ರಾಮ ನವಮಿಯಂದು ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ 'ಗುರುದೇವ್ ಹೊಯ್ಸಳ' ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿದೆ. ಚಿತ್ರಮಂದಿರಗಳಲ್ಲಿ ಅದ್ಭುತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಡಾಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಿನಿ ಪ್ರೇಮಿಗಳ ಜೊತೆ ಸಿನಿ ತಾರೆಯರು ಕೂಡ ಸಿನಿಮಾವನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಗುರುದೇವ್ ಹೊಯ್ಸಳ ನೋಡದವರು ಕೂಡಲೇ ಥಿಯೇಟರ್ಗೆ ತೆರಳಿ ಸಿನಿಮಾವನ್ನು ವೀಕ್ಷಿಸುವಂತೆ ತಿಳಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್: "ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ. ಇಂತಹ ಉತ್ತಮ ಚಿತ್ರವನ್ನು ನೀಡಿದಕ್ಕಾಗಿ ಧನಂಜಯ್, ನವೀನ್ ಶಂಕರ್ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂಬುದಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
-
'ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ.
— Ashwini Puneeth Rajkumar (@Ashwini_PRK) March 31, 2023 " class="align-text-top noRightClick twitterSection" data="
ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ.#GurudevHoysala takes action to another level. A treat to watch.
Kudos to Dhananjaya, Naveen Shankar and the rest of the cast and crew for this top notch movie. ✨ pic.twitter.com/r6xA5V1vyk
">'ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ.
— Ashwini Puneeth Rajkumar (@Ashwini_PRK) March 31, 2023
ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ.#GurudevHoysala takes action to another level. A treat to watch.
Kudos to Dhananjaya, Naveen Shankar and the rest of the cast and crew for this top notch movie. ✨ pic.twitter.com/r6xA5V1vyk'ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ.
— Ashwini Puneeth Rajkumar (@Ashwini_PRK) March 31, 2023
ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ.#GurudevHoysala takes action to another level. A treat to watch.
Kudos to Dhananjaya, Naveen Shankar and the rest of the cast and crew for this top notch movie. ✨ pic.twitter.com/r6xA5V1vyk
ಸಳ ಸಳ ಸಳ, ಜೈ ಹೊಯ್ಸಳ.. "ಫಸ್ಟ್ ಹಾಫ್ ಸಳ ಸಳ ಸಳ, ಸೆಕೆಂಡ್ ಆಫ್ ಜೈ ಹೊಯ್ಸಳ. ಉತ್ತಮ ಸಂದೇಶವುಳ್ಳ ಸಿನಿಮಾ. ಡಾಲಿ ಧನಂಜಯ್ ನಟ ರಾಕ್ಷಸ, ನವೀನ್ ಶಂಕರ್ ಹೊಸ ರಾಕ್ಷಸ. ನೋಡಲೇಬೇಕಾದ ಸಿನಿಮಾ 'ಗುರುದೇವ್ ಹೊಯ್ಸಳ' ತುಂಬಾ ಚೆನ್ನಾಗಿದೆ ಚಿತ್ರ" ಎಂದು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಲಿ ಆಗಿ ನವೀನ್ ಶಂಕರ್ ಅತ್ಯುತ್ತಮ.. "ಸತ್ತಾಗ ಕೊಡೋದು ಡೆತ್ ಸರ್ಟಿಫಿಕೇಟ್, ಕಾಸ್ಟ್ ಸರ್ಟಿಫಿಕೇಟ್ ಅಲ್ಲ. ಧನಂಜಯ್, ಅಮೃತಾ ಅಯ್ಯಂಗಾರ್, ಬಲಿ ಆಗಿ ನವೀನ್ ಶಂಕರ್ ಅತ್ಯುತ್ತಮ. ಜಾತಿ, ಪ್ರೀತಿ, ಕನ್ನಡ, ಪೊಲೀಸ್ ಚರ್ಚಾ ವಿಷಯಗಳ ಪೈಸಾವಸೂಲ್ ಚಿತ್ರ. ನಿರ್ದೇಶನ, ಸಂಗೀತ, ಛಾಯಾಗ್ರಹಣ, ನಿರ್ಮಾಣ ಎಲ್ಲವೂ ಉತ್ತಮವಾಗಿದೆ. ಅಭಿನಂದನೆಗಳು ಚಿತ್ರತಂಡಕ್ಕೆ" ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.
