ETV Bharat / entertainment

ನೀವು ಸಾಕಿದ, ಬೆಳೆಸಿದ ದ್ವಾರಕೀಶ್ ಗಟ್ಟಿಮುಟ್ಟಾಗಿದ್ದೇನೆ.. ಸಾವಿನ ವದಂತಿಗೆ ಕರುನಾಡ ಕುಳ್ಳನ ಪ್ರತಿಕ್ರಿಯೆ ​

ನಟ ದ್ವಾರಕೀಶ್​ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ. ನಮಗೆ ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಅವರ ಮಗ ಯೋಗಿ ದ್ವಾರಕೀಶ್​ ಬೇಸರದಿಂದ ಈಟಿವಿ ಭಾರತ ಜೊತೆ ಹೇಳಿಕೊಂಡರು.

dwarakish
ದ್ವಾರಕೀಶ್​
author img

By

Published : May 1, 2023, 5:48 PM IST

ಕರ್ನಾಟಕದ ಕುಳ್ಳ​ ಇನ್ನಿಲ್ಲ! ವದಂತಿಗೆ ಸ್ಪಷ್ಟನೆ ನೀಡಿದ ದ್ವಾರಕೀಶ್​

'ಕರ್ನಾಟಕದ ಕುಳ್ಳ' ಎಂದೇ ಕರೆಸಿಕೊಂಡು ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ದ್ವಾರಕೀಶ್. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದ್ವಾರಕೀಶ್​ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಸಿನಿಮಾದ ಜೊತೆಗೆ ಸಾಕಷ್ಟು ನಟ, ನಟಿಯರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದಾರೆ. ಇಂತಹ ಒಬ್ಬ ಅದ್ಭುತ ಕಲಾವಿದ​ ಇನ್ನಿಲ್ಲ ಎಂಬ ಸುಳ್ಳು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ರೀತಿಯ ಸುದ್ದಿ ಸ್ವತಃ ದ್ವಾರಕೀಶ್​ ಮತ್ತು ಅವರ ಕುಟುಂಬಕ್ಕೆ ನೋವುಂಟು ಮಾಡುತ್ತಿದೆ.

ನಿನ್ನೆಯಷ್ಟೇ ಸರಿಯಾಗಿ ತಿಳಿದುಕೊಳ್ಳದ ಅವಿವೇಕಿಗಳು ಸೋಷಿಯಲ್ ಮೀಡಿಯಾದಲ್ಲಿ ದ್ವಾರಕೀಶ್ ಫೋಟೋ ಹಾಕಿ ಸಂತಾಪ ಸೂಚಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲ, ಕೆಲ ಯೂಟ್ಯೂಬರ್ಸ್​ ಕೂಡ ದ್ವಾರಕೀಶ್ ನಿಧನ ಹೊಂದಿದ್ದಾರೆ ಎಂಬ ವದಂತಿ ಹಬ್ಬಿಸಿದ್ದಾರೆ. ಈ ವಿಚಾರವಾಗಿ ದ್ವಾರಕೀಶ್ ಅವರ ಮಗ ಯೋಗಿ ದ್ವಾರಕೀಶ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ತುಂಬಾನೇ ಬೇಸರದಿಂದ ಮಾತನಾಡಿದ್ದಾರೆ.

ನಮ್ಮ ತಂದೆ ಬಗ್ಗೆ ಯಾರೋ ಯಾವುದೋ ಕಾರಣಕ್ಕೆ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ನಮ್ಮ ತಂದೆ ಸಿನಿಮಾಗಳನ್ನು ನಿರ್ಮಾಣ ಮಾಡ್ತಾ ಇಲ್ಲಾ. ಆದರೆ ಒಂದು ಕಾಲದಲ್ಲಿ ಬಿಗ್ ಬಜೆಟ್ ಹಾಗೂ ದೊಡ್ಡ ದೊಡ್ಡ ನಟರ ಸಿನಿಮಾಗಳನ್ನು ಮಾಡಿರುವ ಖ್ಯಾತಿ ಅವರದ್ದು. ಅಂತಹ ವ್ಯಕ್ತಿ ಬಗ್ಗೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ ಎಂದು ಯೋಗಿ ದ್ವಾರಕೀಶ್ ಹೇಳಿದ್ದಾರೆ.

ಇದನ್ನೂ ಓದಿ: ನಿರ್ಮಾಪಕಿಯಾದ ನಿವೇದಿತಾ; ವಂಶಿ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಹಣ ಹೂಡಿದ ಶಿವಣ್ಣನ ಪುತ್ರಿ

ನಮ್ಮ ತಂದೆ ಸಾವಿನ ಬಗ್ಗೆ ಹರಿದಾಡುತ್ತಿರುವ ವದಂತಿ ಇದೇ ಮೊದಲಲ್ಲಾ. ಕೊರೊನಾ ಸಮಯದಲ್ಲೂ ದ್ವಾರಕೀಶ್ ತೀರಿಕೊಂಡರು ಅಂತಾ ಸುದ್ದಿಯಾಗಿತ್ತು. ಅದನ್ನು ಕಂಡ ನಮ್ಮ ತಂದೆ ದೇವರ ಬಾಗಿಲ ಬಳಿ ಕುಳಿತುಕೊಂಡು ದ್ವಾರಕೀಶ್ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಸ್ವತಃ ತಾವೇ ಸ್ಪಷ್ಟನೇ ನೀಡಿದ್ದರು. ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ ಅಂತಾ ಹೇಳಿದ್ದರು.

ಇದೀಗ ನಿನ್ನೆ ಕೂಡ ಮತ್ತೆ ಅದೇ ರೀತಿಯ ಸುಳ್ಳು ವದಂತಿಗಳನ್ನು ಹಬ್ಬಿಸಲಾಗಿದೆ ಎಂದ ಯೋಗಿ ದ್ವಾರಕೀಶ್, ನಮಗೆ ನೆಮ್ಮದಿಯಾಗಿ ಬದುಕಲು ಬಿಡಿ ಅಂತ ಬೇಸರದಿಂದ 'ಈಟಿವಿ ಭಾರತ'ದೊಂದಿಗೆ ಮಾತನಾಡುವಾಗ ಮನವಿ ಮಾಡಿದರು. ಜೊತೆಗೆ ಇಂತಹ ಸುಳ್ಳು ಸುದ್ದಿಗೆ ಸ್ವತಃ ದ್ವಾರಕೀಶ್ ವಿಡಿಯೋ ಮೂಲಕ​ ಸ್ಪಷ್ಟನೆ ನೀಡಿದ್ದು, ನೀವು ಸಾಕಿ ಬೆಳೆಸಿದ ದ್ವಾರಕೀಶ್ ಚೆನ್ನಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಸದ್ಯ ನಾನು ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲ. ನಗ್ತಾ ಇದ್ದೀನಿ. ನಿಮ್ಮ ಪ್ರೀತಿ, ವಿಶ್ವಾಸ ಮುಂದುವರಿಯಲಿ. ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ನನಗೆಲ್ಲವೂ ಆಗಿರುವ ನಿನಗೆ ಹ್ಯಾಪಿ ಬರ್ತ್​ಡೇ': ಸರಣಿ ಫೋಟೋ ಹಂಚಿಕೊಂಡು ಪತ್ನಿಗೆ ವಿಶ್​ ಮಾಡಿದ ವಿರಾಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.