಜೇಯ್ ರಾವ್, ವಿನೋದ್ ಪ್ರಭಾಕರ್, ಹಂಸಲೇಖ ದಂಪತಿ, ಸುಧಾರಾಣಿ, ರಾಗಿಣಿ ದ್ವಿವೇದಿ, ಚಾಂದಿನಿ, ಅಮೂಲ್ಯ, ಸೋನು ಗೌಡ , ಪ್ರಗತಿ ರಿಷಬ್ ಶೆಟ್ಟಿ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಧರ್ಮ, ತಬಲ ನಾಣಿ, ಶ್ರೀನಾಥ್, ಕೀರ್ತಿ ರಾಜ್, ಧರ್ಮ ಕೀರ್ತಿರಾಜ್, ಸಿಹಿ ಕಹಿ ಚಂದ್ರು, ಬಿ ಸುರೇಶ್, ಗುರುದತ್, ರವಿಚೇತನ್ ಎಸ್ ಎ ಚಿನ್ನೇಗೌಡ, ಎಸ್ ವಿ ಬಾಬು, ಎಂ.ಜಿ. ರಾಮಮೂರ್ತಿ, ಟಿ.ಪಿ ಸಿದ್ದರಾಜು ಆಗಮಿಸಿದ್ದರು.
ಇವರಲ್ಲದೇ ನಿರ್ಮಾಪಕ ಎನ್ ಎಸ್ ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಆರ್ ಚಂದ್ರು, ಟಿ.ಎನ್ ಸೀತಾರಮ್, ಬಹದ್ದೂರ್ ಚೇತನ್, ಸಾಹಸ ನಿರ್ದೇಶಕ ರವಿವರ್ಮ, ಗಾಯಕಿಯರಾದ ಮಂಜುಳಾ ಗುರುರಾಜ್, ಬಿ.ಆರ್ ಛಾಯಾ, ಸಂಗೀತ ಕಟ್ಟಿ ಸೇರಿದಂತೆ ಮುಂತಾದ ಚಿತ್ರರಂಗದ ಗಣ್ಯರು ವಿವಾಹ ಸಮಾರಂಭಕ್ಕೆ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
ಕಳೆದ ಹಲವು ವರ್ಷಗಳಿಂದ ಸುಧೀಂದ್ರ ವೆಂಕಟೇಶ್ ಪತ್ರಿಕಾ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡ ಪ್ರಸಿದ್ಧ ಸಿನಿಮಾ ನಿರ್ಮಾಣ ಕಂಪನಿಗಳಿಗೆ ಕೆಲಸ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್, ರಾಕ್ ಲೈನ್ ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್, ಶೈಲೆಂದ್ರ ಪ್ರೊಡಕ್ಷನ್ಸ್, ರಾಮೋಜಿ ಫಿಲಂಸ್, ಉಪೇಂದ್ರ ಪ್ರೊಡಕ್ಷನ್ಸ್, ಕಿಚ್ಚ ಕ್ರಿಯೇಷನ್ಸ್, ಪುಷ್ಕರ್ ಫಿಲಂಸ್, ಎಸ್ ವಿ ಪ್ರೊಡಕ್ಷನ್ಸ್ ಸೇರಿದಂತೆ ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್ ಹೀಗೆ ದೊಡ್ಡ ದೊಡ್ಡ ಸ್ಟಾರ್ಗಳಿಂದ ಹಿಡಿದು, ಧ್ರುವ ಸರ್ಜಾರಂತಹ ಯಂಗ್ ಸ್ಟಾರ್ಗಳ ಸಿನಿಮಾಗಳವರೆಗೂ ವೆಂಕಟೇಶ್ ಸಿನಿಮಾ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರದ ಟ್ರೇಲರ್ ಔಟ್