-
ಸತ್ತಾಗ ಕೊಡೋದು death certificate
— ಸುನಿ/SuNi (@SimpleSuni) April 1, 2023 " class="align-text-top noRightClick twitterSection" data="
Caste certificate ಅಲ್ಲ#ಹೊಯ್ಸಳ@Dhananjayaka @amrutha_iyengar
ಬಲಿ ಆಗಿ @Nwinshankar ಅತ್ತ್ಯುತ್ತಮ#ಜಾತಿ #ಪ್ರೀತಿ #ಕನ್ನಡ #ಪೊಲೀಸ್ ಚರ್ಚಾ ವಿಷಯಗಳ ಪೈಸಾವಸೂಲ್ ಚಿತ್ರ
ನಿರ್ದೇಶಕ ಸಂಗೀತ ಛಾಯಾಗ್ರಹಣ #production ಎಲ್ಲವು ಉತ್ತಮ #ಶುಭಾಶಯಗಳು @Karthik1423 @vijaycinephilia
">ಸತ್ತಾಗ ಕೊಡೋದು death certificate
— ಸುನಿ/SuNi (@SimpleSuni) April 1, 2023
Caste certificate ಅಲ್ಲ#ಹೊಯ್ಸಳ@Dhananjayaka @amrutha_iyengar
ಬಲಿ ಆಗಿ @Nwinshankar ಅತ್ತ್ಯುತ್ತಮ#ಜಾತಿ #ಪ್ರೀತಿ #ಕನ್ನಡ #ಪೊಲೀಸ್ ಚರ್ಚಾ ವಿಷಯಗಳ ಪೈಸಾವಸೂಲ್ ಚಿತ್ರ
ನಿರ್ದೇಶಕ ಸಂಗೀತ ಛಾಯಾಗ್ರಹಣ #production ಎಲ್ಲವು ಉತ್ತಮ #ಶುಭಾಶಯಗಳು @Karthik1423 @vijaycinephiliaಸತ್ತಾಗ ಕೊಡೋದು death certificate
— ಸುನಿ/SuNi (@SimpleSuni) April 1, 2023
Caste certificate ಅಲ್ಲ#ಹೊಯ್ಸಳ@Dhananjayaka @amrutha_iyengar
ಬಲಿ ಆಗಿ @Nwinshankar ಅತ್ತ್ಯುತ್ತಮ#ಜಾತಿ #ಪ್ರೀತಿ #ಕನ್ನಡ #ಪೊಲೀಸ್ ಚರ್ಚಾ ವಿಷಯಗಳ ಪೈಸಾವಸೂಲ್ ಚಿತ್ರ
ನಿರ್ದೇಶಕ ಸಂಗೀತ ಛಾಯಾಗ್ರಹಣ #production ಎಲ್ಲವು ಉತ್ತಮ #ಶುಭಾಶಯಗಳು @Karthik1423 @vijaycinephilia
ಗುರುದೇವ್ ಹೊಯ್ಸಳಗೆ ಅಭಿನಂದನೆಗಳು.. "ಇಷ್ಟು ಒಳ್ಳೆಯ ಕಥೆಯನ್ನು ನಮಗೆ ನೀಡಿದ ಗುರುದೇವ್ ಹೊಯ್ಸಳಗೆ ಅಭಿನಂದನೆಗಳು. ಡಾಲಿ ಧನಂಜಯ್, ಕಾರ್ತಿಕ್. ಯೋಗಿ ರಾಜ್, ಅಮೃತಾ ಅಯ್ಯಂಗಾರ್, ಕೆಆರ್ಜಿ ಸ್ಟುಡಿಯೋಸ್, ನವೀನ್ ಶಂಕರ್ ಮತ್ತು ಇಡೀ ತಂಡಕ್ಕೆ ಕಂಗ್ರಾಜುಲೇಷನ್ಸ್" ಎಂದು ನಟಿ ಸಪ್ತಮಿ ಗೌಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಗುರುದೇವ್ ಹೊಯ್ಸಳ ವಿಭಿನ್ನ.. "ಮೇಲ್ನೋಟಕ್ಕೆ ಮಾಮೂಲಿ ಪೊಲೀಸ್ ಸಿನಿಮಾ ಎನಿಸಿದರೂ, ಒಳಗಿರುವ ಒಂದು ಸೂಕ್ಷ್ಮ ವಿಚಾರ ಗುರುದೇವ್ ಹೊಯ್ಸಳ ಸಿನಿಮಾವನ್ನು ವಿಭಿನ್ನವಾಗಿಸಿದೆ. ಗುರುದೇವ್ ಹೊಯ್ಸಳನಾಗಿ ಡಾಲಿ ಧನಂಜಯ್ ಮತ್ತು ಬಾಲಿಯಾಗಿ ನವೀನ್ ಶಂಕರ್ ಅತ್ಯುತ್ತಮ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು" ಎಂದು ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಭಾರತದ ಮೈಕಲ್ ಜಾಕ್ಸನ್' ಪ್ರಭು ದೇವ ಕನ್ನಡ ಹೇಗಿದೆ? ಇಂದು ಸಂಜೆ ವೀಕೆಂಡ್ ವಿತ್ ರಮೇಶ್ ಶೋ ನೋಡಿ!
ಗುರುದೇವ್ ಹೊಯ್ಸಳ ಚಿತ್ರವನ್ನು ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಿಸಿದ್ದಾರೆ. ವಿಜಯ್ ಅವರ ನಿರ್ದೇಶನವಿದ್ದು, ಅಜನೀಶ್ ಲೋಕನಾಥ್ ಸಂಗೀತವಿದೆ. ಖಡಕ್ ಡೈಲಾಗ್ಗಳನ್ನು ಮಾಸ್ತಿ ಅವರು ಬರೆದಿದ್ದು, ಕಾರ್ತಿಕ್ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಡಾಲಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಮುಂತಾದವರು ಇದ್ದಾರೆ.
ಇದನ್ನೂ ಓದಿ: ಶಿವಾಜಿ ಸುರತ್ಕಲ್ 2 ಟ್ರೇಲರ್ ರಿಲೀಸ್: ಹೆಚ್ಚಿದ ಕುತೂಹಲ, ಏ.14ಕ್ಕೆ ಸಿನಿಮಾ ತೆರೆಗೆ